ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ ತೆಗೆದನು. ಮತ್ತೊಮ್ಮೆ ಎಣಿಸಿದನು. ಆಗಲೂ ಹೆಚ್ಚು ಕಡಿಮೆಯಿಲ್ಲದೆ ಅರುವತ್ತೇಳು ಕಡ್ಡಿಗಳೇ ಇದ್ದವು. ಕೊಯ್ದು ಹೋಗಿದ್ದ ಪಾದರಕ್ಷೆಯನ್ನು ಉರಿಯ ಹತ್ತಿರ ಹಿಡಿದು ಒಣ ಗಿಸಿದನು. ದಪ್ಪನೆಯ ಕಾಲುಚೀಲ ಅನೇಕ ಭಾಗಗಳಲ್ಲಿ ಹರಿದು ಹೋಗಿತ್ತು; ಪಾದಗಳಲ್ಲಿ ಹಸಿಗಾಯಗಳಾಗಿ ರಕ್ತಸ್ರಾವ ಆಗುತಿತ್ತು. ಕಾಲಿನ ಹರಡು ಮೊಣಕಾಲ ಗೆಣ್ಣಿನಷ್ಟು ಉಬ್ಬಿತ್ತು ! ತನ್ನಲ್ಲಿದ್ದ ದಪ್ಪ ಬಟ್ಟೆಗಳನ್ನೇ ಹರಿದು ಸುತ್ತಲೂ ಬಿಗಿಯಾಗಿ ಕಟ್ಟಿದನು. ಯಾಂತ್ರಿಕವಾಗಿ ಒಂದಾದ ಮೇಲೊಂದು ರಕ್ಷಣಾಕಾರ್ಯಗಳು ನಡೆದವು. ಆಮೇಲೆ ಕುದಿಯುತ್ತಿದ್ದ ನೀರನ್ನು ಬಾಯಿಗೆ ಸುರಿದುಕೊಂಡನು. ಗಡಿಯಾರಕ್ಕೆ ಕೀಲುಕೊಟ್ಟನು. ಹಾಸುಗಂಬಳಿಗಳ ಮಧ್ಯೆ ತೆವಳಿದನು. ಸತ್ತವನಂತೆ ನಿದ್ರಿಸಿದನು. ಮಧ್ಯರಾತ್ರಿಯ ಕಗ್ಗತ್ತಲು ಯಾವಾಗಲೋ ಬಂದುಹೋಯಿತು. ಮೋಡ ಕವಿದಿದ್ದರೂ ಸೂರ್ಯನು ಈಶಾನ್ಯದಲ್ಲಿ ಕಾಣಿ ಸಿಕೊಂಡನು. ಅಂತೂ ಆ ಭಾಗದಲ್ಲಿ ಬೆಳಗಾಯಿತು ! ಬೆಳಿಗ್ಗೆ ಆರು ಘಂಟೆಗೆ ಎಚ್ಚರವಾದರೂ, ಹಾಗೆಯೆ ಮಲಗಿದ್ದನು. ಮೋಡ ತುಂಬಿದ ಆಕಾಶವನ್ನು ದಿಟ್ಟಿಸಿ ನೋಡಿದನು. ತನಗೆ ಹಸಿವಾಗಿದೆ ಯೆಂಬ, ಅರಿವಾಯಿತು. ಮೊಣಕೈ ಮೇಲೆ ಹೊರಳಿದಾಗ ಎಲ್ಲಿಂದಲೋ ಗಟ್ಟಿ ಯಾಗಿ ಹೂಂಕರಿಸಿದ ಶಬ್ದ ಕೇಳಬಂತು. ಅದನ್ನು ಕೇಳಿದೊಡನೆಯೆ ಸಾಯ ಕನು ಬೆಚ್ಚಿ ಬಿದ್ದನು. ಕ್ಯಾರಿಬ್ ಗೂಳಿಯೊಂದು ಅವನನ್ನು ಎಚ್ಚರಿಕೆ ಯಿಂದಲೂ ಕುತೂಹಲದಿಂದಲೂ ನೋಡುತಿತ್ತು ! ಐವತ್ತು ಅಡಿಗಳಷ್ಟು ದೂರವೂ ಇಲ್ಲ. ತಕ್ಷಣ ನಾಯಕನ ತಲೆಗೆ ಹೊಳೆಯಿತು ; ಕ್ಯಾರಿಬ್ ಮಾಂಸ ಎಷ್ಟು ರುಚಿಕರ ! ಹೇಗಿದ್ದರೂ ಬೆಂಕಿ ಹತ್ತಿರದಲ್ಲಿದೆ ; ತುಂಡು ತುಂಡು ಮಾಂಸ ಗಳನ್ನು ಒಂದು ಸಾರಿ ಉರಿಯಮೇಲೆ ಆಡಿಸಿದರೆ ಸಾಕು ; ಹದಮಾಡುವಾಗ ಚಟಪಟಗುಟ್ಟುವ ಶಬ್ದ ಎಷ್ಟು ಹಿತಕರ ! ಯಂತ್ರದಂತೆ ಅವನ ಕೈ ಪಕ್ಕಕ್ಕೆ ಚಾಚಿ ಬಂದೂಕವನ್ನು ಎತ್ತಿಕೊಂಡಿತು. ಮುದಿಲ್ಲದಿದ್ದರೂ ಪರವಾಗಿಲ್ಲ. ಗುರಿ ತೋರಿಸುವ ಮಣಿಯನ್ನು ಹಿಡಿದು, ಮೋಚಕವನ್ನು ಎಳೆದನು. ಅದರೆ ಗೂಳಿ ಮತ್ತೊಮ್ಮೆ ಹೂಂಕರಿಸಿ ನೆಗೆಯುತ್ತಾ ಓಡಿಹೋಯಿತು. ಮಧ್ಯೆ ಮಧ್ಯೆ ಕಲ್ಲು ದಿಬ್ಬಗಳಿಗೆ ಅದರ ಗೊರಸು ಸಿಕ್ಕಿಕೊಂಡು ರಟ ರಟ ಸದ್ದು ಮಾಡಿತು. ಆದರೂ ಬಿಡಿಸಿಕೊಂಡು ಓಡುತ್ತಿತ್ತು, ನಾಯಕನು ಹಿಡಿಶಾಪಹಾಕುತ್ತ ಮದ್ದಿಲ್ಲದ ಬಂದೂಕವನ್ನು ಆ ಕಡೆ