ಪುಟ:ಬಾಳ ನಿಯಮ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಎರಡು ದಿನಗಳಿಂದಲೂ ಅವನು ಏನನ್ನೂ ತಿಂದಿರಲಿಲ್ಲ. ತಾನು ಇಷ್ಟ ಪಡುವ ಆಹಾರವಂತೂ ಈಚೆಗೆ ಸಿಕ್ಕೇಇರಲಿಲ್ಲ. ಎಷ್ಟೋ ವೇಳೆ ಥಟ್ಟನೆ ಬಗ್ಗಿ ಮಸೈಗ್‌ ಕಾಯಿಗಳನ್ನು ಬಾಯಿಗೆ ಹಾಕಿಕೊಳ್ಳುತಿದ್ದನು ; ಚೆನ್ನಾಗಿ ಜಗಿದು ನುಂಗುತ್ತಿದ್ದನು. ಮಸ್ಸೆಗ್ ವಿಚಿತ್ರ ರೀತಿಯ ಕಾಯಿ. ಓಟೆಯಿಲ್ಲ, ಸಣ್ಣ ಬೀಜಗಳೂ ಸ್ವಲ್ಪ ರನವೂ ಅಡಕವಾಗಿರುತ್ತವೆ. ಬಾಯಿಗೆ ಹಾಕಿ ಕೊಂಡರೆ ನೀರಿನಭಾಗ ಕರಗಿ, ಬೀಜ ಮಾತ್ರ ಉಳಿಯುತ ದೆ. ಆ ಬೀಜ ನಾದರೋ ಕಹಿಯಾಗಿರುವುದರ ಜೊತೆಗೆ ಚುಚ್ಚುವುದೂ ಉಂಟು. ಅದರಲ್ಲಿ ಆರೋಗ್ಯಕ್ಕೆ ಬೇಕಾದ ಯಾವ ಅಂಶವೂ ಇಲ್ಲವೆಂಬುದು ನಾಯಕನಿಗೆ ಗೊತ್ತು. ಅಷ್ಟಾದರೂ ಅದನ್ನೇ ತಾಳ್ಮೆಯಿಂದ ಅಗಿಯುತಿದ್ದನು ; ಸಾಮಾನ್ಯ ಪ್ರತಿಕ್ರಿಯೆಯ ಜ್ಞಾನಾನುಭವಗಳನ್ನು ಮಾರಿಸಿದ್ದ ಯಾವುದೋ ಭರವಸೆ ಅವನನ್ನು ಆ ರೀತಿ ಪ್ರೇರೇಪಿಸಿರಬೇಕು. ಒಂಬತ್ತು ಗಂಟೆಯ ಸಮಯ. ನಾಯಕನ ಕಾಲಬೆರಳು ಬಂಡೆಯ ತುದಿಗೆ ಜೋರಾಗಿ ಎಡವಿತು. ಮೊದಲೇ ಸುಸ್ತಾಗಿದ್ದವನು ಮತ್ತಷ್ಟು ದುರ್ಬಲನಾಗಿ, ತತ್ತರಿಸಿ ಕೆಳಕ್ಕೆ ಬಿದ್ದನು. ಸ್ವಲ್ಪ ಕಾಲ ಹಾಗೆಯೆ ಚಲನೆ ಯಿಲ್ಲದೆ ಒಂದೇ ಪಕ್ಕಕ್ಕೆ ಮಲಗಿದ್ದನು. ಆಮೇಲೆ, ಮೈ ಮೇಲೆಲ್ಲಾ ಕಟ್ಟಿ ಕೊಂಡಿದ್ದ ಭಾರಹೊರುವ ಪಟ್ಟಿಗಳನ್ನು ಬಿಚ್ಚಿ ಕೊಂಡನು. ಒರಟಾಗಿದ್ದ ತನ್ನ ದೇಹವನ್ನು ಬಹು ಪ್ರಯಾಸದಿಂದ ಎಳೆದು ಕುಳಿತುಕೊಂಡನು. ಆಗ ಇನ್ನೂ ಕತ್ತಲಾಗಿರಲಿಲ್ಲ. ನಕ್ಷತ್ರಗಳ ನಸುಬೆಳಕಿನಲ್ಲಿ ಆತನು ಕಲ್ಲುಗಳ ಮಧ್ಯೆ ತಡಕಾಡಿ ಒಣಪಾಚಿಯ ತುಂಡುಗಳನ್ನು ಶೇಖರಿಸಿದನು. ಅದನ್ನೇ ಒಂದು ರಾಶಿಯಷ್ಟು ಮಾಡಿ ಬೆಂಕಿಹಚ್ಚಿದನು. ತುಂಡುಗಳು ಹೊಗೆಯಿಂದ ಆವೃತ ವಾಗಿ ಒಳಗೊಳಗೆ ಉರಿದವು. ಅದರ ಮೇಲೆ ಕಾಯಿಸಲು ನೀರು ತುಂಬಿದ ಟನ್ನಿನ ಕುಡಿಕೆಯನ್ನಿಟ್ಟನು.

  • ಪೆಟ್ಟಿಗೆಯನ್ನು ಬಿಚ್ಚಿ ಮೊದಲು ಬೆಂಕಿಯ ಕಡ್ಡಿಗಳನ್ನು ಎಣಿಸಿದನು. ಅರವತ್ತೇಳು ಕಡ್ಡಿಗಳಿದ್ದವು. ಸಂಖ್ಯೆಯನ್ನು ನಿಶ್ಚಯ ಮಾಡಿಕೊಳ್ಳಲು ಮೂರು ಬಾರಿ ಎಣಿಸಿದನು. ಅದನ್ನು ವಿಭಾಗಮಾಡಿ ಎಣ್ಣೆ ಕಾಗದದಲ್ಲಿ ಸುತ್ತಿದನು. ಒಂದನ್ನು ಬರಿದಾಗಿದ್ದ ತನ್ನ ಹೊಗೆಸೊಪ್ಪಿನ ಚೀಲಕ್ಕೆ ಹಾಕಿದನು. ಎರಡ ನೆಯ ಭಾಗವನ್ನು ಜಜ್ಜಿ ಹೋಗಿದ್ದ ಟೋಪಿಯ ಒಳಪಟ್ಟಿಗೆ ಸೇರಿಸಿದನು. ಮತ್ತೊಂದನ್ನು ತನ್ನ ಎದೆಗೆ ಅಂಟಿಕೊಂಡಂತಿದ್ದ ಅಂಗಿಯ ಸಂದಿಯಲ್ಲಿ ಗಂಟು ಹಾಕಿದನು. ಇಷ್ಟಾದ ಮೇಲೆ ಪುನಃ ಗಾಬರಿಗೊಂಡು ಎಲ್ಲವನ್ನೂ ಹೊರ