ಪುಟ:ಬಾಳ ನಿಯಮ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಪ್ರವಾಹದಿಂದ ಮರೆಯಾಗಿದ್ದ ದಂಡಿನ ಪೆರೇಡ್ ' ಜಾಗಕ್ಕೆ ದೋಣಿಗಳು ಬಂದು ಸೇರುತ್ತಿದ್ದವು. ಎಷ್ಟೋ ವೇಳೆ ತನ್ನ ಹತ್ತಿರವೇ ಬಂದು ಕಣ್ಮರೆ ಯಾಗುತ್ತಿದ್ದ ದೋಣಿಗಳನ್ನು ಇಂಬರ್ ಕಂಡನು. ಅವು ಮರದ ಮನೆಗಳಿಗೆ ಡಿಕ್ಕಿ ಹೊಡೆದಾಗ, ನಿವಾಸಿಗಳು ತೆವಳಿಕೊಂಡು ಕಿಟಕಿಯ ಮೂಲಕ ಬರು ತಿದ್ದರು. ಮೇಲಿನ ಮೆಟ್ಟಿಲುಗಳನ್ನು ಹತ್ತುವಾಗಲೂ ನೀರಿನ ಹೊಡೆತದಿಂದ ಕಾಲುಗಳು ಎಳೆಯಲ್ಪಡುತ್ತಿದ್ದುವು. ಕಡೆಗೆ ಟೋಪಿಯಿಲ್ಲದೆ, ತೊಟ್ಟಿಕ್ಕುವ ಬೂಟುಗಳನ್ನು ಹಾಕಿಕೊಂಡು ಕಾಯುತಿದ್ದ ಗುಂಪುಗಳಿಗೆ ಅಧಿಕ ಸಂಖ್ಯೆಯಲ್ಲಿ ಜನ ಸೇರುತ್ತಾ ಬಂದರು. ಎಲ್ಲರ ದೃಷ್ಟಿಯೂ ಇಂಬರನ ಮೇಲೆ ಕೇಂದ್ರೀಕೃತವಾಗಿತ್ತು. ಅವನು ಮುಂದೆ ಪಡಬಹುದಾದ ಶಿಕ್ಷೆಯ ಭಯಂಕರ ನಿರೀಕ್ಷಣೆಯಲ್ಲೇ ಜನ ತೃಪ್ತ ರಾಗಿದ್ದರು. ಇಂಬರ್‌ ಕೂಡ ಅವರ ಕಡೆ ನೋಡಿದನು. ಆ ಜನರ ರೀತಿ ನೀತಿ ಗಳ ಬಗ್ಗೆ ಯೋಚಿಸಿದನು....ನಿರಂತರವಾಗಿ ಸಾಗುತ್ತಿರುವ ಇವರ ನ್ಯಾಯ ವಿಧಾನಗಳಿಗೆ ಸ್ವಲ್ಪವೂ ವಿಶ್ರಾಂತಿಯಿಲ್ಲ ; ಒಳ್ಳೆಯ ಅಥವಾ ಕೆಟ್ಟ ಕಾಲವಿರಲಿ, ಕ್ಷಾಮ ಅಥವಾ ಪ್ರವಾಹವಿರಲಿ, ಕಷ್ಟ, ಭಯ ಮತ್ತು ನಾವುಗಳಿರಲಿ.... ಯಾವುದನ್ನೂ ಲಕ್ಷಿಸುವುದಿಲ್ಲ. ಏಕೆ ? ಆಜೀವಪಠ್ಯಂತ ಈ ಜನರ ವಿಚಿತ್ರ ವಿಚಾರಣ ಕ್ರಮ ಇದ್ದೇ ಇರುತ್ತದೆ..... ಒಬ್ಬಾತ ಮೇಜನ್ನು ಬಲವಾಗಿ ಕುಟ್ಟಿದನು. ಗಲಾಟೆ ನಿಂತು ನಿಶ್ಯಬ್ಬ ವಾಯಿತು. ಇಂಬರ್ ಆ ಮನುಷ್ಯನನ್ನು ನೋಡಿದನು. ಅವನು ಅಧಿಕಾರ ಚಲಾಯಿಸುವವರ ಗುಂಪಿನವನಿರಬೇಕು. ಡೆಸ್ಸಿನ ಹಿಂದೆ ಕುಳಿತಿದ್ದ ಅಗಲ ವಾದ ಹಣೆಯುಳ್ಳವನು ಎಲ್ಲರಿಗೂ ಮೇಲಾದ ಮುಖ್ಯಾಧಿಕಾರಿಯಿರಬಹು ದೆಂದು ಊಹಿಸಿದನು. ಅದೇ ಮೇಜಿನ ಬಳಿ ಕುಳಿತಿದ್ದ ಮತ್ತೊಬ್ಬ ವ್ಯಕ್ತಿ ಎದ್ದು ನಿಂತು ಒಳ್ಳೆಯ ಕಾಗದಗಳಲ್ಲಿ ಬರೆದಿದ್ದ ಏನನ್ನೋ ಓದತೊಡಗಿದನು. ಪ್ರತಿಯೊಂದು ಕಾಗದವನ್ನೂ ಓದಲು ಆರಂಭಿಸಿದಾಗ ಗಂಟಲು ಸರಿಮಾಡಿ ಕೊಳ್ಳುತಿದ್ದನು. ಹಾಗೆಯೇ ಮುಗಿದಾಗ ಬೆರಳು ಚೀಪುತ್ತಿದ್ದನು. ಆತನ ಭಾಷಣ ಇಂಬರನಿಗೆ ಅರ್ಥವಾಗಲಿಲ್ಲ. ಇತರರಿಗೆ ಗೊತ್ತಾಗುತಿತ್ತು. ಅವರ ಮುಖಗಳನ್ನು ನೋಡಿದರೆ ವಿಪರೀತ ಕೋಪಗೊಂಡಂತಿತ್ತು. ಒಬ್ಬನಂತೂ ಉದ್ವೇಗದಿಂದ ಸಣ್ಣ ಮಾತುಗಳನ್ನೂ ಚುಚ್ಚು ನುಡಿಗಳನ್ನೂ ಹಾರಿಸಿದನು. ಕಡೆಗೆ ಅವನನ್ನು ಸುಮ್ಮನಾಗಿಸಲು ಮೇಜಿನ ಬಳಿ ಕುಳಿತಿದ್ದವನೇ ಪ್ರಯಾಸ ಪಟ್ಟನು.