ವಿಷಯಕ್ಕೆ ಹೋಗು

ಪುಟ:ಬಾಳ ನಿಯಮ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ನಿಯಮ ಎಸೆದನು. ಜೋರಾಗಿ ನರಳುತ್ತ ಮೇಲೇಳಲು ಪ್ರಯತ್ನ ಪಟ್ಟನು. ಮೂಳೆಯ ಕೀಲುಗಳು ತುಕ್ಕು ಹಿಡಿದಂತೆ ಕಂಡಿತು ; ಕುಳಿಯಿಂದ ಈಚೆಗೆ ಬರುವುದೇ ಕಷ, ಕೇವಲ ಮನಸ್ಸರ್ಯವೊಂದರಿಂದಲೇ ಕೆಲಸನಡೆಯಬೇಕಾಯಿತು. ಕಾಲನ್ನು ವಶಪಡಿಸಿಕೊಂಡಮೇಲೆ, ನೆಟ್ಟಗೆ ನಿಲ್ಲಲು ಮತ್ತೊಂದು ನಿಮಿಷ ಬೇಕಾಯಿತು. ಸಣ್ಣ ತಿಮ್ಮೋಂದನ್ನು ನಿಧಾನವಾಗಿ ಹತ್ತಿದನು. ಸುತ್ತಲೂ ನೋಡಿ ದನು. ಯಥಾಪ್ರಕಾರ ಮರ ಗಿಡಗಳ ಲಕ್ಷಣಗಳೇ ಇಲ್ಲ. ಎಲ್ಲೆಲ್ಲಿ ನೋಡಿ ದರೂ ಮನಸ್ಸಿಗೆ ಬೇಸರತರುವಂಥ ಬೂದುಬಣ್ಣದ ಕಲ್ಲುಗಳು ; ಹಾಗೂ ಅದೇ ಬಣ್ಣದ ಸಣ್ಣ ಸಣ್ಣ ಸರೋವರಗಳು, ನದಿಗಳು, ಇದನ್ನು ಪ್ರತಿಬಿಂಬಿಸುವಂತೆ ಆಗಸಕ್ಕೂ ಮಂಕುಕವಿದಿತ್ತು. ಸೂರ್ಯನೇ ಇದ್ದಿಲ್ಲ ; ತೋರಿಕೆಯ ಸೂಚ ನೆಯೂ ಇದ್ದಿಲ್ಲವೆಂದೇ ಹೇಳಬೇಕು. ಉತ್ತರ ಪ್ರದೇಶಗಳ ಬಗ್ಗೆ ನಾಯಕನಿಗೆ ಸಾಕಷ್ಟು ಪರಿಶ್ರಮವಿರಲಿಲ್ಲ. ಹಿಂದಿನ ರಾತ್ರಿ ಹೇಗೆ ಆ ಸ್ಥಳಕ್ಕೆ ಬಂದೆ ನೆಂಬುದು ಅವನಿಗೆ ಮರೆತು ಹೋಗಿತ್ತು. ಆದರೇನಂತೆ ? ದಾರಿಯಂತೂ ತಪ್ಪಿರಲಿಲ್ಲ. ಸ್ವಲ್ಪ ಸಮಯದಲ್ಲೇ ಕಡ್ಡಿ ಪುಳ್ಳೆಗಳ ನಾಡನ್ನು ತಲಪುತ್ತೇನೆ, ಮುಂದಿನ ಬೆಟ್ಟದಾಚೆ ಎಡಗಡೆಯಲ್ಲಿ ಆ ನಾಡು ಇರಬಹುದು ಎಂದು ಯೋಚಿಸಿದನು. ಸ್ವಲ್ಪ ಹಿಂದಕ್ಕೆ ಸರಿದು ಪ್ರಯಾಣಕ್ಕೆ ಅನುಕೂಲವಾಗುವಂತೆ ಗಂಟು ಮೂಟೆಕಟ್ಟಿದನು. ತನ್ನಲ್ಲಿದ್ದ ಬೆಂಕಿಕಡ್ಡಿಗಳ ಮೂರು ಕಟ್ಟುಗಳನ್ನು ಮತ್ತೊಮ್ಮೆ ನೋಡಿಕೊಂಡನು. ಬರಿಯ ಮೂಸ್ ಚರ್ಮ ಹದಿನೈದು ಪೌಂಡುಗಳಷ್ಟು ಭಾರವಿತ್ತು. ಮೂಟೆಯನ್ನು ಹೊತ್ತು ಹಗಲ ಪ್ರಯಾಣ ವನ್ನು ಆರಂಭಿಸಿದನು. * ಆಗಾಗ ಎಡಕ್ಕೇ ವಾಲುತ್ತಾ, ಮಸ್ಯೆಗೆ ಕಾಯಿಗಳನ್ನು ತಿನ್ನಲು ನಿಂತು ಬಿಡುತ್ತಿದ್ದನು. ಕಾಲು ಸೆಡೆದುಕೊಂಡಿತ್ತು ; ಕುಂಟು ನಡಿಗೆಯಂತೂ ಎದ್ದು ಕಾಣುತಿತ್ತು. ಆದರೆ ಈ ನೋವು ಹೊಟ್ಟೆಯ ನೋವಿನಷ್ಟು ತೀವ್ರ ವಾಗಿರಲಿಲ್ಲ. ಹಸಿವಿನ ಬಾಧೆ ವಿಪರೀತವಾಗಿತ್ತು. ಅವನ ಬಾಯಿ ಒಂದೇ ಪದಾರ್ಥವನ್ನು ಎಡಬಿಡದೆ ಅಗಿಯುತಿತ್ತು. ಮಾರ್ಗದರ್ಶನದಲ್ಲೇ ಇದ್ದ ದೃಷ್ಟಿ ಪಥ ಬೇರೆಯಾಯಿತು. ಕಡ್ಡಿ ಪುಳ್ಳೆಗಳ ನಾಡಿನ ಮೇಲೆ ಗಮನ ಕಡಿಮೆ ಯಾಯಿತು. ಮಸ್ಸೆಗ್ ಕಾಯಿಗಳಿಂದ ಹಸಿವಿನ ಉಪಶಮನವಾಗಲಿಲ್ಲ. ತಿಂದಮೇಲೂ ಅದರ ಪ್ರಭಾವದಿಂದ ನಾಲಿಗೆ ಮತ್ತು ಬಾಯಿಗಳು ಚುಚ್ಚು