ಪುಟ:ಬೆಳಗಿದ ದೀಪಗಳು.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೮

ಸಂಪೂರ್ಣ-ಕಥೆಗಳು

ಮಾಡಿ ರಾಷ್ಟ್ರದ ಹಣವನ್ನು ಹಾಳು ಮಾಡೋಣ, ೫. ಪಿರಾರೋನ ವಿರುದ್ಧ ವಾಗಿ ತನ್ನ ಜನರಿಗೆ ಉತ್ತೇಜನವನ್ನು ಕೊಡೋಣ ಇವೇ ಮುಂತಾದವು ಹನ್ನೆರಡು ದೊಷಗಳಲ್ಲಿ ಮುಖ್ಯ ಮುಖ್ಯವಾದ ದೋಷಗಳಾಗಿದ್ದವು. ಇವುಗಳಿಗೆ ಅಟಾಹುಲಪ್ಪಾನು ಕೊಟ್ಟ ಉತ್ತರವೆಂದರೆ, “ ಅನೇಕ ಸ್ತ್ರೀಯರನ್ನು ಮದುವೆ ಮಾಡಿಕೊಳ್ಳುವದೂ, ಮೂರ್ತಿ ಪೂಜೆಯನ್ನು ಮಾಡುವದೂ ನನ್ನ ಧರ್ಮಕ್ಕೆ ಮಾನ್ಯವಾಗಿದೆ. ಆದರೆ ನ್ಯಾಯಾನ್ಯಾಯ ಮಾಡುವದಕ್ಕೆ ಪರಸ್ಥರಾದ ನಿಮಗೆ ಆಧಿಕಾರವಿಲ್ಲ. ನನ್ನ ಅಣ್ಣನ ಕೂಡ ನಾನು ಯುದ್ಧವನ್ನು ಮಾಡಿರಬಹುದು, ಇಲ್ಲವೆ ಪೇರೂ ದೇಶದೊಳಗಿನ ಸಂಪತ್ತಿಯನ್ನು ನಾನು ನನ್ನ ಮನಸ್ಸಿಗೆ ಬಂದತೆ ಹಾಳುಮಾಡಿರಬಹುದು, ಆದರೆ ಆ ಸಂಗತಿಗಳು ನನ್ನ ಅಧಿಕಾರಕ್ಕೆ ಒಳಪಟ್ಟಿದ್ದವು ಅದರ ಸಲುವಾಗಿ ನಾನು ನಿಮಗೆ ಉತ್ತರವನ್ನು ಕೊಡಬೇಕೆಂದು ನನಗೆ ಅವಶ್ಯ ತೋರುವದಿಲ್ಲ. ನಿಮ್ಮ ವಿರುದ್ಧವಾಗಿ ಬಂಡಾಯವನ್ನು ಎಬ್ಬಿಸುವದಕ್ಕೆ ನಾನು ನನ್ನ ಪ್ರಜರನ್ನು ಉತ್ತೇಜಿಸಿದನೆಂಬ ಮಾತು ಅಸಂಭವನೀಯವಾದದ್ದು ; ಯಾಕೆಂದರೆ, ನಾನು ನಿಮ್ಮ ಪ್ರತಿಬಂಧದಲ್ಲಿದ್ದು, ನನ್ನ ಕಡೆಗೆ ಬರುವ ನನ್ನ ಸರದಾರರ ಭಟ್ಟಿಯನ್ನು ನಾನು ನಿಮ್ಮ ದ್ವಿಭಾಷಿಯ ಸಮಕ್ಷದಲ್ಲಿ ತೆಗೆದುಕೊಳ್ಳುತ್ತಿರುವುದರಿಂದ, ಬಂಡಾಯ ಮಾಡುವದಕ್ಕೆ ಪ್ರೋತ್ಸಾಹಕವಾದ ಸಂದೇಶಗಳನ್ನು ನನ್ನ ಪ್ರಜರಿಗೆ ಕಳಿಸುವದು ನನಗೆ ಶಕ್ಯವಾದ ಮಾತಲ್ಲ.” ಅಟಾಹುಲಪ್ಪಾನ ಈ ಉತ್ತರವು ಸರಲವಾದದ್ದೂ, ಸ್ಪಷ್ಟವಾದದ್ದೂ ಇತ್ತು. ಆದರೆ, ನ್ಯಾಯದ ಸೋಗು ಮಾಡಿ, ಇಂಕಾ ದಾಜನಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವ ನಿಶ್ಚಯವು ಸ್ಪಾನಿಶ ಲಷ್ಕರದಲ್ಲಿ ಮೊದಲೇ ಮಾಡಲ್ಪಟ್ಟಿದ್ದರಿಂದ, ಕೊರ್ಟಮಾರ್ಶಲವು ಆಟಾಹುಲಪ್ಪಾನು ದೋಷಿಯಂದು ನಿರ್ಣಯಿಸಿ, ಅವನನ್ನು ಕಂಬಕ್ಕೆ ಕಟ್ಟಿ, ಅವನ ಸುತ್ತಲೂ ಕಟ್ಟಿಗೆಯ ರಾಶಿಯನ್ನು ರಚಿಸಿ ಅದಕ್ಕೆ ಬೆಂಕಿಯನ್ನು ಹಚ್ಚಿ, ಅವನನ್ನು ಜೀವಂತ ಸುಟ್ಟು ಬಿಡಬೇಕೆಂಬ ಅಮಾನುಷವಾದ ಶಿಕ್ಷೆಯನ್ನು ವಿಧಿಸಿತು, ಸ್ಪಾನಿಶ್ ಸೈನ್ಯದಲ್ಲಿ ನ್ಯಾಯಪ್ರಿಯರೂ, ಸಹೃದಯ ಅಂತಃಕರಣದವರೂ ಆಗಿದ್ದ ಅಲ್ಪ ಸ್ವಲ್ಪ ಜನರು ಅಟಾಹುಲಪ್ಪಾನನ್ನು ಈ ರೀತಿಯಾಗಿ ನಿರ್ದಯತನದಿಂದಲೂ, ಅನ್ಯಾಯದಿಂದಲೂ ಸುಡುವದು ಅಯೋಗ್ಯವಾದದ್ದೆಂದು ಕೋರ್ಟ ಮಾರ್ಶಲಕ್ಕೆ ತಮ್ಮ ಲೇಖನ