ಪುಟ:ಬೆಳಗಿದ ದೀಪಗಳು.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೀರೂ ಹಾಗೂ ಪಿಝಾರೋ

೧೬೭

ಬೇಕೆಂಬ ಏವಂಚನೆಯಲ್ಲಿ ಸ್ಪಾನಿಶ ಸೈನ್ಯವು ಬಿದ್ದಿತು. ಪೇರೂವ್ಹಿಯನ ರಾಷ್ಟ್ರದೊಳಗಿನ ಅಸಂಖ್ಯಾತರಾದ ಜನರು ಅವನ ಮುಕ್ತತೆಗಾಗಿ ತಮ್ಮ ಚಿಕ್ಕ ಸೈನ್ಯದ ಮೇಲೆ ಸಾಗಿ ಬಂದರೆ, ಅಟಾಹುಲಪ್ಪಾನು ತಮ್ಮ ಕೈಯೊಳಗಿಂದ ಪಾರಾಗುವದಲ್ಲದೆ, ಅನಾಯಾಸವಾಗಿ ದೊರೆದ ಬಂಗಾರವಾದರೂ ತಮ್ಮ ಕೈ ಬಿಟ್ಟು ಹೋಗಿ ನಿರರ್ಥಕವಾಗಿ ತಮ್ಮ ಜೀವಕ್ಕಾದರೂ ಅಪಾಯವಾದೀತೆಂಬ ಭೀತಿಯು ಸಿರು ಶಾರೋನ ಸೈನ್ಯಕ್ಕೆ ಹುಟ್ಟಹತ್ತಿ, ಆಟಾಹುಲಪ್ಪಾನ ವಿಷಯವಾಗಿ ನಮ್ಮನ್ನು ನಿರ್ಭಿತರನ್ನಾಗಿ ಮಾಡುವದಕ್ಕೆ ಯಾವದಾದರೊಂದು ಉಪಾಯವನ್ನು ಯೋಚಿಸಬೇಕೆಂದು ಸೈನ್ಯದವರು ಪಿಝಾರೋನ ಬೆನ್ನು ಹತ್ತಿದರು. ತನ್ನ ಬಂಗಾರವನ್ನು ಎತ್ತಿ ಹಾಕಿಯೂ ತನ್ನನ್ನು ಬಂಧಮುಕ್ತನನ್ನಾಗಿ ಮಾಡುವದಕ್ಕೆ ಒರು ಪಿಝಾರೋನು ಹಿಂದೆಮುಂದೆ ನೋಡುತ್ತಾನೆಂಬದನ್ನು ಕಂಡು ಅಟಾಹುಲಪ್ಪಾನು ತೀರ ಸಂತಾಪಗೊಂಡನು, ಆದರೆ, ಬಂದಿವಾಸದಲ್ಲಿ ಬಿದ್ದು ತೀರ ಬಲಹೀನನಾದ ರಾಜನ ಸಂತಾಪವನ್ನು ಕೇಳು ವವರಾರು ? "ನನ್ನ ಮುಕ್ತತೆಯು ಎಂದಾಗುವದು ? ವಿಶ್ವಾಸಘಾತವನ್ನು ಮಾಡಿ ನನ್ನನ್ನು ಆಮರಣ ಪ್ರತಿಬಂಧದಲ್ಲಿಯೇ ಇಡುವ ವಿಚಾರವನ್ನು ನೀವು ಮಾಡಿರುವಿರೇನು ?” ಮುಂತಾದ ಪ್ರಶ್ನೆಗಳ ಸೃಷ್ಟಿಯನ್ನೇ ಇಂಕಾ ರಾಜನು ಪಿಝಾರೋನ ಮೇಲೆ ಪ್ರತಿನಿತ್ಯ ಮಾಡಹತ್ತಲು, ಆವನ ಮುಕ್ತತೆಯಾಗುವದು ಒತ್ತಟ್ಟಿಗುಳಿದು ಅವನ ಕೈಕಾಲುಗಳು ಮಾತ್ರ ಶೃಂಖಲೆಗಳಿಂದ ಬದ್ಧವಾದವು. ಅಟಾಹುಲಪ್ಪಾನನ್ನು ವಿಲಂಬಮಾಡದೆ ಕೊಂದು ಹಾಕಬೇಕು; ಇಲ್ಲದಿದ್ದರೆ ಲಕ್ಷಾವಧಿ ಜನರು ನನ್ನ ಮೈ ಮೇಲೆ ಬಿದ್ದು ಸಂಪೂರ್ಣವಾಗಿ ನಮ್ಮ ನಾಶವನ್ನು ಮಾಡುವರೆಂದು ಒರು ಕಾರೋನ ಸೈನ್ಯದವರು ಅನ್ನಹತ್ತಿದರು. ಆಗ್ಗೆ ಅಟಾಹುಲಪ್ಪಾನ ಮೇಲೆ ಹನ್ನೆರಡು ಅಪರಾಧಗಳನ್ನು ಮಾಡಿದ ದೋಷವು ಹೊರಿಸಲ್ಪಟ್ಟು ಕೋರ್ಟಮಾರ್ಶಲ್ಲದ ಮುಂದೆ ಅವನ ವಿಚಾರಣೆ ಯಾಗತಕ್ಕದ್ದೆಂದು ಗೊತ್ತಾಯಿತು. ೧ ತನ್ನ ಅಣ್ಣನ ಕೊಲೆಮಾಡೋಣ, ೨. ಮೂರ್ತಿ ಪೂಜೆಯಂಥ ಪಾಪಕರ್ಮವನ್ನು ಆಚರಿಸೋಣ, ೩. ಅನೇಕ ಸ್ತ್ರೀಯರನ್ನು ವಿವಾಹ ಮಾಡಿಕೊಳ್ಳೋಣ, ಹಾಗೂ ವ್ಯಭಿಚಾರ ಮಾಡೋಣ, ೪ ತನ್ನ ಅಣ್ಣನನ್ನು ನಾಶಗೊಳಿಸುವದಕ್ಕಾಗಿ ಪೇರೂ ರಾಜ್ಯದೊಳಗಿನ ಸಂಪತ್ತಿಯ ದುರುಪಯೋಗ