ಪುಟ:ಬಾಳ ನಿಯಮ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ನಿಂತುಕೊ, ನೀನು ಏಕೆ ಇಷ್ಟು ಗಲಾಟೆಮಾಡಿದೆ, ಜನರನ್ನು ಕೊಲೆಮಾಡಿದೆ, ಮತ್ತು ಕಡೆಗೆ ಇಲ್ಲಿಯ ತನಕ ನ್ಯಾಯಾನ್ವೇಷಿಯಾಗಿ ಬರಲು ಕಾರಣವೇನು? ಇದಕ್ಕೆ ತಕ್ಕ ಉತ್ತರ ಕೊಡಬೇಕೆಂದು ಅಧಿಕಾರದ ಅಪ್ರಣೆಯಾಗಿದೆ” - ಇಂಬರ್ ಹಿಂದೆ ಮುಂದೆ ತೂರಾಡುತ್ತ ನಿಧಾನವಾಗಿ ಮೇಲೆದ್ದನು. ಅಸ್ಪಷ್ಟವಾಗಿ, ನಡುಗುವ ದನಿಯಿಂದ ಮೆಲ್ಲಗೆ ಮಾತುಗಳು ಹೊರಟವು. ಆದರೆ ಹೌಕಾನ್ ಮಧ್ಯೆ ಬಾಯಿಹಾಕಿ, “ಈ ಮುದಿಗೂಬೆಗೆ ಒಂದೇ ಗೀಳು ಹಿಡಿದಂತಿದೆ. ಅವನ ಮಾತೆಂದರೆ ಎಳೆಯ ಮಕ್ಕಳ ಮಾತಿನಂತೆ ದಡ್ಡತನದ್ದು.” ಎಂದು ಇಂಗ್ಲೀಷಿನಲ್ಲಿ ವಿಶಾಲವಾದ ಹುಬ್ಬುಗಳುಳ್ಳ ಮುಖ್ಯಾಧಿ ಕಾರಿಗೆ ಹೇಳಿದನು. - “ ಆಗಲಿ ; ಎಳೆಯ ಮಕ್ಕಳ ಮಾತಾದರೂ ಕೇಳೋಣ. ಅವನು ಹೇಳುತ್ತಿರುವಂತೆ ಪ್ರತಿಯೊಂದು ಪದಕ್ಕೂ ಹೆಚ್ಚು ಗಮನವಿಟ್ಟು ಆಲಿಸೋಣ. ನಿನಗೆ ಗೊತ್ತಾಯಿತೆ ?” ಎಂದನು ಆ ನೀಳವಾದ ಹುಬ್ಬುಗಳುಳ್ಳ ಮಹಾಪುರುಷ. ಇಂಬರನ ಕಣ್ಣುಗಳು ಮಿಂಚಿದವು. ತನ್ನ ಸೋದರಿಯ ಮಗ ಅಧಿಕಾರಿಯೊಡನೆ ಮಾತನಾಡಿದುದನ್ನು ಪ್ರತ್ಯಕ್ಷವಾಗಿಯೇ ನೋಡಿ ದಂತಾಯಿತು. '1 ಕ ಕಥೆ ಪ್ರಾರಂಭವಾಯಿತು. ಅದೊಂದು ವೀರಕಥನ, ಆ ರಾಷ್ಟ್ರೀಯ ವೀರನನ್ನು ಮುಂದಿನ ಜನಾಂಗ ನೆನೆದುಕೊಳ್ಳುವಂತೆ ಅವನ ಕಂಚಿನ ವಿಗ್ರಹವನ್ನು ಸ್ಥಿರವಾಗಿ ಸಾ ಪಿಸಬಹುದಿತ್ತು, * ಗುಂಪು ಇದ್ದಕ್ಕಿದ್ದಂತೆ ನಿಶ್ಯಬ್ದವಾಯಿತು. ವಿಶಾಲಹಣೆಯ ನ್ಯಾಯಾ ಧೀಶ ತಲೆಯಮೇಲೆ ಕೈಯಿಟ್ಟು, ತನ್ನ ಮತ್ತು ತನ್ನ ಜನಾಂಗದವರ ಆತ್ಮ ವನ್ನು ಕುರಿತು ಚಿಂತಿಸುತ್ತಿದ್ದನು. ಇಂಬರನ ಆಳವಾದ ಧ್ವನಿ, ಮಧ್ಯೆ ಮಧ್ಯೆ ಕೀರಲು ಧ್ವನಿಯ ದ್ವಿಭಾಷಿಯಿಂದ ಸ್ವರ ತರಂಗಗಳ ವಿರುದ್ದ ಪ್ರತಿಕ್ರಿಯೆ ಮತ್ತು ಅಧಿಕಾರಿಯ ಗಂಟೆಯ ಹೊಡೆತ, ಆಗಾಗ ಕೆಂಪು ಕೂದಲು ಮನುಷ್ಯನ ಅನ್ಯಾಯ, ಅನ್ಯಾಯ' ಎಂಬ ಚೀರಾಟ-ಇಷ್ಟೇ ಕೇಳಿಬರು ತಿದ್ದವು. “ ನಾನು ವೈಟ್ ಫಿಶ್ ಜನಾಂಗದ ಇಂಬರ್.”