ಪುಟ:ಬಾಳ ನಿಯಮ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಮೂಲಕ ಬರುತ್ತಿದೆ. ಇಂಬರ್, ನನ್ನ ಕಿವಿ ಎಂದಿಗೂ ಕೇಳಿಲ್ಲ. ಕಾಗದ' ದಿಂದ ನನ್ನ ಕಣ್ಣಿನ ಮೂಲಕ ತಲೆಗೆ ಹೊಕ್ಕು, ನನ್ನ ಬಾಯಿಯ ಮೂಲಕ ನಿನಗೆ ಪ್ರಕಾಶವಾಗುತ್ತಿದೆ....” “ಹಾಗೇನು ? ಅಂದರೆ ನಾನು ಆಡಿದ ಮಾತು ಕಾಗದದ ಮೇಲಿ ದೆಯೇ ?...” ಎನ್ನುತ್ತಾ ಇಂಬರ್ ಆಶ್ಚರ್ಯದಿಂದ ಹೆಬ್ಬೆರಳಿನ ಮಧ್ಯೆ ಆ ಕಾಗದವನ್ನಿಟ್ಟು ನೋಡಿದನು. ಗೀಚಿದ್ದ ಅಕ್ಷರಗಳನ್ನು ದಿಟ್ಟಿಸಿ ನೋಡಿ ದನು. ಅವನಿಗೇನು ತಿಳಿಯುತ್ತೆ ?....ಇದು ದೊಡ್ಡ ಔಷಧಿ ಇರಬೇಕು. ಹೌಕಾನ್, ನೀನು ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡುತಿದ್ದೀಯೆ? “ಏನು ಇಲ್ಲ, ಏನೂ ಇಲ್ಲ....ಇದೇನು ದೊಡ್ಡದಲ್ಲ....” ಎಂದು ಯುವಕ ಹೌಕಾನ್ ನಿರ್ಲಕಭಾವದಿಂದ ಉತ್ತರಕೊಟ್ಟನು. ಮತ್ತೆ ಹೌಕಾನ್ ಓದಲಾರಂಭಿಸಿದನು: “ಹಿಮ ಬೀಳುವುದಕ್ಕಿಂತ ಮುಂಚೆ ಆ ವರ್ಷ ಒಬ್ಬ ಮುದುಕ ಮತ್ತು ಹುಡುಗ ಬಂದರು. ಹುಡುಗ ಒಂದು ಕಾಲಿಲ್ಲದ ಕುಂಟನಾಗಿದ್ದನು. ಅವರಿಬ್ಬರನ್ನೂ ಕೂಡ ನಾನೇ ಕೊಂದೆನು. ಮುದುಕ ತುಂಬ ಗಲಾಟೆ ಮಾಡಿದನು_ “ಅದು ನಿಜ;” ಎಂದು ಇಂಬರ್ ಮಧ್ಯೆ ಮಾತನಾಡಿದನು. ಉಸಿರು ಕಟ್ಟಿ ಹೇಳಿದನು: “ಅಬ್ಬ, ಅವನು ತುಂಬ ಕೂಗಾಡಿದನು. ಸಾಯುವು ದಕ್ಕೆ ಬಹಳ ಹೊತ್ತು ತೆಗೆದುಕೊಂಡ. ಆದರೆ ಆ ವಿಷಯ ನಿನಗೆ ಹೇಗೆ ಗೊತ್ತು, ಹೌಕಾನ್ ? ಬಿಳಿಯರ ಮುಖಂಡ ಹೇಳಿರಬಹುದು, ಅಲ್ಲವೇ ? ಅವನೊಬ್ಬನಿಗೆ ಮಾತ್ರ ನಾನು ತಿಳಿಸಿರುವುದು....” ಬೇಸರದಿಂದ ನೌಕಾನ್ ತಲೆಯಲ್ಲಾಡಿಸಿದನು. “ ಅಯ್ಯೋ ಪೆದ್ದೆ ! ಅದನ್ನು ಕಾಗದದ ಮೇಲೆ ಬರೆದಿದೆ ಎಂದು ನಿನಗೆ ಆಗಲೇ ಹೇಳಲಿಲ್ಲವೇ ? ” ಮಸಿಯಲ್ಲಿ ಗೀಚಿದ್ದ ಕಾಗದದ ವೈಖರಿಯನ್ನು ಇಂಬರ್ ಮತ್ತೆ ಕಂಡನು. * ಒಬ್ಬ ಬೇಟಗಾರ ಹಿಮಗುರುತನ್ನು ನೋಡಿ ಏನನ್ನೋ ಹೇಳಿದರೆ-ಅಂದರೆ, ಇಲ್ಲಿ ಒಂದು ಮೊಲ ಬಂದಿತ್ತು, ಅಲ್ಲಿ ಓಡಿತು, ಕೆಳಕ್ಕೆ ಬಿತ್ತು, ಆಗ ಹೊಟ್ಟೆ ಮೇಲಾಗಿದ್ದ ಅದರ ಮೇಲೆ ಲಿಂಕ್ಸ್ ಬೆಕ್ಕು ಹಾರಿತು, ಮೊಲ ಸತ್ತು ಲಿಂಕ್ ಒಂದಕ್ಕೆ ದಾರಿಯಾಯಿತು. ಅದನ್ನೂ ಕಾಗದದ ಮೇಲೆ ಇಳಿಸಿ. ನನ್ನ ಸಾಹಸವಂತೆಯೇ ಓದುತ್ತೀಯಾ, ಹೌಕಾನ್....” “ ಹೌದು ; ಮೊದಲು ನೀನು ಬಾಯಿಮುಚ್ಚು, ಮಾತನಾಡಬೇಕೆಂದು ಕರೆದಾಗ ಬಾಯಿಬಿಡು....” ಎಂದನು ಹೌಕಾನ್.