ಪುಟ:ಬಾಳ ನಿಯಮ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುದುಕರ ಮಂಡಳಿ ಅಂತೂ ಆ ವ್ಯಕ್ತಿ ಬೇಸರ ಹಿಡಿಸುವಷ್ಟು ಧೀರ್ಘಕಾಲ ಓದಿದನು. ಒಂದೇ ಜಾಡಿನ ಶಬ್ದಗಳು ಇಂಬರನಿಗೆ ನಿದ್ದೆ ತರುತಿದ್ದುವು. ಅವನು ಮುಗಿ ಸುವ ಹೊತ್ತಿಗೆ ಇಂಬರ್ ಸಂಪೂರ್ಣವಾಗಿ ಕನಸುಕಾಣುತಿದ್ದನು. ಆಗ ತನ್ನ ವೈಟ್ ಫಿಶ್ ಭಾಷೆಯಲ್ಲೇ ಒಂದು ಧ್ವನಿ ಕೇಳಿಸಿತು. ತಕ್ಷಣ ಎದ್ದು ನಿಂತನು. ಆಶ್ಚರ್ಯವೇನೂ ಆಗಲಿಲ್ಲ. ಏಕೆಂದರೆ ಮಾತನಾಡುತಿದ್ದವನು ಹೊಸಬನಲ್ಲ ; ತನ್ನ ಸೋದರಿಯ ಮಗ ! ಎಷ್ಟೋ ವರ್ಷಗಳ ಹಿಂದೆ ಬಿಳಿಯರೊಡನೆ ವಾಸಿ ಸಲು ಅವನು ಪರಾರಿಯಾಗಿದ್ದ, (ಇಂಬರ್, ನಿನಗೆ ನನ್ನ ಜ್ಞಾಪಕವಿಲ್ಲವೇ ?” ಎಂದನು. “ಒಳ್ಳೆಯದು ; ನೀನು ಓಡಿಹೋದ ಹೌಕಾನ್, ಅಲ್ಲವೇ ? ನಿನ್ನ ತಾಯಿ ಸತ್ತು ಹೋಗಿರಬೇಕು.....” ಎಂದು ಇಂಬರ್ ಉತ್ತರಕೊಟ್ಟನು. ಅವಳು ಮುದುಕಿಯಾಗಿದ್ದಳು” ಎಂವನು ಹೌಕಾನ್, ಇಂಬರ್‌ಗೆ ಕೇಳಿಸಲಿಲ್ಲ. ಆದರೆ ಹೌಕಾನ್ ಅವನ ಭುಜದ ಮೇಲೆ ಕೈ ಹಾಕಿ ಮತ್ತೆ ಎಬ್ಬಿಸಿದನು. * ಆ ಮನುಷ್ಯ ಓದುತಿದ್ದುದು ನೀನು ಮಾಡಿದ ತೊಂದರೆಗಳ ವರದಿಯನ್ನು ; ನೀನು ಕ್ಯಾಪ್ಟನ್ ಅಲೆಕ್ಸಾಂಡರನ ಬಳಿ ಹೇಳಿದ ವಿಷಯ ವನ್ನು, ನೀನೊಬ್ಬ ತಿಳಿಗೇಡಿ ! ಇಷ್ಟು ತಿಳಿದುಕೊ ; ನತ್ಯವಿದ್ದರೆ ಮಾತ್ರ ನಾಡು ; ಇಲ್ಲದಿದ್ದರೆ ಅಸತ್ಯವನ್ನು ಹೇಳಬೇಡ.....ಆ ರೀತಿ ಅಪ್ಪಣೆ ಯಾಗಿದೆ.....” ಹೌಕಾನ್ ಮಿಷನರಿಗಳ ಜೊತೆ ಸೇರಿ ಓದು ಬರಹ ಕಲಿತದ್ದನು. ಕೈಯಲ್ಲಿ ಕಾಗದಗಳನ್ನು ಹಿಡಿದಿದ್ದನು. ಆ ಕಾಗದಗಳಲ್ಲಿದ್ದುದನ್ನೇ ಹಿಂದೆ ಒಬ್ಬಾತ ಬೇಸರಹಿಡಿಸುವಷ್ಟು ಜೋರಾಗಿ ಓದಿದ್ದು....ಜಿಮ್ಮಿಯ ಮೂಲಕ ಇಂಬರ್ ಕ್ಯಾಪ್ಟನ್ ಅಲೆಕ್ಸಾಂಡರನ ಬಳಿ ಮಾತನಾಡಿದ್ದನು. ತನ್ನ ತಪ್ಪು ಗಳನ್ನು ಮೊದಲ ಬಾರಿಗೆ ಒಪ್ಪಿಕೊಂಡಿದ್ದನು. ಆ ಅಂಶಗಳನ್ನೇ ಗುಮಾ ಸ್ತನು ಕಾಗದದ ಮೇಲೆ ಬರೆದಿದ್ದನು. ಹೌಕಾನ್ ಓದುವುದಕ್ಕೆ ಪ್ರಾರಂಭಿಸಿದನು. ಇಂಬರ್ ಸ್ವಲ್ಪ ಹೊತ್ತು ಕೇಳಿದನು. ಆಶ್ಚರ್ಯಚಕಿತನಾಗಿ ಮಧ್ಯೆ ಬಾಯಿಹಾಕಿದನು. “ಹೌಕಾನ್, ಇದು ನನ್ನದೇ ಮಾತು. ಆದರೂ ನಿನ್ನ ನಾಲಿಗೆಯಿಂದ ಬರುತ್ತಿವೆ. ನಿನ್ನ ಕಿವಿಗಳು ಮಾತ್ರ ಕೇಳಿಯೇ ಇಲ್ಲ....” ಹೌಕಾನ್ ಸ್ವಪ್ರತಿಷ್ಟೆಯಿಂದ ನಕ್ಕನು. “ ಇಲ್ಲ, ಅದು ಕಾಗದದ