ಪುಟ:ಬಾಳ ನಿಯಮ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮುದುಕರ ಮಂಡಳಿ ೭೫ ರಾದ ನಮಗೆ ಯಾವುದೂ ಅರ್ಥವಾಗುತ್ತಿರಲಿಲ್ಲ. ಈಗಲೂ ನನಗೆ ಏನೂ ತಿಳಿಯದು....ಗುಟ್ಟಾಗಿ ಕೊಲೆಗಳನ್ನು ನಡೆಸುತ್ತಾ ಬಂದೆವು. ಎಷ್ಟೋ ವರ್ಷ ಗಳಿಂದ ಈ ಕೆಲಸಮಾಡಿ ಪಳಗಿದ್ದ ನಾವು ಆತುರವಿಲ್ಲದೆ ಕುಶಲತೆಯಿಂದ ಕೆಲಸ ಸಾಗಿಸಿದೆವು. ಒಂದು ಸಾರಿ ವಕ್ರವಾಗಿ ನೋಡುತ್ತ, ಕೆಟ್ಟ ಮಾತುಗಳ ನಾಡುತ್ತ ಬಿಳಿ ಮನುಷ್ಯರು ನಮ್ಮ ಆರು ಯುವಕರನ್ನು ಕಬ್ಬಿಣದ ಬೇಡಿ ಹಾಕಿ ಎಳೆದುಕೊಂಡು ಹೋದರು. ಅಂದಿನಿಂದ ನಮ್ಮ ಹತ್ಯಾಕಾಂಡವನ್ನು ಆದಷ್ಟು ವಿಸ್ತರಿಸುತ್ತ ದೂರ ದೂರದ ಪ್ರದೇಶಗಳ ತನಕ ಹೋಗಬೇಕೆಂದು ನಾವೆಲ್ಲ ನಿರ್ಧರಿಸಿದೆವು. ಮುದುಕರು ಒಬ್ಬೊಬ್ಬರಾಗಿ ನದಿಯ ಉತ್ತರಕ್ಕೂ ದಕ್ಷಿಣಕ್ಕೂ ನುಗ್ಗಿದೆವು. ಅದು ನಿಜವಾಗಿಯೂ ಸಾಹಸದ ಕಾರ್ಯ ಮುದುಕರಾಗಿದ್ದ ರೂ ಹೆದರಿಕೆಯಿರಲಿಲ್ಲ. ಆದರೆ ಅತಿ ದೂರದ ಪ್ರದೇಶ ವೆಂದರೆ ಮುದುಕರಿಗೆ ಭಯವಿಲ್ಲದೆ ಇರಲಿಲ್ಲ. “ ಅಂತೂ ಆತುರವಿಲ್ಲದೆ ದಕ್ಷತೆಯಿಂದಲೇ ಕೊಂದೆವು. ಚಿಲ್ಕೂಟ ನಲ್ಲಿಯೂ, ನದೀ ಮುಖಜ ಭೂಮಿಗಳಲ್ಲ, ಸಮುದ್ರ ಮಾರ್ಗಗಳಲ್ಲೂ ಅಲೆ ದಾಡಿದೆವು. ಬಿಳಿಯರು ಎಲ್ಲೆಲ್ಲಿ ಹೊರಟಿದ್ದರೋ ಅಥವಾ ಶಿಬಿರಗಳಲ್ಲಿ ನೆಲೆಸಿದ್ದರೋ ಅಲ್ಲೆಲ್ಲ ನಾವೂ ಹಿಂಬಾಲಿಸಿದೆವು. ಕಂಡೊಡನೇ ತಲೆ ಹಾರಿಸಿದೆವು. ಅವರೇನೋ ಸತ್ತರು. ಆದರೇನು ? ಪರ್ವತದಿಂದ ಬಿಳಿ ಮನುಷ್ಯರು ಬರುತ್ತಲೇ ಇದ್ದರು ! ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಾ ಬಂದರು. ವೃದ್ಧರಾಗಿದ್ದ ನಾವು ಕಡಿಮೆಯಾಗುತ್ತ ಬಂದೆವು ! ಮೂವರು ಮುದುಕರು, ಒಂದು ಶಿಬಿರದಲ್ಲಿ ಮಲಗಿ ನಿದ್ರಿಸುತಿದ್ದ ಸಣ್ಣ ಬಿಳಿ ಮನುಷ್ಯನ ಮೇಲೆ ಬಿದ್ದಿದ್ದರು. ಮರುದಿನ ನಾನು ಅಲ್ಲಿಗೆ ಹೋದಾಗ, ನಾಲ್ಕು ಮಂದಿಯಲ್ಲಿ ಬಿಳಿ ಮನುಷ್ಯನೊಬ್ಬನೇ ಇನ್ನೂ ಉಸಿರಾಡುತ್ತಿದ್ದನು. ಕೊನೆಯ ಘಳಿಗೆಯಲ್ಲಿ ನನಗೆ ಶಾಪಹಾಕಿ ಸತ್ತನು. ಅಷ್ಟು ಅವಕಾಶವನ್ನು ದೊರಕಿಸಿಕೊಂಡಿದ್ದನು ! “ಹಾಗೆಯೇ ಒಬ್ಬೊಬ್ಬರಾಗಿ ಮುದುಕರು ಕಣ್ಮರೆಯಾದರು. ಎಷ್ಟೋ ವರ್ಷಗಳ ನಂತರ ಅವರು ಹಾಗೆ ಸತ್ತರು, ಹೀಗೆ ಸತ್ತರು' ಎಂಬ ವಿಷಯ ತಿಳಿಯುತಿತ್ತು. ಕೆಲವರ ಸಮಾಚಾರವಂತೂ ನಮ್ಮ ಕಿವಿಗೆ ಮುಟ್ಟಲೇ ಇಲ್ಲ. ಇತರ ಜನಾಂಗದ ಮುದುಕರು ದುರ್ಬಲರೂ ಭೀತರೂ ಆಗಿ ನಮ್ಮೊಡನೆ ಸೇರಲಿಲ್ಲ. ಕಡೆಗೆ ಎಲ್ಲರ ಕಥೆ ಮುಗಿದ ಮೇಲೆ, ನಾನೊಬ್ಬ ಉಳಿದೆ ! ವೈಟ್ ಫಿಶ್ ಜನಾಂಗದ ಇಂಬರ್ ಎಂಬುವವನೇ ನಾನು. ನನ್ನ ತಂದೆ ಬಲಶಾಲಿ ಯಾಗಿದ್ದ ಓಟ್ಸ್ ಬೋಕ್, ಈಗ ವೈಟ್ ಫಿಶ್ ಎಂದು ಹೇಳಿಕೊಳ್ಳುವವರು