ಪುಟ:ಬಾಳ ನಿಯಮ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

No ಬಾಳ ನಿಯಮ ನೋಡಿ ಕಿಡಿ ಕಾರಿದನು. ಅಂಥದೇ ಕತ್ತಿ ತನ್ನ ಗಲ್ಲದ ಮೇಲೆ ಹಿಂದೊಮ್ಮೆ ಗಾಯ ಮಾಡಿತ್ತು. ನಮೆದುಹೋಗಿದ್ದ ಕೈಗಳನ್ನು ಆ ಯುವಕನ ಕಾಲುಗಳ ಮೇಲೆ ಆಡಿಸಿ, ಊದಿದ್ದ ಮಾಂಸಖಂಡಗಳನ್ನು ಸವರಿದನು. ಗೆಣ್ಣುಗಳಿಂದ ವಿಶಾಲ ಎದೆಗೆ ತಟ್ಟಿದನು. ಭುಜದ ರಕ್ಷಣೆಗಾಗಿ ಹಾಕಿದ್ದ ಮೆತ್ತೆ ಕಾಸನ್ನು ಒತ್ತಿದನು. ಕುತೂಹಲದಿಂದ ದಾರಿಹೋಕರು ಗುಂಪು ಸೇರುತ್ತಾ ಬಂದರು ದೃಢಕಾಯರಾದ ಗಣಿಕೆಲಸದವರು, ಪರ್ವತ ನಿವಾಸಿಗಳು, ಮತ್ತು ಗಡಿನಾಡಿ ನವರು ; ಉದ್ದ ಕಾಲಿನ, ವಿಶಾಲಭುಜದ ತಳಿಯ ಮಕ್ಕಳು, ಇತ್ಯಾದಿ. ಇಂಬರ್ ಎಲ್ಲರ ಮುಖವನ್ನೂ ನೋಡುತ್ತ ವೈಟ್ ಫಿಶ್ ಭಾಷೆಯಲ್ಲಿ ಜೋರಾಗಿ ಮಾತನಾಡಿದನು. “ ಅವನು ಏನು ಹೇಳಿದನು ? ” ಎಂದು ಡಿಕನ್ಸನ್ ಕೇಳಿದನು. “ ಅವನು ಹೇಳುವಂತೆ, ಈ ಪೋಲೀಸಿನವನು ಒಬ್ಬ ಮಾತ್ರ ತನ್ನವ ರಂತೆ ಇದ್ದಾನಂತೆ....” ಎಂದು ಜಿಮ್ಮಿ ತಿಳಿಸಿದನು. ಪ್ರಶ್ನೆಯನ್ನು ಕೇಳಿದ್ದೇ ತಪ್ಪಾಯಿತೆಂದು ಡಿಕನ್ಸನ್ ಭಾವಿಸಿದನು. ತಾನೇನೋ ಚಿಕ್ಕವನು ; ಆದರೆ ಮಿಸ್ ಟ್ರಾವಿಸ್ ಬಗ್ಗೆ ಏನು ಹೇಳುತ್ತಾನೆ ?.... ಪೋಲೀಸಿನವನು ಕನಿಕರಪಟ್ಟು ಗುಂಪಿನ ಮಧ್ಯೆ ಪ್ರವೇಶಿಸಿದನು. “ ಅವನ ಮಾತುಕಥೆಯಲ್ಲಿ ಏನೋ ಅಡಗಿರಬೇಕೆಂದು ನನ್ನ ಊಹೆ. ಪರೀಕ್ಷೆ ಗಾಗಿ ಕ್ಯಾಸ್ಟನ್ನಿನ ಬಳಿ ಕರೆದುಕೊಂಡು ಹೋಗುತ್ತೇನೆ, ನನ್ನೊಡನೆ ಬರುವಂತೆ ಹೇಳು, ಜಿಮ್ಮಿ....” ಎಂದನು. ಜಿಮ್ಮಿ ಕಷ್ಟ ಪಟ್ಟು ಮಾತನಾಡಿದನು. ಇಂಬರ್‌ ತೃಪ್ತಿಯನ್ನು ಸೂಚಿಸಿ ದಂತಿತ್ತು. “ ಆದರೆ ನನ್ನ ಕೈಗಳನ್ನು ಮೇಲೆತ್ತಿದಾಗ, ಅವನು ಏನು ಹೇಳಿದನಂತೆ? ಅದನ್ನು ಕೇಳು, ಜಿಮ್ಮಿ....” ಎಂದಳು ಎಮಿಲಿ ಟ್ರಾವಿಸ್‌, ಜಿಮ್ಮಿ ಆ ಪ್ರಶ್ನೆಯನ್ನು ಇಂಬರನ ಭಾಷೆಗೆ ಪರಿವರ್ತಿಸಿ ಉತ್ತರ ದೊರಕಿಸಿಕೊಂಡನು. “ ಅವನು ಹೇಳುತ್ತಾನೆ, ನೀನು ಹೆದರುವವಳಲ್ಲ....” ಎಮಿಲಿ ಟ್ರಾವಿಸ್‌ಗೆ ಸಂತೋಷವಾಯಿತು. “ ನೀನು ಶಕ್ತಿವಂತಳಲ್ಲ. ಚಿಕ್ಕ ಮಗುವಿನಂತೆ ಮೃದುವಾಗಿರುವೆ. ತನ್ನ ಎರಡು ಕೈಗಳಿಂದ ನಿನ್ನನ್ನು ಪುಡಿ ಮಾಡಬಹುದು ಎಂದು ಅವನು ಹೇಳುತ್ತಾನೆ. ಮತ್ತೆ ಅವನಿಗೆ ಆಶ್ಚರ್ಯವೇನೆಂದರೆ, ಹೀಗಿರುವ ನೀನು