ಪುಟ:ಬಾಳ ನಿಯಮ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಇಲ್ಲಿ ನೋಡಯ್ಯ, ನನ್ನ ಕಾಲು ಉಳುಕಿಹೋಗಿದೆ....” ಬಿಲ್ ನೀರ ಮಧ್ಯೆ ಹಾಗೂ ಹೀಗೂ ಮುಗ್ಗರಿಸುವವನಂತೆ ನಡೆಯುತ್ತಲೇ ಇದ್ದನು. ಅವನ ದೃಷ್ಟಿ ಒಂದೇ ಕಡೆಯಿತ್ತು. ಅವನು ತನ್ನ ಕಡೆ ನೋಡದೆ ಮುಂದುವರಿಯುತಿದ್ದಾನೆ ಎಂದು ಕಾಯುತಿದ್ದ ನಮ್ಮ ಮನುಷ್ಯನಿಗೆ ತಿಳಿ ಯಿತು. ಮುಖ ಯಥಾಪ್ರಕಾರ ಅವ್ಯಕ್ತವಾಗಿಯೇ ಇತ್ತು. ಆದರೆ ಅವನ ಕಣ್ಣುಗಳು ಗಾಯಗೊಂಡ ಜಿಂಕಯ ಕಣ್ಣುಗಳಂತೆ ಇದ್ದ ವು. ಬಿಲ್ ಅಚೆ ದಡವನ್ನು ಸೇರಿ ಹಿಂದಕ್ಕೆ ನೋಡದೆ ಮುಂದುವರಿದನು. ಪ್ರವಾಹದಲ್ಲಿ ನಿಂತಿದ್ದ ಮನುಷ್ಯ ಕಾಯುತ್ತಲೇ ಇದ್ದನು. ತಟ ಸ್ವಲ್ಪ ಅದುರಿತು ; ಬಾಯನ್ನು ಮುಚ್ಚಿದ್ದ, ಒರಟಾಗಿಯೂ ಸೊಂಪಾಗಿಯೂ ಬೆಳೆ ದಿದ್ದ ಕಂದು ಬಣ್ಣದ ಗಡ್ಡ ಮೀಸೆಯೂ ಅಲುಗಾಡಿತು. ಥಟ್ಟನೆ ಅವುಗಳೆಡೆ ಯಿಂದ ನಾಲಿಗೆಯನ್ನು ಹೊರಚಾಚಿ “ಬಿಲ್ !” ಎಂದು ಗಟ್ಟಿಯಾಗಿ ಕೂಗಿಕೊಂಡನು. ಸಂಕಟಕ್ಕೀಡಾದ ಬಲಶಾಲಿಯೊಬ್ಬನ ಆರ್ತನಾದವದು. ಆದರೆ ಬಿಲ್‌ನ ತಲೆ ಅತ್ತ ತಿರುಗಲಿಲ್ಲ. ಆತ ಕುಂಟುತ್ತಾ ಅತ್ತಿತ್ತ ವಾಲುತ್ತಾ ಇಳಿಜಾರನ್ನು ಹತ್ತುತಿದ್ದನು. ಕೆಳಬೆಟ್ಟದ ರೂಪ ಆಕಾಶದ ಹಿನ್ನೆಲೆಯಲ್ಲಿ ಎದ್ದು ಕಾಣು ತಿತ್ತು. ಬಿಲ್‌ ಅದರ ತುದಿಯನ್ನೇರಿ ಅದೃಶ್ಯನಾದನು. ಇದನ್ನೆಲ್ಲ ನೋಡುತ್ತ ನಿಂತಲ್ಲೇ ನಿಂತಿದ್ದವನ ಮನಸ್ಸು ಹೇಗಿರಬೇಕು ? ಇನ್ನು ಬಿಲ್ ನನ್ನು ಕಾಣುವಂತಿಲ್ಲವೆಂದು ತಿಳಿದು ತನ್ನ ಭಾಗಕ್ಕೆ ಉಳಿದ ಸುತ್ತಲಿನ ಪ್ರಪಂಚವನ್ನು ನಿಧಾನವಾಗಿ ನಿಟ್ಟಿಸಿದನು. ದಿಗಂತದಲ್ಲಿ ಸೂರ್ಯನಿದ್ದಾನೋ ಇಲ್ಲವೋ ! ಏಕೆಂದರೆ ಅವನ ಕಾಂತಿ ಒಳಗೊಳಗೇ ಅಡಗಿಕೊಂಡು ಮರೆಯಾಗುತಿತ್ತು. ಕಾರಣ, ಸುತ್ತಲಿನ ವಾತಾವರಣ ಮಂಜಿನ ಕಣಗಳಿಂದ ತುಂಬಿಹೋಗಿತ್ತು. ಇಬ್ಬನಿಯು ಹೊಗೆಯಂತೆ ಆಕಾರವಿಲ್ಲದೆ ಸುಳಿದಾಡುತಿತ್ತು. ಅದು ನಿಬಿಡವಾಗಿ ದ್ರವ್ಯದ ಪರಿಮಾಣ ಎದ್ದು ಕಾಣುತಿದ್ದರೂ, ಸ್ಪಷ್ಟವಾದ ಎಲ್ಲೆಯನ್ನು ಕಂಡು ಹಿಡಿಯಲು ಸಾಧ್ಯವಿರಲಿಲ್ಲ. ನಾಯಕನು ಒಂದೇ ಕಾಲಿನ ಮೇಲೆ ನಿಂತು, ಗಡಿಯಾರವನ್ನು ಹೊರತೆಗೆದು ನೋಡಿಕೊಂಡನು. ನಾಲ್ಕು ಘಂಟೆ 'ಯಾಗಿತ್ತು. ಏನೋ ಯೋಚಿಸಿದನು. ಹೌದು; ಈಗ ಜುಲೈ ಕೊನೆ ಅಥವಾ ಆಗಸ್ಟ್ ಮೊದಲ ದಿನ ಇರಬಹುದು ; (ಅವನಿಗೆ ವಾರಗಳ ಲೆಕ್ಕ ಗೊತ್ತೇ ಹೊರತು, ಸ್ಪಷ್ಟ ತಾರೀಖನ್ನು ಹೇಳಲಾರ) ; ಈ ಹೊತ್ತಿಗೆ ಸಾಧಾರಣವಾಗಿ