ಪುಟ:ಬಾಳ ನಿಯಮ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಅಲ್ಲಿಗೆ ಹೋಗಲು ಕಡಿದಾದ ಇಳಿಜಾರನ್ನು ವಿರುದ್ಧ ಗತಿಯಿಂದ ಹತ್ತ ಬೇಕು. ನಾಯಕನು ಮನಸ್ಸು ಮಾಡಿದನು. ಸ್ನೇಹಿತನ ರೀತಿಗಿಂತ ವಕ್ರ ವಾಗಿಯೂ ಹಾಸ್ಯಾಸ್ಪದವಾಗಿಯೂ ಹೊರಳಿ ಹೊರಳಿ ಮೇಲೇರಿದನು. ಶಿಖರವನ್ನು ಸೇರಿಯಾಯಿತು. ಕೆಳಗೆ ನೋಡುತ್ತಾನೆ ! ಜೀವದ ಉಸಿರೇ ಇಲ್ಲದ ಕಣಿವೆ! ಹೆಚ್ಚಿನ ಆಳವೂ ಇಲ್ಲ.....ಮತ್ತೆ ಮನಸ್ಸಿನ ಅಳುಕಿನೊಡನೆ ಹೋರಾಡಿ ಭಯವನ್ನು ಹೋಗಲಾಡಿಸಿಕೊಂಡನು. ಎಡಭುಜದ ಮೂಟೆಯನ್ನು ಇನ್ನಷ್ಟು ಮೇಲೆಕೇರಿಸಿ ಬಿಗಿದನು. ಕೆಳಗೆ ಬೀಳಲು ಆಸ್ಪದಕೊಡದೆ ಇಳಿಯ ಲಾರಂಭಿಸಿದನು. - ಕಣಿವೆಯ ತಳಭಾಗ ನೀರಿನಿಂದ ತುಂಬ ನೆನೆದು ಚೌಗುಪ್ರದೇಶವಾಗಿತ್ತು.. ಪಾಚಿಯು ದಟ್ಟವಾಗಿ ಬೆಳೆದಿತ್ತು. ಸ್ಪಂಜಿನಂತೆ ಕಾಲನ್ನು ಸೆಳೆಯುತಿತ್ತು. ಪ್ರತಿ ಹೆಜ್ಜೆಗೂ ನೀರು ಚುರುಕಿಬಿಟ್ಟಂತೆ ಹೊರಹೊಮ್ಮುತಿತ್ತು. ಕಾಲಿಟ್ಟು ತೆಗೆದಾಗ ಪಾಚಿಯೊಳಗಿನ ನೀರು ಸಡಿಲಗೊಂಡು 'ಚಪ್', 'ಚಪ್' ಎಂದು ಇಷ್ಟವಿಲ್ಲದೆ ಶಬ್ದ ಮಾಡುತಿತ್ತು ; ಕಾಲ ಮೇಲೆ ಆಷ್ಟು ಪ್ರೇಮ ! ನೀರೊಳಗಿನ ಬಂಡೆಯ ಉಬ್ಬು ಸಾಲುಗಳು ಪಾಚಿಯ ಸಮುದ್ರದಲ್ಲಿ ಸಣ್ಣ ದ್ವೀಪಗಳಂತಿ ದ್ದವು. ಅದರ ಮೇಲೆಲ್ಲಾ ಬಿಲ್ ಮಹಾಶಯನ ಗುರುತುಗಳಿದ್ದವು. ನಾಯಕನು ಅವುಗಳನ್ನೆ ಹಿಂಬಾಲಿಸಿ ಹೊರಟನು. ಒಬ್ಬಂಟಿಗನಾದರೂ ದಾರಿತಪ್ಪಲಿಲ್ಲ. ಮುಂದೆ ಮುಂದೆ ಹೋದಂತೆ ಯಾವ ಸ್ಥಳ ಸಿಗಬಹುದೆಂದು ಅವನಿಗೆ ಗೊತ್ತಿತ್ತು-'ಕಡ್ಡಿ ಪುಳ್ಳೆಗಳ ನಾಡು'; ಅಲ್ಲವೇ ? ಅದರ ಎಲ್ಲೆಯಲ್ಲಿ ಸಣ್ಣ ಸರೋವರವಿದೆ ; ತೀರದ ಸುತ್ತಲೂ ಬಾಡಿಹೋಗುತ್ತಿರುವ ಸಣ್ಣ, ಸಣ್ಣ ನ್ಯೂಸ್ ಮತ್ತು ಫರ್ ಮರಗಳಿವೆ. ಆ ಸರೋವರಕ್ಕೆ ಸೇರುವ ಒಂದು ಸಣ್ಣ ತೊರೆಯ ನೀರು ಕೆಸರಿಲ್ಲದೆ ಸ್ವಚ್ಛ ವಾಗಿದೆ. ತನಗೆ ಚೆನ್ನಾಗಿ ಜ್ಞಾಪಕವಿದೆ ; ಆ ತೊರೆಯ ಪಾತ್ರದಲ್ಲಿ ಹುಲ್ಲು ಜೊಂಡುಗಳು ಸೊಂಪಾಗಿ ಬೆಳೆದಿವೆ. ಆದರೆ ಅಲ್ಲಿ ಯಾವ ಮರಗಳೂ ಇಲ್ಲ. ಅದನ್ನೇ ಹಿಂಬಾಲಿಸಿ ಹೊರಟರೆ ಜಲ ವಿಭಾಗದ ಸ್ಥಾನ ಸಿಕ್ಕುತ್ತದೆ. ಆ ದಿಕ್ಕನ್ನೇ ಅನುಸರಿಸಿದರೆ ಮತ್ತೊಂದು ತೊರೆಯ ದರ್ಶನ. ಅದು ಪಶ್ಚಿಮಕ್ಕೆ ಹರಿಯುತ್ತದೆ. ಡೀಸ್ ನದಿಯಲ್ಲಿ ವಿಲೀನವಾಗುತ್ತದೆ. ಅಲ್ಲಿಯತನಕ ತಾನು ಎಡೆಬಿಡದೆ ಹಿಂಬಾಲಿಸಲೇಬೇಕು. ಏಕೆಂದರೆ ಅಲ್ಲೇ ಕಲ್ಲುರಾಶಿ; ಅದಕ್ಕೆ ಸಿಲುಕಿ ಬೋರಲಾದ ಸಣ್ಣ ದೋಣಿ ; ಅದರ ಒಳಗಡೆ ಗುಪ್ತ ಕಣಜ ! ತನ್ನ ಬಂದೂಕಕ್ಕೆ ಬೇಕಾಗುವ ಮದ್ದು ಗುಂಡುಗಳು ಇರುವುದೂ ಅಲ್ಲೇ. ಅಷ್ಟೇ