ಪುಟ:ಬಾಳ ನಿಯಮ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ ಬಾಳ ನಿಯಮ ಮಾಡಿದೆ. ಮೊದಲನೆಯ ದೋಣಿ ಬರುವ ತನಕ ಯೂಕಾನ್ ತೀರದಲ್ಲಿ ಕಾವಲು ಹಾಕಿದೆ. ಆ ದೋಣಿಯಲ್ಲಿ ಇಬ್ಬರು ಬಿಳಿ ಜನರಿದ್ದರು. ದಡದ ಮೇಲೆ ನಿಂತು ಕೈ ಬೀಸಿದಾಗ ಅವರು ಮಾರ್ಗ ಬದಲಾಯಿಸಿ, ನನ್ನ ಕಡೆ ತಿರುಗಿದರು. ದೋಣಿಯ ಮೂತಿಯಲ್ಲಿ ಕುಳಿತಿದ್ದಾತ ತಲೆಯೆತ್ತಿ ನೋಡಿದ. ನಾನು ಎಲ್ಲಿಗೆ ಕರೆಯುತಿದ್ದೇನೆಂದು ತಿಳಿಯಲು ಇರಬಹುದು. ಹೌದು; ಅವನಿಗೆ ತಿಳಿಯಿತು; ಏಕೆಂದರೆ ನನ್ನ ಬಾಣ ಹಾರಿ ಒಂದೇ ಏಟಿಗೆ ಅವನ ಗಂಟಲನ್ನು ಕಚ್ಚಿತು ! ದೋಣಿಯ ಹಿಂಬಾಗದಲ್ಲಿ ಹುಟ್ಟು ಹಿಡಿದಿದ್ದ ಎರಡನೆ ಯವನು ಬಂದೂಕವನ್ನು ಆಗಲೇ ಅರ್ಧ ಭುಜಕ್ಕೆ ಏರಿಸಿದ್ದನು. ಅಷ್ಟರಲ್ಲೇ ನಾನೆಸೆದ ಈಟಿಯು ಅವನನ್ನು ಇರಿಯಿತು. “ ವೃದ್ದ ಸೋದರರು ಮತ್ತೆ ನನ್ನನ್ನು ಸುತ್ತುಗಟದರು. ಆಗ ಹೇಳಿದೆ : ಇದು ಮೊದಲ ಹೆಜ್ಜೆ ಮುಂದೆ ಎಲ್ಲ ತಂಡದ ಮುದುಕರನ್ನೂ ಒಂದೆಡೆ ಸೇರಿಸೋಣ. ಅದಾದ ಮೇಲೆ, ಶಕ್ತಿವಂತರಾಗಿ ಉಳಿದಿರುವ ಕೆಲವೇ ಯುವಕರನ್ನೂ ಕರೆಯೋಣ. ಅಲ್ಲಿಗೆ ನಮ್ಮ ಕೆಲಸ ಸುಲಭವಾಗುತ್ತದೆ.... “ ಆಮೇಲೆ, ಸತ್ಯ ಇಬ್ಬರು ಬಿಳಿ ಮನುಷ್ಯರನ್ನು ನದಿಗೆ ಎಸೆದೆವು. ದೋಣಿಗೆ ಬೆಂಕಿ ಹಚ್ಚಿದೆವು. ಮುಂಚೆ ದೋಣಿಯಲ್ಲಿದ್ದ ಸಾಮಾನುಗಳನ್ನು ಪರೀಕ್ಷಿಸಿದೆವು. ತೊಗಲು ಚೀಲಗಳಿದ್ದವು. ಚಾಕುವಿನಿಂದ ಕತ್ತರಿಸಿದೆವು. ಒಳಗಡೆ ತುಂಬ ಕಾಗದವಿತ್ತು....ಹೌಕಾನ್, ನೀನು ಓದುತ್ತಿರುವಂಥ ಕಾಗದ ಗಳು. ಅವುಗಳ ಮೇಲೆ ಏನೋ ಬರೆದಿದ್ದುದನ್ನು ನೋಡಿ ಅರ್ಧವಾಗದೆ ಆಶ್ಚರ್ಯಪಟ್ಟೆವು....ಆದರೆ ಈಗ ಬುದ್ದಿವಂತನಾಗಿದ್ದೇನೆ ; ಬಹುಶಃ ನೀನೀಗ ಹೇಳಿದಂತೆ ಆ ಕಾಗದಗಳಲ್ಲೂ ಯಾರದೋ ಭಾಷಣವಿತ್ತೆಂದು ಕಾಣುತ್ತೆ....? ನ್ಯಾಯಸ್ಥಾನದಲ್ಲಿ ದೋಣಿಯ ವಿಷಯ ಪೂರ್ತಿಯಾದಾಗ ಗುಜು ಗುಜು ಶಬ್ದ ಹರಡಿತು. ಜನ ಪಿಸುಮಾತನಾಡಿದರು. ಒಬ್ಬನ ಧ್ವನಿ ಕೇಳಿಬಂತು: “ ಅದೇ ಕಳೆದುಹೋದ ೯೧ನೇ ನಂಬರಿನ ಮೆಯಿಲ್ ದೋಣಿ ! ಪೀಟರ್ ಜೇಮ್ಸ್ ಮತ್ತು ಡಿಲನೆ ಅದನ್ನು ನಡೆಸುತ್ತಿದ್ದರು. ಆ ಪತ್ರಗಳು ಲೀ ಬಾರ್ಗ್‌ನಲ್ಲಿ ಮ್ಯಾಥ್ಸ್ ಮಾಡಿದ ಕೊನೆಯ ಭಾಷಣಗಳು ” ಗುಮಾಸ್ತೆ ಆತುರದಿಂದ ಬರೆದುಕೊಂಡನು. ಉತ್ತರದವರ ಚರಿತ್ರೆಗೆ ಮತ್ತೊಂದು ಭಾಗ ಸೇರಿತು. ಇಂಬರ್ ನಿಧಾನವಾಗಿ ಮುಂದುವರಿಸಿದನು: “ ಇನ್ನೂ ಸ್ವಲ್ಪವಿದೆ. ನಾವು ಮಾಡಿದ ಕಾರ್ಯಗಳು ಕಾಗದದ ಮೇಲಾದರೂ ಇರಲಿ, ಮುದುಕ