ಪುಟ:ಬಾಳ ನಿಯಮ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ ೭೯ ಸೂರ್ಯನು ವಾಯವ್ಯ ದಿಕ್ಕಿನ ಕಡೆ ಪ್ರಯಾಣ ಮಾಡುತ್ತಿರಬೇಕು. ಎಂದು ಎಣಿಕೆಹಾಕಿ ದಕ್ಷಿಣದ ಕಡೆ ನೋಡಿದನು. ಗಾಳಿ, ಬಿಸಿಲು, ಮಳೆ ಇವುಗಳನ್ನು ಲೆಕ್ಕಿಸದ ಬೋಳು ಬೆಟ್ಟಗಳು ಅಲ್ಲಿವೆ. ಅವುಗಳಾಚೆ ದೊಡ್ಡ ದಾದ ಬೇರ್ ಸರೋವರವಿದೆ. ಅದೇ ಮಾರ್ಗದಲ್ಲಿ ಉತ್ತರಧ್ರುವ ವೃತ್ತ, ಕೆನೆಡಿಯನ್ ಬ್ಯಾರೆನ್ಸ್ ಮಧ್ಯೆ ಕಷ್ಟ ಪಟ್ಟು ಸಾಗುತ್ತದೆ. ತಾನು ನಿಂತಿರುವ ಪ್ರವಾಹದ ನೀರು ಕಾಪರ್ ಮೆನ್ ನದಿಗೆ ಪೂರಕವಾದುದು. ಕಾಪರ್ ಮೈನ್ ನದಿ ಉತ್ತರಕ್ಕೆ ಹರಿಯುತ್ತಾ ಕಾರೋನೇಷನ್ ಕೊಲ್ಲಿಯನ್ನು ಸೇರುತ್ತದೆ. ಅಲ್ಲಿಂದ ಅಂತ್ಯವಿಲೀನ ಉತ್ತರ ಸಾಗರದಲ್ಲಿ. ತಾನು ಅಲ್ಲಿಯ ತನಕ ಎಂದೂ ಹೋದವನಲ್ಲ. ಆದರೂ ಹಡ್ಡನ್ ಬೇ ಕಂಪನಿಯ ನಮುದ್ರಪಟದಲ್ಲಿ ಆ ಸ್ಥಳಗಳನ್ನು ಒಮ್ಮೆ ನೋಡಿದ್ದುಂಟು;

  • ಮತ್ತೆ ಅವನ ದೃಷ್ಟಿ ಸುತ್ತಲಿನ ಪ್ರಪಂಚದ ಕಡೆ ಹರಿಯಿತು. ಮನಸ್ಸಿಗೆ ಹಿತವಾದ ದೃಶ್ಯ ಯಾವುದೂ ಇಲ್ಲ. ಎಲ್ಲೆಲ್ಲಿ ನೋಡಿದರೂ ಆಗಸದ ರೂಪರೇಖೆಗಳು ಶೂನ್ಯತೆಯನ್ನು ಸಾರುತ್ತಿದ್ದವು. ಬೆಟ್ಟಗಳು ಕೂಡ ತಗ್ಗಿನಲ್ಲಿದ್ದವು. ಮರ ಗಿಡಗಂಟೆಗಳ ಹೆಸರೇ ಇಲ್ಲ. ` ಉಳಿದಿರುವುದು ಒಂದೇ : ಬೃಹದಾಕಾರವಾಗಿ ಹರಡುತ್ತಿರುವ ಭಯಂಕರ ಶೂನ್ಯತೆ. ನಾಯ ಕನ ಕಣ್ಣು ಥಟ್ಟನೆ ಭೀತಿಗೊಂಡು ನಡುಗಿತು.

“ಬಿಲ್, ಬಿಲ್ !” ಎಂದು ಎರಡು ಮೂರು ಬಾರಿ ಪಿಸುಗುಟ್ಟಿದನು. ಕೊಂಚ ನೀರಿನಲ್ಲೇ ಬಗ್ಗಿ ಅಡಗಿಕೊಳ್ಳಲು ಪ್ರಯತ್ನಿಸಿದನು. ಮೇಲಿನಿಂದ ಬಲಪ್ರಯೋಗ ನಿರಾತಂಕವಾಗಿ ನಡೆದ, ತನ್ನನ್ನು ಅರೆಯುತ್ತಿರುವಂತೆ ಭಾಸವಾಯಿತು ; ಆ ಪಶುಶಕ್ತಿಯನ್ನು ತಡೆಯಲು ಅಸಾಧ್ಯವಾಯಿತು. ಚಳಿ ಜ್ವರದಿಂದ ನಡುಗಲಾರಂಭಿಸಿದನು. ಕಡೆಗೆ ಕೈಯಲ್ಲಿದ್ದ ರೈಫಲ್ ಕೆಳಕ್ಕೆ ಬಿತ್ತು. ಛಂಗನೆ ನೀರು ಎರಚಿದಾಗ ನಾಯಕನಿಗೆ ಎಚ್ಚರ ವಾಯಿತು. ಭಯವನ್ನು ಹೊಡೆದಟ್ಟಲು ಶರೀರದ ಎಲ್ಲ ಭಾಗಗಳಿಗೂ ಚೇತನ ತುಂಬಿಸಿದನು. ನೀರಿನಲ್ಲಿ ತಡಕಾಡಿ ಆಯುಧವನ್ನು ಮತ್ತೆ ಪಡೆ ದನು. ಒಂದು ಕಡೆಯೇ ಭಾರವಾಗಿದ್ದ ಮೂಟೆಯನ್ನು ಎಡ ಭುಜಕ್ಕೆ ಸರಿಸಿ ಮೇಲೆತ್ತಿ ಕಟ್ಟಿಕೊಂಡನು. ಆಗಾಗ ನರಳಾಟದಿಂದ ಬೆಚ್ಚಿ ಬಿದ್ದವನಂತೆ ನಿಧಾನ ವಾಗಿಯೂ ಜಾಗರೂಕನಾಗಿಯೂ ದಂಡೆಯ ಹತ್ತಿರ ಬಂದನು. ಹುಚ್ಚನ ಹಾಗೆ ನಿರಾಶೆಯಿಂದ ಏನನ್ನೂ ಲಕ್ಷ್ಯಮಾಡದೆ ನಡೆಯುತಿ ದ್ದನು. ತನ್ನ ಸ್ನೇಹಿತನು ಹತ್ತಿ ಮಾಯವಾದ, ಬೆಟ್ಟದ ಶಿಖರ ಕಾಣುತಿತ್ತು.