ಪುಟ:ಬೆಳಗಿದ ದೀಪಗಳು.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭೦

ಸಂಪೂರ್ಣ-ಕಥೆಗಳು

ಎರಡು ಲಕ್ಷ ವಿದ್ದು, ಅಲ್ಲಿಯ ಸೂರ್ಯಮಂದಿರದೊಳಗಿನ ವೈಭವದ ವರ್ಣನೆಯನ್ನು ಓದಿದಂತೆ, ರಾಮಾಯಣದೊಳಗಿನ ರಾವಣನ ಲಂಕೆಯ ವರ್ಣನೆಯನ್ನು ಓದಿದಂತಾಗುತ್ತದೆ. ಇಂಥ ದುರ್ಬಲರಾದ ಜನರ ಕೈಯಲ್ಲಿ ಇಂಥ ವೈಭವ ಪೂರ್ಣವಾದ ದೇಶದ ಸ್ವಾಮಿತ್ವವನ್ನು ಕೊಡುವದರಲ್ಲಿ ಈಶ್ವರೀ ಸಂಕೇತವಾದರೂ ಯಾವದಾಗಿತ್ತೆಂಬದು ಆಶ್ಚರ್ಯಕಾರಕವಾಗಿದೆ, ಪೇರೂ ರಾಜ್ಯದ ಮೇಲೆ ಸ್ಪಾನಿಆರ್ಡರು ಮ್ಯಾಂಕೋ ಎಂಬ ಒಬ್ಬ ಇಂಕಾನನ್ನು ಸ್ಥಾಪಿಸಿ, ಸರ್ವಸತ್ತೆಯನ್ನು ತಮ್ಮ ಕೈಯಲ್ಲಿ ತೆಗೆದುಕೊಂಡರು. ಪರಸ್ಥರಾದ ಇನ್ನೂರು ಜನರು ಸಾವಿರಾರು ಮೈಲುಗಳ ಮೇಲಿಂದ ಬಂದು ಆರು ತಿಂಗಳಗಳಲ್ಲಿಯೇ ಪೇರೂದಂಥ ವಿಸ್ತಿರ್ಣ ರಾಜ್ಯದ ಸ್ವಾಮಿತ್ವವನ್ನು ಸಂಪಾದಿಸಿದ ಉದಾಹರಣವು ಜಗತ್ತಿನ ಇತಿಹಾಸದಲ್ಲಿ ಅನ್ಯತ್ರ ದೊರೆಯುವದು ದುರ್ಲಭವು.