ಪುಟ:ಬೆಳಗಿದ ದೀಪಗಳು.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೬

ಸಂಪೂರ್ಣ-ಕಥೆಗಳು

ಕೊಡುವನೆಂದು ವಿಚಾರಮಥನಾದ ಅಟಾಹುಲಪ್ಪಾನು ಯೋಚಿಸಹತ್ತಿದನು. ಆದರೆ, ಸಿರುತಾರೋನು ಇಲ್ಲದ್ದೊಂದು ಹೊಸ ಹೊಸ ನೆವಗಳನ್ನು ಹೇಳಿ ಇಂದು ನಾಳೆ ಎನ್ನ ಹತ್ತಿದನು. ನಿಮ್ಮ ಬಂಗಾರದ ತೂಕವೇ ಆಗಿಲ್ಲೆಂದು ಕೆಲವು ದಿವಸಗಳು ಹೋದವು, ಕಡೆಗೆ ಬಂಗಾರದ ತೂಕವಾಗಿ ಅದನ್ನು ಕರಗಿಸಿ, ಅದರ ಇಟ್ಟಂಗೆಗಳು ಮಾಡಲ್ಪಟ್ಟವು. ಈ ಬಂಗಾರದ ಬೆಲೆಯು ೩೫ ಲಕ್ಷ ಗಿನಿಯಾಯಿತು. ೫| ಕೋಟಿ ರೂಪಾಯದ ಬಂಗಾರವನ್ನು ಪಿರುಲಾರೆನು ಎರಡು ತಿಂಗಳುಗಳಲ್ಲಿ ಸಂಪಾದಿಸಿದನು, ಪಿಝಾರೋನ ಸೈನ್ಯದಲ್ಲಿ ಎರಡು ಸಾವಿರ ಸ್ವಾನಿಆರ್ಡರು ಮಾತ್ರ ಇದ್ದರು. ಪ್ರತಿಯೊಬ್ಬ ಸ್ಪಾನಿಳರ್ಡನ ಪಾಲಿಗೆ ೨|| ಲಕ್ಷ ಬೆಲೆಯ ಬಂಗಾರವು ಬರಬಹುದಾಗಿತ್ತು. ಇಷ್ಟು ದ್ರವ್ಯ ದೊರೆದರೂ ಪಿಝಾರೋನು ಅಟಾಹುಲಪ್ಪಾನನ್ನು ಮುಕ್ತ ಮಾಡಲಿಲ್ಲ. "ನೀನು ನಿನ್ನ ಅಣ್ಣನ ಕೊಲೆಯನ್ನು ಮಾಡಿಸಿರುವಿ, ಸ್ಪಾನಿಶ ಜನರ ವಿರುದ್ಧವಾಗಿ ಬಂಡಾಯವನ್ನು ಮಾಡುವದಕ್ಕೆ ನೀನು ನಿನ್ನ ಪ್ರಜರನ್ನು ಉತ್ತೇಜಿಸುತ್ತಿರುವಿ, ಸಹಸ್ರಾವಧಿ ಸ್ತ್ರೀಯರನ್ನು ಮದುವೆ ಮಾಡಿಕೊಂಡು ವ್ಯಭಿಚಾರದಂಥ ಘೋರವಾದ ಪಾತಕಗಳನ್ನು ಮಾಡಿರುವಿ; ಈ ಎಲ್ಲ ಕಾರಣಗಳ ಸಲುವಾಗಿ ನಿನ್ನ ವಿಚಾರಣೆಯಾಗುವದು ಅಗತ್ಯವಿದೆ;' ಈ ಪ್ರಕಾರವಾಗಿ ಪಿಝಾರೋನೂ ಅವನ ಸೈನ್ಯದವರೂ ಅಟಾಹುಲಪ್ಪಾನನ್ನು ಅಪರಾಧಿಯನ್ನಾಗಿ ಎಣಿಸಹತ್ತಿದರು.

ಅಟಾಹುಲಪ್ಪಾನಿಗೆ ದೇಹಾಂತ ಶಿಕ್ಷೆಯು

ಅಟಾಹುಲಪ್ಪಾನು ತಂದುಕೊಟ್ಟ, ಬೆಳ್ಳಿ ಬಂಗಾರದ ವಿಭಾಗಣಿಯಲ್ಲಿ ಸ್ಪೇನದ ಅರಸನ ಭಾಗವೆಂದು ಒಂದು ಪಂಚಮಾಂಶವು ಒಂದು ಕಡೆಯಲ್ಲಿ ತೆಗೆದಿಡಲ್ಪಟ್ಟಿತು, ಪಿಝಾರೋ, ಅವನ ತಮ್ಮನಾದ ಹರ್ನಾಂಡೊ ಹಾಗೂ ಡಿ. ಸೋಟೂ ಈ ತ್ರಿವರ್ಗರು ಮುಖ್ಯರಾದ ಸೇನಾನಿಗಳೆಂದು ಅರ್ಧ ಭಾಗವನ್ನು ಎತ್ತಿದರು. ಇಂಕಾ ರಾಜಸ ಬಂಗಾರದ ಸಿಂಹಾಸನವು ಪಿಝಾರೋನಿಗೆ 'ಸ್ಪೆಶಲ್' ಪಾರಿತೋಷಕವೆಂದು ಕೊಡಲ್ಪಟ್ಟಿತು. ಸೈನ್ಯದೊಳಗಿನ ಪ್ರತಿಯೊಬ್ಬ ಶಿಪಾಯಿಗೆ ಇಪ್ಪತ್ತೈದರಿಂದ ಐವತ್ತು ಸಾವಿರ ರೂಪಾಯಿಗಳವರೆಗೆ ದೊರೆದವು. ಅಟಾಹುಲಪ್ಪಾ ನಿಂದ ದೊರೆದ ದ್ರವ್ಯದ ವ್ಯವಸ್ಥೆಯು ಈ ರೀತಿಯಾಗಿ ಆದಬಳಿಕ, ಅಟಾಹುಲಪ್ಪಾನ ವ್ಯವಸ್ಥೆಯನ್ನು ಹೇಗೆ ಹಚ್ಚ