ಪುಟ:ಬೆಳಗಿದ ದೀಪಗಳು.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೬೫

ವಾದ ಅಟಾಹುಲಪ್ಪಾನ ಜೀವವನ್ನು ಪರಮಾವಧಿಯ ನಿರ್ದಯತನದಿಂದ ಪರಕೀಯರಾದ ಸ್ಪ್ಯಾನಿಆರ್ಡರ ತೆಗೆದುಕೊಳ್ಳದೆ ಇರಲಾರರೆ”೦ದು ನೀರಿನಲ್ಲಿ ಮುಣುಗಿ ಸಾಯುವದರ ಪೂರ್ವದಲ್ಲಿ ಹೌಸಕಾರನು ತನ್ನ ತಮ್ಮನನ್ನು ಶಾಪಿಸಿದನು, ರಾಜಮಂದಿರದೊಳಗಿನ ಸರೋವರದಲ್ಲಿ ಈ ಸುತ್ತಿರುವಾಗ ಕೈ ಸೋತು ಹೌಸಕಾರನು `ಆಕಸ್ಮಿಕವಾಗಿ ನೀರಿನಲ್ಲಿ ಮುಣುಗಿ ಸತ್ತನೆಂದು ಅಟಾಹುಲಪ್ಪಾನ ಸೇವಕ ಸುದ್ದಿಯನ್ನು ಹುಟ್ಟಿಸಿದರು. ಆದರೆ, ನಿಜವಾದ ಸಂಗತಿಯು ಪಿಝಾರೋನಿಗೆ ತಿಳಿದುಬಂದಿತು. ಪ್ರತಿ ಬಂಧದಲ್ಲಿರುವಾಗ, ಇಂಥ ಕೃಷ್ಣ ಕಾರಸ್ಥಾನಗಳನ್ನು ಮಾಡಿ ನಿಮ್ಮ ಅಣ್ಣನ ಕೊಲೆಯನ್ನು ಮಾಡಿಸಿದನೆಂಬ ಸಂಗತಿಯು ಅತ್ಯಂತ ನೀಚಶನದೂ, ರಾಕ್ಷಸವೃತ್ತಿಯ ಮನುಷ್ಯನಿಗೆ ಮಾತ್ರ ಶೋಭಿಸುವಂಥದೂ ಆಗಿದೆ"೦ದು ಪಿಝಾರೋನು ಅಟಾಹುಲಪ್ಪಾನ ನಿರ್ಭತೃನೆಯನ್ನು ಮಾಡಿದನು. ' ನಾನು ಇಲ್ಲಿ ನಿಮ್ಮ ಪ್ರತಿಬಂಧದಲ್ಲಿದ್ದೇನೆ. ನನ್ನ ಪಕ್ಷದಲ್ಲಿಬೇರೆ ಯಾರೋ ನನ್ನ ಅಪ್ಪಣೆಯ ಹೊರತು ಈ ಕಾವ್ಯವನ್ನು ಮಾಡಿದ್ದಾರೆ. ನನ್ನ ಅಣ್ಣನ ಕೊಲೆಯಲ್ಲಿ ನನ್ನ ಅಂಗವು ಯತ್ ಕಿಂಚಿತವಾದರೂ ಇಲ್ಲ” ಮುಂತಾದ ಕಾರಣ ಪರಂಪರೆಯನ್ನು ಅಟಾಹುಲಪ್ಪಾನು ಮುಂದೆ ಮಾಡಿದನು.

ಇಷ್ಟರಲ್ಲಿ ಅಟಾಹುಲಪ್ಪಾ ನು ಕೊಡಮಾಡಿದ ಬಂಗಾರವು ದೂರದೂರ ಸ್ಥಳಗಳಿಂದ ಬರಹತ್ತಿತು. ಇಂಕಾನ ರಾಜಮಂದಿರದಲ್ಲಿಯ ದೇವಾಲಯದಲ್ಲಿಯೂ ಉಪಕರಣಿಯ ಪಾತ್ರಗಳೂ, ಕೂಡುವ ಮಣೆಗಳೂ, ದೀಪಗಳನ್ನು ಹಚ್ಚುವ ಸಮೆಗಳೂ ಬಂಗಾದವಾಗಿದ್ದವು. ಇದಲ್ಲದೆ ಎಷ್ಟೋ ದೇವಾಲಯಗಳ ಗೋಡೆಗಳೂ, ನೆಲವೂ ಬ೦ಗಾರದ ದಪ್ಪಾದ ತಗಡುಗಳಿ೦ದ ಆಚ್ಛಾದಿತವಾಗಿದ್ದವು. ಬಂಗಾರದ ಇಂಥ ಅಪರಂಪಾರವಾದ ಸಂಚಯವು ಪೇರಾ ದೇಶದಲ್ಲಿದ್ದದ್ದರಿಂದ ಅಟಾಹುಲಪ್ಪಾನು ಕೊಡಮಾಡಿದ ಒಂದು ಕೋಣೆಯ ತುಂಬ ಬಂಗಾರವು ಆಗಲೇ ಕೂಡಿತು. ಅವನು ಸ್ವಸಂತೋಷದಿಂದ ತಾನಾಗಿಯೇ ಕೊಡುತ್ತೇನೆಂದು ಹೇಳಿದ ಬೆಳ್ಳಿಯಾದರೂ ಪಿಝಾರೋನ ವಶಕ್ಕೆ ಬಂದಿತು. ಗೊತ್ತು ಮಾಡಿದಂತೆ ನಿಮ್ಮ ಕಡಿಂದ ಬೆಳ್ಳಿ ಬಂಗಾರವು ಬಂದು ನನಗೆ ಮುಟ್ಟಿತೆಂದು ಪಿಝಾರೋನು ಅಟಾಹುಲಪ್ಪಾನಿಗೆ ಪಾವತಿ 'ಯ ನ್ನಾದರೂ ಕೊಟ್ಟನು. ಇನ್ನು ಮೇಲೆ ಪಿಝಾರೋನು ತನ್ನನ್ನು ಬಿಟ್ಟು