________________
ಮುದುಕರ ಮಂಡಳಿ ಇಂಬರನ ತನ್ನೊಪ್ಪಿಕೆಯನ್ನು ಹೌಕಾನ್ ಬಹಳ ಕಾಲದವರೆಗೆ ಓದಿದನು. ಇಂಬರ್ ಯೋಚಿಸುತ್ತ ಗಲಾಟೆಯಿಲ್ಲದೆ ಕುಳಿತಿದ್ದ ನು. ಕಡೆಗೆ ಅವನು ಹೇಳಿದನು : “ ಅವೆಲ್ಲವೂ ನನ್ನ ಮಾತುಗಳೇ ಹೌಕಾನ್, ಸತ್ಯವಾದದ್ದೇ, ಮರೆತುಹೋದ ಇನ್ನೂ ಕೆಲವು ವಿಷಯ ಜ್ಞಾಪಕಕ್ಕೆ ಬರುತ್ತಿದೆ. ಮುಖಂಡರಿಗೆ ಉಪಯೋಗವಾಗಬಹುದು. ಮೊದಲು....ಹಿಮ ಪರ್ವತಗಳ ಮೇಲೆ ಒಬ್ಬಾತ ಬಂದ. ಉಪಾಯದಿಂದ ಕಬ್ಬಿಣದ ಬೋನುಗಳನ್ನು ತಂದಿದ್ದ. ವೈಟ್ ಫಿಶ್ ಪ್ರದೇಶದ ಬೀವರ್ ಪ್ರಾಣಿ ಅವನಿಗೆ ಬೇಕಾಗಿತ್ತು. ಅವನನ್ನು ನಾನು ಕೊಂದೆ. ಆಮೇಲೆ ಮೂರು ಜನ ಚಿನ್ನಕ್ಕಾಗಿ ಬಂದರು. ಅವರನ್ನೂ ಕೊಂದು ತೋಳಗಳಿಗೆ ಆಹಾರಮಾಡಿಕೊಟ್ಟೆ. ಫೆನ್ ಫಿಂಗರ್ ನ ಬಳಿ ಒಬ್ಬ ಮನುಷ್ಯ ನೀರಿನಲ್ಲಿ ತೇಲಿಕೊಂಡು ಹೋಗಲು ಮರದ ದಿಮ್ಮಿಗಳನ್ನು ಒಟ್ಟಿಗೆ ಸೇರಿಸಿ ಕಟ್ಟಿದ್ದ. ಅಲ್ಲಿ ಬೇಕಾದಷ್ಟು ಮಾಂಸವೂ ಇತ್ತು....” ಈ ಹಿಂದಿನ ಜ್ಞಾಪಕವನ್ನು ತಂದುಕೊಳ್ಳಲು ಇಂಬರ್‌ಗೆ ಸ್ವಲ್ಪ ಕಾಲಾವ ಕಾಶ ಬೇಕಾಗುತಿತ್ತು. ಆ ಸಂದರ್ಭದಲ್ಲೇ ಹೌಕಾನ್ ಭಾಷಾಂತರಿಸುತಿ ದ್ದನು. ಗುಮಾಸ್ತೆಯೊಬ್ಬ ಅದನ್ನೆಲ್ಲ ಬರೆಯುತ್ತಿದ್ದನು. ಯಾವ ಹಿನ್ನೆಲೆಯೂ ಇಲ್ಲದ ಸಣ್ಣ ದುರಂತಗಳನ್ನು ಜನ ಅನುದ್ವೇಗದಿಂದ ಆಲಿಸಿದರು. ಕೆಂಪು ಕೂದಲಿನ ಮನುಷ್ಯನೊಬ್ಬ ಇಂಬರನ ಕಣ್ಣಿಗೆ ಬಿದ್ದು ಬಹು ದೂರದ ಹೊಡೆತದಿಂದಲೇ ಆಶ್ಚರ್ಯಕರವಾಗಿ ಕೊಲೆಮಾಡಲ್ಪಟ್ಟಿದ್ದನು. ಆ ಸಂಗತಿಯನ್ನು ಇಂಬರ್ ತಿಳಿಸಿದಾಗ, ಮುಂದಿನ ಸಾಲಿನಲ್ಲಿ ಕುಳಿತಿದ್ದ ಒಬ್ಬಾತ, “ ಇದೆಂಥ ಅನ್ಯಾಯ ! ” ಎಂದು ಕೂಗಿದನು. ಅವನ ಕೂದಲೂ ಕೆಂಪಾಗಿತ್ತು. ಮತ್ತೆ ' ಅನ್ಯಾಯ' ಎಂದು ಹೇಳುತ್ತಾ, “ ಕೊಲೆಯಾದವನು ನನ್ನ ಸೋದರ ಬಿಲ್ ” ಎಂದನು. ಅಂತೂ ನ್ಯಾಯಾಲಯದಲ್ಲಿ ಸಭೆ ಮುಗಿಯುವ ತನಕ ಅವನ ' ಇದೆಂಧ ಅನ್ಯಾಯ' ಎಂಬ ಶಬ್ದ ಮಧ್ಯೆ ಮಧ್ಯೆ ಕೇಳಿಬರುತ್ತಲೇ ಇತ್ತು. ಸ್ನೇಹಿತರು ಕೂಡ ಅವನನ್ನು ಸುಮ್ಮನಿರೆಂದು ಹೇಳಲಿಲ್ಲ. ಅಧಿಕಾರಿಯೂ ಕೂಡ ಆಜ್ಞೆ ಮಾಡಲಿಲ್ಲ. ಇಂಬರನ ತಲೆ ತೂಗಾಡುತಿತ್ತು. ಕಣ್ಣುಗಳು ಮಂಕಾದವು. ಯಾವುದೋ ಪರದೆ ಬಾಹ್ಯವಸ್ತುಗಳನ್ನು ಮುಚ್ಚಿದಂತಿತ್ತು. ವರ್ಷಗಳನ್ನು ಸೆಳೆದುಕೊಂಡು ಅತ್ಯಂತ ನಿರರ್ಥಕ ಬಾಳನ್ನು ನಡೆಸಿದ ಯೌವನದ ಬಗ್ಗೆ ಕನಸುಕಾಣುತಿದ್ದನು. ಹೌಕಾನ್ ಇಂಬರನನ್ನು ಮತ್ತೆ ಎಬ್ಬಿಸಿದನು. “ ಇಂಬರ್, ಎದ್ದು