ಪುಟ:ಬಾಳ ನಿಯಮ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ ಅಲ್ಲ; ಮಿಾನು ಹಿಡಿಯುವ ಕೊಕ್ಕೆ, ಗಾಳದ ಹುರಿ, ಸಣ್ಣ ಬಲೆ, ಇತ್ಯಾದಿ, ಒಟ್ಟಿನಲ್ಲಿ ಬೇಟೆಗೆ ಬೇಕಾದ ಎಲ್ಲ ಸಲಕರಣೆಗಳೂ ಆ ಗುಪ್ತಸ್ಥಳದಲ್ಲಿ ಅಡಗಿವೆ. ಜೊತೆಗೆ ಸ್ವಲ್ಪ ಹಿಟ್ಟೂ ಚೂರು ಹಂದಿಮಾಂಸವೂ ತುಸು ಕಾಳುಗಳೂ ಇರ ಬಹುದು. - ಬಿಲ್ ತನಗಾಗಿ ಅಲ್ಲಿ ಕಾದಿರಬಹುದು, ಅವನ ಭೇಟಿಯಾದರೆ ಸಾಕು; ಮುಂದಿನ ಕಾರ್ಯಕ್ರಮ ಮಿಂಚಿನಂತೆ ನಡೆದು ಹೋಗುತ್ತದೆ-ತಾವಿಬ್ಬರೂ ಡೀಸ್ ನದಿಯ ಮೇಲೆ ಹುಟ್ಟುಹಾಕುತ್ತ ದಕ್ಷಿಣಾಭಿಮುಖವಾಗಿ ಹೊರಟು ಬೇರ್ ಸರೋವರವನ್ನು ಸೇರುತ್ತೇವೆ. ಅದೇ ದಿಕ್ಕಿನಲ್ಲಿ ಇನ್ನೂ ಮುಂದೆ ಪ್ರಯಾಣಮಾಡಿದರೆ ಮೆಕನ್ಸಿ ಸಿಗುತ್ತದೆ. ಚಳಿಗಾಲದ ಹೊಡೆತ ಜೋರಾ ಗಿರುವುದರಿಂದ ಅಲ್ಲೇ ನಿಲ್ಲಲು ಸಾಧ್ಯವಿಲ್ಲ. ಅದರೆ ನಾವು ಚಳಿಗಾಲಕ್ಕೆ ಬುದ್ದಿ ಕಲಿಸುವಂತೆ ಮುಂದೆ ಮುಂದೆ ಪ್ರಯಾಣಮಾಡುತ್ತೇವೆ. ಸಣ್ಣ ಸಣ್ಣ ನೀರಸುಳಿಗಳು ಮಂಜುಗಡೆ ಗಳಾಗಿ ಮಾರ್ಪಟ್ರರೂ ನಮಗೆ ಹೆದರಿಕೆಯಿಲ್ಲ. ಕಡೆಗೆ ಯಾವುದಾದರೂ ಹಡ್ಡನ್‌ ಬೇ ಕಂಪೆನಿಯ ಬೆಚ್ಚಗಿನ ಪಾಳೆಯ ಸಿಕ್ಕೇ ಸಿಗುತ್ತದೆ. ಆ ಮೇಲೆ ನಮ್ಮನ್ನು ಹಿಡಿಯುವವರಾರು ? ಏಕೆಂದರೆ ಅಲ್ಲಿ ಮರ ಗಳು ಸೊರಗಿಹೋಗದೆ ಉದ್ದವಾಗಿ ಬೆಳೆಯುತ್ತವೆ. ಫಲಯುಕ್ತವಾಗಿಯೂ ಇವೆ. ಏನಿಲ್ಲದಿದ್ದರೂ ಕೊನೆಮೊದಲಿಲ್ಲದ ಹುಚ್ಚು ಪೈರುಗಳಿಗಂತೂ ಮೋಸ ವಿಲ್ಲ. ನಾಯಕನು ಕಷ್ಟ ಪಟ್ಟು ಹೆಜ್ಜೆ ಹಾಕುತಿದ್ದರೂ, ಅವನ ತಲೆಯಲ್ಲಿ ಇಂಥ ಭಾವನೆಗಳು ಸುಳಿದವು. ಬಿಲ್ ತನ್ನ ಕೈ ಬಿಟ್ಟಿಲ್ಲವೆಂಬ ಭಾವನೆಯನ್ನು ದೃಢ ಪಡಿಸಿಕೊಳ್ಳಲು ನಾಯಕನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದ್ದರಿಂದಲೇ ಬಿಲ್ ಸ್ನೇಹಿತನಿಗಾಗಿ ಆ ಗುಪ್ತ ಸ್ಥಳದಲ್ಲಿ ಕಾದಿರುತ್ತಾನೆ ; ಅಲ್ಲವೇ ? ಆ ನಿರ್ಧಾರ ವಿಲ್ಲದಿದ್ದರೆ ನಾಯಕನ ನರಳಾಟವೆಲ್ಲ ವ್ಯರ್ಥವೇ ಸರಿ ; ತಾನು ಎಂದೋ ಕೆಳಗೆ ಬಿದ ಸತ್ತು ಹೋಗಬಹುದಿತ್ತು, ಅಂತೂ ಬಲವಂತವಾಗಿಯಾದರೂ ಒಂದೇ ನಿಶ್ಚಯಕ್ಕೆ ಅಂಟುಕೊಳ್ಳಬೇಕಾಗಿದೆ ...

  • ಮಂಕು ಕವಿದ ಸೂರ್ಯ ಬಿಂಬವು ವಾಯುವ್ಯ ದಿಕ್ಕಿನಲ್ಲಿ ನಿಧಾನವಾಗಿ ಇಳಿಯುತ್ತಿತ್ತು. ನಾಯಕನು ಅಂಗುಲವನ್ನು ಲೆಕ್ಕ ಹಾಕಿ ದಾರಿ ನಡೆಯುತಿ ದನು. ಮತ್ತೆ ಮತ್ತೆ ಅವನ ಮನಸ್ಸಿಗೆ ಗುಪ್ತ ಸ್ಥಳದ ಸಲಕರಣೆಗಳೂ ಮತ್ತು ಹಡೇನ್ ಬೇ ಕಂಪೆನಿಯ ಪಾಳೆಯದಲ್ಲಿ ಇರಬಹುದಾದ ಸಸ್ಯಸಮೂಹವೂ ಆಸೆ ತೋರಿಸುವಂತಿತ್ತು.