ಪುಟ:ಬೆಳಗಿದ ದೀಪಗಳು.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೯೬

ವನ್ನು ಸಾದರಿಸಿದರು. ಆದರೆ, ಇಂಥ ನ್ಯಾಯಪ್ರಿಯರಾದ ಜನರು ಹತ್ತರದಲ್ಲಿ ಒಬ್ಬರಂತೆ ಅಲ್ಪರಾಗಿದ್ದರಿಂದ ಅವರ ಪ್ರತಿಪಾದನೆಯ ಉಪಯೋಗವು ತುಸುಮಟ್ಟಿಗಾದರೂ ಆಗಲಿಲ್ಲ. ಲಷ್ಕರೀ ಕೋರ್ಟು ತನ್ನ ನಿರ್ಣಯವನ್ನು ಹೇಳಿದ ದಿವಸವೇ ಸೂರ್ಯಾಸ್ತವಾದ ಬಳಿಕ ರಾತ್ರಿಯಲ್ಲಿ ಅಟಾಹುಲಪ್ಪಾನಿಗೆ ಅಗ್ನಿ ಸಂಸ್ಕಾರವನ್ನು ಮಾಡಬೇಕೆಂದಾದರೂ ವಿಧಿಸಿತ್ತು. ಆ ದಿವಸವೆಂದರೆ, ೨೯ನೇ ಆಗಸ್ಟ ಸನ್ ೧೫೩೩ನೇ ಇಸ್ವಿಯು, ಆ ದಿವಸ ರಾತ್ರಿಯಲ್ಲಿ ಅಟಾಹುಲಪ್ಪಾನು ಕಬ್ಬಿಣದ ಸರಪಣಿಯಿಂದ ವಧಸ್ತಂಭಕ್ಕೆ ಬಿಗಿಯಾಗಿ ಕಟ್ಟಲ್ಪಟ್ಟನು; ಅವನ ಸುತ್ತಲೂ ಕಟ್ಟಿಗೆಯ ತುಂಡುಗಳು ರಚಿಸಲ್ಪಟ್ಟವು. ನಿನ್ನ ಮರಣಕಾಲದಲ್ಲಾದರೂ ನೀನು ಕ್ರಿಸ್ತಿ ಧರ್ಮದ ಬಾಸ್ತಿ ಸ್ಮಾ ತೆಗೆದುಕೊಂಡು ಆ ಧರ್ಮವನ್ನು ಸ್ವೀಕರಿಸೆಂದು ಫ್ರಾಯರವಾಲವರ್ದನು ಅವನಿಗೆ ಉಪದೇಶ ಮಾಡಹತ್ತಿದನು, ಕ್ರಿಸ್ತಿಯಾದರೆ, ನಿನ್ನನ್ನು ಸುಡುವದರ ಬದಲಾಗಿ, ಗಲಪಾಶದಿಂದ ನಿನ್ನ ಪ್ರಾಣವನ್ನು ತೆಗೆದು ಕೊಳ್ಳುವೆವೆಂಬ ಆಶ್ವಾಸನವಾದರೂ ಅವನಿಗೆ ಕೊಡಲ್ಪಟ್ಟಿತು. ಈ ಆಶ್ವಾಸನ ವಾದರೂ ನಿಜವಾದದ್ದೇನೆಂದು ದೈನ್ಯಬಟ್ಟು ಅವನು ಪಿಝಾರೋನಿಗೆ ಪ್ರಶ್ನವನ್ನು ಮಾಡಿದನು. ಅವನಿಂದ ಆಶ್ವಾಸನ ದೊರೆತ ಬಳಿಕ, ಅಗ್ನಿ ಯಿಂದ ಸುಟ್ಟು ಒದ್ದಾಡಿ ಭಸ್ಮಿಭೂತವಾಗುವದಕ್ಕಿಂತ ಗಲಪಾಶದಿಂದ ಪ್ರಾಣವನ್ನು ಬಿಡುವದು ಒಳಿತಾದದ್ದೆಂದು ಯೋಚಿಸಿ, ಆಟಾಹುಲಪ್ಪಾನು ತನ್ನ ಧರ್ಮವನ್ನು ಬಿಟ್ಟು ವಾಲವರ್ದನ ಹಸ್ತದಿಂದ ಬಾಪ್ತಿಸ್ಮೆಯನ್ನು ತೆಗೆದುಕೊಂಡನು. ಬಳಿಕ 'ಗರೋಟ' ಎಂಬ ಗಲಪಾಶದಿಂದ ಅವನ ಪ್ರಾಣವು ತೆಗೆದುಕೊಳ್ಳಲ್ಪಟ್ಟಿತು.

ಈ ರೀತಿಯಾಗಿ ಅಟಾಹುಲಪ್ಪಾನು ಗತಪ್ರಾಣನಾದ ಬಳಿಕ ಪಿಝಾರೋನು ಮುಂದೆ ಸನ್ ೧೫೩೩ನೇ ಇಸ್ವಿಯ ನವೆಂಬರ ತಿಂಗಳಿನ ೧೫ನೇ ತಾರೀಖಿನ ದಿವಸ ಕುರೋ ರಾಜಧಾನಿಯ ಮೇಲೆ ಸಾಗಹೊಗಿ ಆ ಪಟ್ಟಣವನ್ನು ಹಸ್ತಗತ ಮಾಡಿಕೊಂಡನು. ಆ ಕಾಲಕ್ಕೆ ಪೇರುವ್ಹಿಯಿನ ಜನರು ಸ್ಪಾನಿಆರ್ಡರಿಗೆ ಸ್ವಲ್ಪ ಪ್ರತಿಬಂಧವನ್ನು ಮಾಡಿದರು, ಆದರೆ, ಸಿಂಹನ ಉಡ್ಡಾಣಕ್ಕೆ ಕುರಿಗಳು ಪ್ರತಿಬಂಧ ಮಾಡಿದಂತೆ ಪೇರುವ್ಹಿಯನ್ ಜನರ ಈ ಪ್ರತಿಬಂಧವು ಹಾಸ್ಯಾಸ್ಪದವಾಯಿತು. ಈ ರಾಜಧಾನಿಯ ಜನಸಂಖ್ಯೆಯು