ಪುಟ:ಬಾಳ ನಿಯಮ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಮಲಗಲು ಬೆಚ್ಚನೆಯ ಫರ್ ದುಪಡಿಯನ್ನು ಕೊಟ್ಟೆವು ; ಚಿಕ್ಕ ಮಕ್ಕಳಹಾಗೆ ಆಹಾರದ ಉಪಚಾರವೂ ನಡೆಯಿತು. ಬಿಳಿಯ ಮನುಷ್ಯನೊಡನೆ ಒಂದು ನಾಯಿಯಿತ್ತು. ಅದು ನನ್ನ ಮೂರು ನಾಯಿಗಳಷ್ಟು ದೊಡ್ಡದಾಗಿತ್ತು. ಆದರೆ ಶಕ್ತಿಯಿರಲಿಲ್ಲ. ನಾಯಿಯ ಬಾಲದ ತುದಿ ಹಿಮದ ಹೊಡೆತದಿಂದ ಬಿದ್ದು ಹೋಗಿತ್ತು. ಈ ಹೊಸ ನಾಯಿ ಯನ್ನು ನಮ್ಮ ನಾಯಿಗಳ ಮುಷ್ಟಿಗೆ ಸಿಗದ ಹಾಗೆ ಬೆಚ್ಚಗೆ ಕಾಪಾಡಿದೆವು. ಮೂಸ್ ಮಾಂಸ ಮತ್ತು ಸಾಮನ್ ಒಣ ಮಿಾನುಗಳು ಮನುಷ್ಯನಿಗೂ ನಾಯಿಗೂ ಶಕ್ತಿಯನ್ನು ಇತ್ತವು. ಏನು ಹೇಳೋಣ ? ಸ್ವಲ್ಪ ಕಾಲದಲ್ಲೇ ದೊಡ್ಡವರಾಗಿ ಲಂಗುಲಗಾಮಿಲ್ಲದವರಾದರು. ಆ ಬಿಳಿಯಮನುಷ್ಯ ಗಟ್ಟಿ ಯಾಗಿ ಮಾತನಾಡತೊಡಗಿದನು. ಮುದುಕರನ್ನೂ, ನಮ್ಮ ಯುವಕರನ್ನೂ ನೋಡಿ ಹಾಸ್ಯ ಮಾಡಿದನು. ಯುವತಿಯರನ್ನು ಧೈರ್ಯವಾಗಿ ನೋಡಿದನು. ಅ ನಾಯಿ ನಮ್ಮ ನಾಯಿಗಳೊಡನೆ ಜಗಳವಾಡಿತು; ನುಣುಪಾದ ಸಣ್ಣ ಕೂದ ಲುಳ್ಳು ದಾಗಿದ್ದರೂ ಒಂದೇ ದಿನದಲ್ಲಿ ಮೂರನ್ನು ಕೊಂದಿಕ್ಕಿತು.

  • “ನಿಮ್ಮ ಕಡೆಯವರು ಯಾರು ? ಎಂದು ಆ ಬಿಳಿಯನನ್ನು ಕೇಳಿ ದಾಗ, 'ನನಗೆ ಬೇಕಾದಷ್ಟು ಸೋದರರಿದ್ದಾರೆ' ಎನ್ನುತ್ತಾ ನಕ್ಕನು. ಆ ನಗುವಿನ ರೀತಿಯಲ್ಲಿ ಏನೋ ಕುಹಕವಿತ್ತು. ಅವನು ಪೂರ್ಣ ಶಕ್ತಿವಂತ ಸಾದ ಮೇಲೆ ಹೊರಟುಹೋದನು. ಜೊತೆಗೆ ನಮ್ಮ ನಾಯಕನ ಮಗಳು “ನೋಡಾ' ಕೂಡ ಪ್ರಯಾಣ ಮಾಡಿದಳು ! ಅದಾದ ಮೇಲೆ ನಮ್ಮ ಹೆಣ್ಣು ನಾಯಿಯೊಂದು ಮರಿಹಾಕಿತು.....ಹಿಂದಿನಂಥ ನಾಯಿಗಳ ವಂಶವೇ ಹಾಳಾಗಿ ಹೋಯಿತು. ದಪ್ಪ ತಲೆಯ, ಒರಟು ಹಲ್ಲಿನ, ಸಣ್ಣ ಕೂದಲುಳ್ಳ ಮತ್ತು ಯಾವುದಕ್ಕೂ ಸಹಾಯವಿಲ್ಲದ ನಾಯಿಗಳ ಗುಂಪನ್ನು ನೋಡುವಂತಾ ಯಿತು.....ಹೌದು ; ನನ್ನ ತಂದೆಯ ಜ್ಞಾಪಕವಿದೆ. ಆ ಬಲಶಾಲಿ ಓಟ್ಸ್ ಬೋಕ್....ಅವನ ಮುಖ ಕೋಪದಿಂದ ಕಪ್ಪಾಯಿತು. ತನ್ನ ಅಸಹಾಯ ಸ್ಥಿತಿಯನ್ನು ಹೋಗಲಾಡಿಸಿಕೊಳ್ಳಲು ಕಲ್ಲುಗಳನ್ನು ಶೇಖರಿಸಿದನು! ಎರಡು. ಬೇಸಗೆ ಕಳೆದ ಮೇಲೆ 'ನೋಡಾ' ಮರಳಿ ಬಂದಳು. ಅವಳ ಕೈಯಲ್ಲಿ ಗಂಡು ಮಗುವಿತ್ತು !!

“ ಅದೇ ಪ್ರಾರಂಭ. ಎರಡನೆಯ ಬಿಳಿ ಮನುಷ್ಯ ಬಂದನು. ಅವನು ವಾಪಸುಹೋದಾಗ ನಮ್ಮಲ್ಲಿದ್ದ ಆರು ಬಲವಾದ ನಾಯಿಗಳನ್ನು ಕರೆದು ಕೊಂಡು ಹೊರಟನು. ಆ ನಾಯಿಗಳಿಗೆ ಬದಲಾಗಿ ಕೂ-ಸೊ-ಟೀಗೆ ಒಂದು