ಪುಟ:ಬಾಳ ನಿಯಮ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ ಒಬ್ಬನು ಪ್ರಮುಖನಂತೆ ಕಾಣುತಿದ್ದನು. ಅವನೇ ಮುಂದೆ ಮುಂದೆ ಸಾಗು ತಿದ್ದವನು; ಚಲ್ಲಾಪಿಲ್ಲಿಯಾಗಿ ಹರಡಿದ್ದ ಬಂಡೆಗಳ ಮಧ್ಯೆ ತೂರಾಡುತ್ತಿದ್ದನು. ಇಬ್ಬರೂ ಬಳಲಿ ದುರ್ಬಲರಾಗಿದ್ದರು. ಎಷ್ಟೋ ಕಾಲದಿಂದ ಕಷ್ಟ ಕೋಟಲೆ ಗಳಿಗೆ ಸಿಕ್ಕಿರಬೇಕು ; ಆದರೂ ಅಷ್ಟರಮಟ್ಟಿನ ಸಹನೆ ಅವರಲ್ಲಿ ಹೇಗೆ ಬಂತೋ ಆಶ್ವರ್ಯ, ಅಂತೂ ಮುಖದಲ್ಲಿ ಸಹನೆಯ ಚಿಹ್ನೆಗಳು ಎದ್ದು ಕಾಣುತಿದ್ದು ವು. ಅತಿ ಭಾರವಾದ ಹಾಸುಗಂಬಳಿಯ ಮೂಟೆಗಳನ್ನು ಭುಜಕ್ಕೆ ಕಟ್ಟಿಕೊಂಡಿದ್ದರು. ಇದನ್ನು ಬಲಪಡಿಸಲು ಹಣೆಯ ಮೇಲೆ ಮತ್ತೊಂದು ಪಟ್ಟಿಯಿತ್ತು. ಇಬ್ಬರೂ ರೈಫಲನ್ನು ಹಿಡಿದಿದ್ದರು....ನೆಲಮುಟ್ಟುವಂತೆ ಬಗ್ಗಿ ನಡೆದರು. ಭುಜಕ್ಕಿಂತಲೂ ತಲೆ ಮುಂದಾಗಿತ್ತು. ನಡೆವ ಸ್ಥಳವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. “ ನಮ್ಮಲ್ಲಿದ್ದ ಎರಡು ಸಿಡಿಮದ್ದಿನ ತೋಟಾಗಳನ್ನು ಬಚ್ಚಿಡದೆ, ಇಲ್ಲಿ ತಂದಿದ್ದರೆ ಚೆನ್ನಾಗಿತ್ತು....” ಎಂದನು ಆ ಎರಡನೆಯ ಮನುಷ್ಯ. ಅವನ ಧ್ವನಿಯಲ್ಲಿ ಉತ್ಸಾಹವಿರಲಿಲ್ಲ. ಮಾತುಗಳೂ ಅಸ್ಪಷ್ಟವಾಗಿದ್ದವು. ಕದಡಿದ ನೀರಿನ ಸಣ್ಣ ಪ್ರವಾಹ ಕಲ್ಲು ಬಂಡೆಗಳ ಮೇಲೆ ನೊರೆ ನೊರೆ ಯಾಗಿ ಹರಿಯುತಿತ್ತು. ಮೊದಲ ಮನುಷ್ಯ ಅದರ ಮಧ್ಯದಲ್ಲಿ ನಡೆಯು ತಿದ್ದನು ; ಸ್ನೇಹಿತನ ಪ್ರಶ್ನೆಗೆ ಉತ್ತರಕೊಡುವಷ್ಟು ಕೃಪೆಯೂ ಅವನಿಗಿರಲಿಲ್ಲ.

  • ಆದರೂ ಆ ಸ್ನೇಹಿತ ಅವನ ಬೆನ್ನ ಹಿಂದೆಯೇ ಬಂದನು. ನೀರು ಮಂಜು ಗಡ್ಡೆಯಷ್ಟು ತಣ್ಣಗಿತ್ತು. ಹಾಗಿದ್ದರೂ ಅವರು ಪಾದರಕ್ಷೆಯನ್ನು ಬಿಚ್ಚಲಿಲ್ಲ. ಕಾಲಿನಲ್ಲಿ ಸೆಳೆತ ಆರಂಭವಾಯಿತು ; ಪಾದಗಳು ಹಿಮದಿಂದ ತೋಡಿ ಹೋದುವು. ಕೆಲವು ಜಾಗದಲ್ಲಂತೂ ಪ್ರವಾಹವು ಮೊಣಕಾಲ ತನಕ ಹೊಡೆದು, ಹಜ್ಜೆಯಿಡುವುದಕ್ಕೆ ಅಡ್ಡಿ ಮಾಡುತಿತ್ತು.

ಹಿಂಬಾಲಿಸುತಿದ್ದ ಮನುಷ್ಯನಿಗೆ ಕಾಲು ಜಾರಿತು ; ಅದೂ ಎಲ್ಲಿ ? ನೀರಿನ ಹೊಡೆತದಿಂದ ಸಮೆದ ಕಲ್ಲುಗುಂಡಿನ ಮೇಲೆ. ಆದರೇನಂತೆ ? ಅಷ್ಟರಲ್ಲೇ ಬಹು ಪ್ರಯತ್ನ ಮಾಡಿ ಹಿಂದಿನ ಸ್ಥಿತಿಗೆ ಬಂದನು. ಇನ್ನೇನು ಬೀಳಲಿದ್ದ ಮನುಷ್ಯ ಎದ್ದು ನಿಂತನು. ಆತನ ಕೂಗಾಟದಿಂದ ತೀವ್ರ ನೋವು. ವ್ಯಕ್ತವಾಗಿತ್ತು, ತಲೆತಿರುಗಿ ಮೂರ್ಛಹೋಗುವಂತಿದ್ದರೂ ಗಾಳಿಗೆ ಇದಿರಾಗಿ ಏನನ್ನೋ ಹಿಡಿಯುವುದಕ್ಕೆಂದು ಕೈಚಾಚಿದನು. ಸರಿಯಾಗಿ ನಿಂತಮೇಲೆ ಮತ್ತೆ ಮುಂದಡಿಯಿಟ್ಟನು. ಆದರೆ ಪುನಃ ತಲೆಸುತ್ತಿ ಬೀಳುವಂತಾಯಿತು. ಸುಮಾರು ಒಂದು ನಿಮಿಷದ ಕಾಲ ತನ್ನಲ್ಲಿ ತಾನೇ ಚರ್ಚೆಮಾಡುವವನಂತೆ ಚಲಿಸದೆ ನಿಂತನು. ಮತ್ತೆ ಸ್ನೇಹಿತನ ಕಡೆ ನೋಡಿ ಕೂಗಿದನು : " ಏ ಬಿಲ್,