ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಒಬ್ಬರೂ ಇಲ್ಲ. ಮುದುಕರಲ್ಲಿ ನಾನು ಕಡೆಯವನು. ಯುವಕ ಯುವತಿ ಯರು ಜಾಗಬಿಟ್ಟು ಹೊರಟಿದ್ದಾರೆ : ಪೆಲ್ಲಿಯವರೊಡನೆ ಸಾಮನರೊಡನೆ, ಹೆಚ್ಚಾಗಿ ಬಿಳಿಯರೊಡನೆ ವಾಸಿಸಲು ತೆರಳಿದ್ದಾರೆ. ನನಗೆ ವಯಸ್ಸಾಗಿದೆ ; ತುಂಬ ದಣಿದಿದ್ದೇನೆ. ಹೌಕಾನ್, ನೀನು ಹೇಳಿದಂತೆ ನ್ಯಾಯಕ್ಕಾಗಿ ಹೊಡೆದಾಡಲು ವೃಥಾ ಶ್ರಮಪಟ್ಟೆ. ಆದ್ದರಿಂದ ನ್ಯಾಯವನ್ನೇ ಹುಡುಕಲು ಬಂದಿದ್ದೇನೆ.........” “ಓ ಇಂಬರ್, ನೀನು ನಿಜವಾಗಿಯೂ ಮೂರ್ಖ” ಎಂದನು ಹೌಕಾನ್. ಆದರೆ ಇಂಬರ್ ಕನಸುಕಾಣುತಿದ್ದನು. ವಿಶಾಲ ನೇತ್ರಗಳುಳ್ಳ ನ್ಯಾಯಾಧೀ ಶನೂ ಆದೇ ರೀತಿ ಕನಸುಕಂಡನು ವಿಚಿತ್ರ ದೃಶ್ಯ ಪರಂಪರೆಯಂತೆ ಜನಾಂಗವೊಂದು ತನ್ನೆದುರಿಗೇ ಹಾದುಹೋಯಿತು. ಅಲ್ಲಿ ಉಕ್ಕಿನ ಕವಚದ ಅದ್ಭುತ ವ್ಯಕ್ತಿಗಳು ವೀರಕಾರ್ಯಗಳನ್ನು ಎಸಗುತಿದ್ದರು. ಎಲ್ಲವೂ ನ್ಯಾಯ ಬದ್ಧವಾಗಿಯೇ ಇತ್ತು. ತಮ್ಮ ತಮ್ಮ ಕೆಲಸಗಳಿಗೆ ಅವರವರೇ ನ್ಯಾಯಾಧೀಶ ರಾಗಿದ್ದರು. ಹೊಸಪ್ರಪಂಚವನ್ನೇ ಸೃಷ್ಟಿಸುವಂಥ ಹೆಬ್ಬಯಕೆ ಅವರಲ್ಲಿತ್ತು.... ಕತ್ತಲ ಅರಣ್ಯಗಳಲ್ಲಿ, ಭೀಕರ ಸಮುದ್ರದ ಮೇಲೆ ಜನಾಂಗದ ಅರುಣೋದಯ ವಾದಂತೆ ಕಂಡಿತು. ಜೋರಾಗಿ ರಕ್ತವರ್ಣದಿಂದ ಬೆಳಗುತ್ತಾ ನಡುಹಗ ಲಾಯಿತು. ಕೆಳಗೆ ದಟ್ಟವಾದ ಮರಗಳ ಮರೆಯಲ್ಲಿ ಅದೇ ರಕ್ತವರ್ಣದ ಸಂಜೆಗತ್ತಲಾಯಿತು. ಇಡೀ ಜನಾಂಗ ಜಾರಿಬೀಳುವುದನ್ನೂ ಕಂಡಂತಾ ಯಿತು. ಇವುಗಳ ಮೂಲಕವೇ ದಯವಿಲ್ಲದ, ಸ್ಥಿರವಾದ ನ್ಯಾಯವಿಧಿಯನ್ನು ಕಂಡುಕೊಂಡನು. ಏನು ಮಾಡುವುದು? ನ್ಯಾಯಾಧೀಶನ ಹೃದಯ ಕರಗು ತ್ತಿದ್ದರೂ, ನ್ಯಾಯವಿಧಿ ಮಾತ್ರ ಅವನಿಂದ ಬೇರೆಯಾಗಿ ಮೇಲೆ ಕುಳಿತಿತ್ತು ! ಬಾಳ ಪ್ರೇಮ ಜೂಜಿನೊಳು ಕೈ ಬಿಟ್ಟು ಜಾರಿದರು ಹಣಹೊನ್ನು || ಮೋಜುಪಟ್ಟುದೆ ಲಾಭ ಇದಕೆ ಸಮವೇ ಹೊನ್ನು | ತೊಡರುಗಳ ದಾಟುತ್ತ ಸಾಗಿದರು ಬದುಕಿನೊಳು | ಬದುಕಿಬಾಳ್ವುದೆ ಲಾಭ ಸಂಕಷ್ಟಜಾಲದೊಳು || ಅವರು ನೋವಿನಿಂದ ಕುಂಟುತ್ತ ದಿಬ್ಬದಿಂದ ಇಳಿದರು. ಅವರಲ್ಲಿ