ಪುಟ:ಬಾಳ ನಿಯಮ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುದುಕರ ಮಂಡಳಿ ಬೆಳೆದಿದ್ದ ಭಾರಿ ಇಂಡಿಯನ್, ಬಿಳೀ ಮನುಷ್ಯರಂತೆಯೆ ಬಟ್ಟೆಗಳನ್ನು ಹಾಕಿದ್ದನು. ಅಗಲವಾದ ಟೊಪ್ಪಿಗೆಯನ್ನು ಧರಿಸಿದ್ದನು. ಒಳನಾಡು ಭಾಷೆಯ ಸೂಕ್ಷ್ಮ ಪರಿಚಯ ಮಾತ್ರ ಅವನಿಗಿತ್ತು. ಮಧ್ಯೆ ಮಧ್ಯೆ ನಿಲ್ಲಿ ಸುತ್ತಾ, ಎಳೆದೆಳೆದು ಇಂಬರ್‌ನ ಜೊತೆ ಮಾತನಾಡಿದನು. “ಅವನು ವೈಟ್ ಫಿಶ್ ಮನುಷ್ಯ....ಬಿಳಿಯರ ಮುಖಂಡನನ್ನು ನೋಡ ಬೇಕಂತೆ' ಎಂದು ಜಿಮ್ಮಿ ಎಮಿಲಿಗೆ ಹೇಳಿದನು. “ಗವರ್ನರನ್ನು ನೋಡಬೇಕೊ” ಎಂದನು ಡಿಕನ್ಸನ್, ಜಿಮ್ಮಿ ಇನ್ನೂ ಸ್ವಲ್ಪ ಹೊತ್ತು ಇಂಬರ್‌ನ ಜೊತೆ ಸಂಭಾಷಿಸಿದನು. ಆದರೆ ಜಿಮ್ಮಿಯ ಮುಖ ಏಕೋ ಸಂಶಯಭಾವವನ್ನು ಸೂಚಿಸಿತು. ಅವನು ಕಕ್ಕಾಬಿಕ್ಕಿಯಾದನು. “ಅವನು ಕ್ಯಾಪ್ಟನ್ ಅಲೆಕ್ಸಾಂಡರ್‌ನನ್ನು ನೋಡಬೇಕೆಂದು ಕಾಣುತ್ತೆ. ಬಿಳಿಯ ಜನಾಂಗದ ಎಷ್ಟೋ ಪುರುಷರು, ಹೆಂಗಸರು, ಮಕ್ಕಳನ್ನು ಕೊಂದ ನಂತೆ. ಈಗ ತಾನು ಸಾಯಬೇಕಂತೆ !” ಎಂದು ಜಿಮ್ಮಿ ವಿವರಿಸಿದನು. ಡಿಕನ್ಸನ್ ಹೇಳಿದನು: “ಹುಚ್ಚನಿರಬಹುದು ಎಂದು ನನಗೆ ತೋರುತ್ತೆ.” ಇದ್ದರೂ ಇರಬಹುದು....” ಎಂದು ಜಿಮ್ಮಿ ಇಂಬ‌ನ ಕಡೆ ತಿರುಗಿ ದನು. ಬಿಳಿಯರ ಮುಖಂಡನನ್ನು ನೋಡಬೇಕೆಂದು ಇಂಬರ್ ಒಂದೇ ಹಟ ಹಿಡಿದನು. ಅಷ್ಟು ಹೊತ್ತಿಗೆ ಒಬ್ಬ ಪೋಲೀಸು ಸವಾರ ಗುಂಪಿನಲ್ಲಿ ಸೇರಿದ. ಕಾಂಡೈಕ್‌ನಲ್ಲಿ ಕುದುರೆಯ ಮೇಲೆ ಹೋಗುವ ಅವಶ್ಯಕತೆಯಿರಲಿಲ್ಲ. ಆದ ರಿಂದ ನಡೆದುಕೊಂಡೇ ಬಂದಿದ್ದ. ಇಂಬರನ ಹಟ ಅವನಿಗೂ ತಿಳಿಯಿತು. ಪೋಲೀಸಿನವನು ಗಟ್ಟಿಮುಟ್ಟಾದ ಯುವಕ, ಅವನ ಭುಜಗಳು ವಿಶಾಲ ವಾಗಿದ್ದವು. ಕಾಲುಗಳನ್ನು ಸಡಲಿಸಿ ಹಾಕುತ್ತಿದ್ದನು. ಇಂಬರನಿಗಿಂತಲೂ ಅವನು ಎತ್ತರವಾಗಿದ್ದ, ವಂಶಾನುಗತವಾಗಿಯೂ, ಸಂಪ್ರದಾಯಕ್ಕನುಗುಣ ವಾಗಿಯೂ ಬಂದ ಶಕ್ತಿಯಲ್ಲಿ ಅವನಿಗೆ ವಿಶೇಷ ನಂಬಿಕೆ. ಅವನು ಇನ್ನೂ ಹುಡುಗ, ಮಿತಿಮಾರಿದ ಹುಡುಗತನ ಅವನ ಪೌರಷವನ್ನು ಹೆಚ್ಚಿಸಿತ್ತು. ಅವನ ನುಣಪಾದ ಕೆನ್ನೆ ಹುಡುಗಿಯರ ಕೆನ್ನೆಯಂತೆ ವಿವರ್ಣವಾಗುವ ಲಕ್ಷಣ ಹೊಂದಿತ್ತು, ತಕ್ಷಣ ಇಂಬರ್ ಅವನ ಬಗ್ಗೆ ಆಸಕ್ತಿ ವಹಿಸಿದನು, ಕೊಂಕು ಕತ್ತಿಯನ್ನು