ಪುಟ:ಬಾಳ ನಿಯಮ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬಾಳ ಪ್ರೇಮ ವಂತಾದುವು ; ಮುಟ್ಟಿದರೆ ನೋಯುವಂಥ ಹುಣ್ಣುಗಳು ಕಾಣಿಸಿಕೊಂಡವು. ಕಣಿವೆಯೊಂದರ ಬಳಿ ಬಂದಾಗ, ಕಲ್ಲುಸಾಲಿನಲ್ಲಿ ಅಡಗಿದ್ದ ಟಾರ್ ಮಿಗನ್ ಹಕ್ಕಿ ಮೇಲಕ್ಕೆ ಹಾರಿಬಂತು. ವೈರ್ ಎಂದು ಶಬ್ದ ಮಾಡುತ್ತ ಗಿರನೆ ತಿರುಗುತಿತ್ತು. “ಕರ್-ಕರ್‌-ಕರ್” ಎಂದು ಕೂಗಾಡಹತ್ತಿತು. ನಾಯ ಕನು ಹಕ್ಕಿಗೆ ಕಲ್ಲಿನಿಂದ ಹೊಡೆದನು. ಆದರೆ ಗುರಿ ತಪ್ಪಿ ಹೋಯಿತು. ಮೂಟೆ ಯನ್ನು ಬದಿಗೊತ್ತಿ ಮೆಲ್ಲಗೆ ಹಿಂಬಾಲಿಸಿದನು ; ಬೆಕ್ಕು ಗುಬ್ಬಚ್ಚಿಯನ್ನು ಬೆನ್ನಟ್ಟಿ ಹೋಗುವಂತಿತ್ತು ! ಹರಿತವಾದ ಕಲ್ಲ ತುದಿಗಳಿಗೆ ಅವನ ಪ್ಯಾಂಟು ಸಿಕ್ಕಿ ಹರಿಯಿತು; ಒಂದೇ ಸಮನೆ ಮೊಳಕಾಲಿನಿಂದ ರಕ್ತ ಸುರಿಯಿತು. ಆದರೆ ಅಂತರಾಳದಲ್ಲಿ ಹಸಿವೆಂಬ ಕರಾಳ ರೂಪದ ಗಾಯ ಮನೆ ಮಾಡಿರು ವಾಗ, ದೇಹದ ಸಾಮಾನ್ಯ ಗಾಯಗಳು ಅವನ ಗಣನೆಗೆ ಬರುತ್ತಿರಲಿಲ್ಲ. ಒದ್ದೆಯಾಗಿದ್ದ ಪಾಚಿಯ ಮೇಲೆ ವಿಲಿಮಿಲಿಗುಟ್ಟುತಿದ್ದನು ; ಬಟ್ಟೆಯ ಮೂಲಕ ಚಳಿಯು ದೇಹಾದ್ಯಂತ ವ್ಯಾಪಿಸಿತು; ಅಷ್ಟಾದರೂ ಅವನಲ್ಲಿ ಯಾವ ಪ್ರತಿಕ್ರಿಯೆಯೂ ಉಂಟಾಗಲಿಲ್ಲ. ಆಹಾರ ಜ್ವರದ ಮಹಾ ಪ್ರಭಾವ ಅಷ್ಟರ ಮಟ್ಟಿಗಿತ್ತು ! ... ಪ್ರತಿ ಸಲವೂ ಟಾರ್‌ಮಿಗನ್ ರೆಕ್ಕೆ ಬಡಿಯುತ್ತಾ ಅವನ ಮುಂದೆಯೆ ಸುತ್ತುತಿತ್ತು. ಕೈಗೆ ಮಾತ್ರ ಸಿಗುತ್ತಿರಲಿಲ್ಲ. ಕಡೆಗೆ, ಅದು ಕೂಗು ತಿದ್ದ 'ಕರ್ ಕರ್' ಎಂಬ ಶಬ್ದ ಅವನನ್ನು ಹಾಸ್ಯ ಮಾಡುವಂತಿತ್ತು. ನಾಯಕ ನಿಗೆ ಕೋಪವೇರಿತು. ಹಕ್ಕಿಯಂತೆಯೆ ಕೂಗಿ ಪ್ರತಿಭಟಿಸುವವನಂತೆ ಶಾಪ ಹಾಕಿದನು. ಒಮ್ಮೆ ಹಕ್ಕಿಯೊಂದು ಬಂಡೆಯಮೇಲೆ ಮಲಗಿ ನಿದ್ರಿಸುತ್ತಿತ್ತು. ಇದನ್ನ ರಿಯದೆ ನಾಯಕನು ಆ ಬಂಡೆಯ ಮೇಲೆಯೇ ತೆವಳುತಿದ್ದನು. ಥಟ್ಟನೆ ಆ ಹಕ್ಕಿಯು ಬಂಡೆಯ ಬದಿಯಿಂದೆದ್ದು ಅವನ ಮುಖದ ನೇರಕ್ಕೆ ಸರಿ ಯಾಗಿ ರೆಕ್ಕೆ ಬಡಿಯಿತು. ನಾಯಕನು ಸುಮ್ಮನಿರಲಿಲ್ಲ. ಬಾರ್‌ಮಿಗನ್ ಮೇಲೇಳುತಿದ್ದಂತೆ, ಅಷ್ಟೇ ಆಶ್ಚರ್ಯಕರವಾಗಿ ಅದನ್ನು ಗಬಕ್ಕನೆ ಹಿಡಿಯಲು ಪ್ರಯತ್ನ ಪಟ್ಟನು. ಆದರೆ ಅವನ ಕೈಗೆ ಮೂರು ಗರಿಗಳು ಮಾತ್ರ ಸಿಕ್ಕಿದವು, ಹಕ್ಕಿಯು ಸಂಪೂರ್ಣ ಕೈಗೆ ಸಿಕ್ಕದೆ ಹಾರುತಿದ್ದಾಗ, ನಾಯಕನಿಗೆ ದ್ವೇಷ ಉಕ್ಕೇರಿಬಂತು. ತನಗೆ ಅದು ತುಂಬ ಅನ್ಯಾಯ ಮಾಡುತ್ತಿದೆ ಎಂದು ಭಾವಿಸಿದನು. 'ಹಾಳಾಗಿಹೋಗಲಿ,' ಎನ್ನುತ್ತಾ ಪುನಃ ಹಿಂತಿರುಗಿದನು. ಯಥಾಪ್ರಕಾರ ಮೂಟೆಯನ್ನು ಭುಜಕ್ಕೇರಿಸಿದನು. ಹಗಲು ಕಳೆಯುತ್ತಾ ಬಂತು. ಬೇಟೆಗೆ ಅನುಕೂಲವಾದ ಪ್ರಾಣಿಗಳು