ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುದುಕರ ಮಂಡಲಿ ಹೌಕಾನ್ ಭಾಷಾಂತರಿಸಿದನು. ಇಂಬರನ ಅನಾಗರಿಕ ಕಥನವನ್ನು ಮತ್ತೊಂದು ಭಾಷೆಗೆ ತರುವಾಗ, ತನ್ನಲ್ಲೇ ರಕ್ತಗತವಾಗಿದ್ದ ವೈಟ್ ಫಿಶ್ ಪ್ರವೃತ್ತಿ ತನ್ನ ಮೇಲೆಯೆ ಮರುಕಳಿಸಿಬರುವಂತೆ ಹೌಕಾನನಿಗೆ ಭಾಸವಾಯಿತು. ಮಿಷನರಿಗಳ ಸಹವಾಸದಿಂದ ಬಂದಿದ್ದ ಹೊರ ಮೆರುಗು ಮರೆಯಾದಂತಿತ್ತು. “ ನನ್ನ ತಂದೆಯ ಹೆಸರು ಓಟ್ಸ್ ಬೋಕ್. ಅವನು ಬಲಶಾಲಿ. ನಾನು ಹಡುಗನಾಗಿದ್ದಾಗ, ಭೂಮಿಯ ಜನ ಸಂತೋಷಭರಿತರಾಗಿದ್ದರು. ವಾಯು ಗುಣ ಬೆಚ್ಚಗೆ ಹಿತಕರವಾಗಿತ್ತು. ಹೊಸ ಹೊಸ ವಸ್ತುಗಳನ್ನು ಹುಡುಕಿ ತಿನ್ನಲು ಜನ ಹಾತೊರೆಯುತ್ತಿರಲಿಲ್ಲ. ಅಥವಾ ಹೊಸ ಶಬ್ದಗಳನ್ನು ಕಿವಿ ಗೊಟ್ಟು ಕೇಳುತ್ತಿರಲಿಲ್ಲ. ಏಕೆಂದರೆ ತಂದೆಯ ಹಾದಿಯಲ್ಲೇ ಮಕ್ಕಳೂ ನಡೆಯುತ್ತಿದ್ದರು. ಹೆಂಗಸರು ಯುವಕರ ಕಣ್ಣುಗಳಲ್ಲೇ ಒಪ್ಪಿಗೆ ಸಂಪಾದಿಸು ತಿದ್ದರು. ತಂಡ ಬೆಳೆಯುತಿತ್ತು. ಮಕ್ಕಳು ಎದೆ ಹಾಲು ಕುಡಿದು ಬಲ ಹೊಂದುತ್ತಿದ್ದರು. ಆಗಿನ ಕಾಲದಲ್ಲಿ ಗಂಡಸೆಂದರೆ, ಅವನು ನಿಜವಾದ ಗಂಡಸೇ ಆಗಿದ್ದನು ! ಶಾಂತಿ ಸಮೃದ್ಧಿಯ ಕಾಲದಲ್ಲೂ, ಯುದ್ಧಕ್ಷಾಮದ ದಿನಗಳಲ್ಲೂ ಅವರು ಒಂದೇ ರೀತಿಯಿದ್ದರು. “ಈಗ ನೀರಿನಲ್ಲಿ ಮಾನು, ಕಾಡಿನಲ್ಲಿ ಮಾಂಸ ದುರ್ಲಭವಾಗಿದೆ. ಆದರೆ ಆಗಿನ ಸಮಯದಲ್ಲಿ ಹಾಗಿರಲಿಲ್ಲ. ನಮ್ಮ ನಾಯಿಗಳೋ ತೋಳಗಳಂತಿ ದ್ದವು. ಎಂಥ ಹಿಮಮಾರುತವನ್ನೂ ಎದುರಿಸಬಲ್ಲ ದಪ್ಪನೆಯ ಚರ್ಮವನ್ನು ಹೊಂದಿದ್ದವು. ಪೆಲ್ಲಿ ಜನಾಂಗದವರು ನಮ್ಮ ನಾಡಿಗೆ ಬಂದಾಗ, ಅವರನ್ನು ಕೊಂದೆವು. ಹಾಗೆಯೇ ಅವರಿಂದ ನಮ್ಮವರು ಕೊಲ್ಲಲ್ಪಟ್ಟರು. ಅದು ಒಂದು ನಿಯಮ. ಏಕೆಂದರೆ ನಾವು ಗಂಡಸರಾಗಿದ್ದೆವು, ಅದರಲ್ಲೂ ವೈಟ್ ಫಿಲ್‌ಗೆ ಸೇರಿದವರು. ನಮ್ಮ ಹಿಂದೆ ತಾತಂದಿರು ಪೆಲ್ಲಿಯವರ ವಿರುದ್ದ ಹೋರಾಡಿ ನಮ್ಮ ನಾಡಿನ ಎಲ್ಲೆಯನ್ನು ನಿರ್ಧರಿಸಿದ್ದರು. “ನಾನು ಹೇಳಿದ ಹಾಗೆ ನಾಯಿಗಳಂತೆ ನಾವೂ ಸುಖವಾಗಿದ್ದೆವು. ಒಂದು ದಿನ ಮೊದಲನೆಯ ಬಿಳಿಯ ಮನುಷ್ಯ ಬಂದನು ! ಹಿಮದ ಮೇಲೆ ಹರಿದಾಡುತ್ತಾ ಬಂದನು. ಚರ್ಮವು ಮೈಗೆ ಚೆನ್ನಾಗಿ ಅಂಟಿಕೊಂಡಿತ್ತು. ಅದರ ಹಿಂಬದಿ ಚೂಪಾದ ಮೂಳೆಗಳು ಕಾಣುತಿದ್ದುವು. ಅಂಥ ಮನುಷ್ಯ ನನ್ನು ನಾವು ಹಿಂದೆ ನೋಡಿರಲಿಲ್ಲ. ಯಾವ ನಾಡಿನ ಎಂಥ ಗುಂಪಿನ ವನೋ ಎಂದು ಆಶ್ಚರ್ಯಪಟ್ಟೆವು. ಅವನು ಎಳೆಯ ಮಗುವಿನಂತೆ ತುಂಬ ದುರ್ಬಲನಾಗಿದ್ದನು. ಆದ್ದರಿಂದ ಅವನಿಗೆ ಬೆಂಕಿಯ ಬಳಿ ಜಾಗ ಕೊಟ್ಟೆವು;