ಪುಟ:ಬಾಳ ನಿಯಮ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುದುಕರ ಮಂಡಲಿ ಪೋಲೀಸಿನವನಂಥ ದೊಡ್ಡ ಆಕೃತಿಯ ಮತ್ತು ಶಕ್ತಿಯುತರಾದ ಮನುಷ್ಯರ ತಾಯಿಯಾಗುವ ಬಗೆ ಹೇಗೆ? ಎಂದು....” ಎಮಿಲಿ ಟ್ರಾವಿಸ್ ಹಿಂಜರಿಯದೆ ಒಂದೇ ಸಮನೆ ನೋಡಿದಳು. ಆದರೆ ಕೆನ್ನೆಗಳು ಕೆಂಪಾದವು. ಕಿರಿಯ ಡಿಕನ್ಸನ್ ಸಂದಿಗ್ಧ ಸ್ಥಿತಿಯಲ್ಲಿ ಸಿಕ್ಕಿ ಕೊಂಡಂತೆ ವಿವರ್ಣನಾದನು. ಚಿಕ್ಕ ವಯಸ್ಸಿನ ಉತ್ಸಾಹೀ ರಕ್ತದಿಂದ ಪೋಲೀಸಿನವನ ಮುಖ ಹೊಳೆಯಿತು. “ ನನ್ನೊಡನೆ ಬಾ,” ಎಂದು ಒರಟು ದನಿಯಲ್ಲಿ ಹೇಳಿ ಪೋಲೀಸಿನವನು ಕೈಗಳನ್ನು ಬೀಸುತ್ತಾ ಗುಂಪಿನಲ್ಲಿ ದಾರಿಬಿಡಿಸಿಕೊಂಡು ಹೊರಟನು. * ಈ ರೀತಿ ಇಂಬರ್ ದಂಡಿನ ಪಾಳೆಯಕ್ಕೆ ಬಂದು ಸೇರಿದನು. ಅಲ್ಲಿಯೇ ಅವನು ತನ್ನ ಸಂಪೂರ್ಣ ತಪ್ಪುಗಳನ್ನು ಒಪ್ಪಿಕೊಳ್ಳುವ ಹೇಳಿಕೆಯನ್ನು ಕೊಟ್ಟಿದ್ದು, ಆ ಆವರಣದಿಂದ ಅವನು ಹೊರಕ್ಕೆ ಬರಲೇ ಇಲ್ಲ.... ಇಂಬರ್ ತುಂಬ ಸುಸ್ತಾಗಿದ್ದನು. ವಯಸ್ಸಿನ ಮತ್ತು ನಿರಾಶೆಯ ಪರಿಣಾಮ ಮುಖದಲ್ಲಿ ಎದ್ದು ಕಾಣುತಿತ್ತು. ಭುಜಗಳು ಕುಸಿದು ಬಿದ್ದಿದ್ದವು. ಕಣ) ಗಳಲ್ಲಿ ಕಾಂತಿಯಿರಲಿಲ್ಲ. ಮುದುಕನ ದಟ್ಟವಾದ ಕೂದಲು ಸ್ವಾಭಾವಿಕ ವಾಗಿ ಬೆಳ್ಳಗಿರಬೇಕಿತ್ತು. ಆದರೆ ವಾಯುಗುಣದ ವೈವಿಧ್ಯತೆಯಿಂದ ಮತ್ತು ಸೂರ್ಯನ ಪ್ರಭಾವದಿಂದ ಸುಟ್ಟು ಬಿಗುವಿಲ್ಲದೆ ಬಣ್ಣವನ್ನೇ ಕಳೆದುಕೊಂಡು ನೇತಾಡುತಿತ್ತು. ಸುತ್ತಲಿನ ವ್ಯವಹಾರದಲ್ಲಿ ಅವನಿಗೆ ಆಸಕ್ತಿಯೇ ಇರಲಿಲ್ಲ. ವಿಚಾರಣಾ ಮಂದಿರದಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಸ್ಥಳೀಯ ರಲ್ಲದೆ, ಬೆಟ್ಟಗಳ ನಡುವೆ ಇಕ್ಕಟ್ಟಾದ ಸಮಭೂಮಿಯಲ್ಲಿ ವಾಸಿಸುತ್ತಿದ್ದ ಜನರೂ ಬಂದಿದ್ದರು. ಅವರ ಗುಜು ಗುಜು ಮಾತಿನಲ್ಲಿ ಎಷ್ಟೋ ಅಶುಭದ ವಾರ್ತೆಗಳು ಕೇಳಿ ಬರುತಿದ್ದುವು. ಆದರೆ ಅವು ಇಂಬರನ ಕಿವಿಗೆ ಅಸ್ಪಷ್ಟವಾಗಿದ್ದುವು. ಆಳವಾದ ಗುಹೆಯಲ್ಲಿ ಕೇಳಿಸುವ ಸಮುದ್ರದ ಘೋಷವಂತಿತ್ತು. ಕಿಟಕಿಯ ಹತ್ತಿರ ಅವನು ಕುಳಿತಿದ್ದನು. ಕಾಂತಿಹೀನ ಕಣ್ಣು ಗಳು ಬೇಸರದ ಹೊರವಾತಾವರಣವನ್ನು ವೀಕ್ಷಿಸಿದವು. ಆಕಾಶವನ್ನು ಮೋಡ ಅವರಿ ಸಿತ್ತು, ತುಂತುರು ಹನಿ ಬೀಳುತಿತ್ತು. ಆಗ ಕಾನ್ ನದಿಯಲ್ಲಿ ಪ್ರವಾಹ ಬರುತಿದ್ದ ಕಾಲ. ಮಂಜು ಹೋಗಿತ್ತು. ನದಿ ನಗರಕ್ಕೆ ನುಗ್ಗಿತ್ತು. ಎದುರಿನ ಮುಖ್ಯ ಬೀದಿಯಲ್ಲಿಯೇ ನೀರು ಹರಿಯತೊಡಗಿತ್ತು. ಅದರ ಮೇಲೆ ಸಣ ದೋಣಿಗಳಲ್ಲಿ ಹಿಂದು ಮುಂದೆ ವಿಶ್ರಾಂತಿಯಿಲ್ಲದ ಜನ ಹಾದುಹೋದರು.