ಪುಟ:ಬೆಳಗಿದ ದೀಪಗಳು.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೪

ಸಂಪೂರ್ಣ-ಕಥಗಳು

ಹೌಸಕಾರ ಹಾಗೂ ಅಟಾಹುಲಪ್ಪಾ ಈ ಉಭಯ ರಾಜಪುರುಷರೂ ಆತ್ಮಘಾತಕರಾಗಿಯೂ, ರಾಜಕಾರಣದಲ್ಲಿ ತೀರ ಹೊಸಬರಾಗಿಯ ತೋರುತ್ತಾರೆ. ಅಟಾಹುಲಪ್ಪಾ ನು ಬಂಧಮುಕ್ತನಾಗುವದಕ್ಕಾಗಿ ಒಂದು ಕೋಣೆಯ ತುಂಬ ಬಂಗಾರವನ್ನು ಮಾತ್ರ ಕೊಡಲಿಕ್ಕೆ ಒಪ್ಪಿಕೊಂಡಿದ್ದಾನೆಂಬ ಸಂಗಶಿಯು ಹೌಸಕಾರನಿಗೆ ತಿಳಿದ ಕೂಡಲೆ, "ಕುಝ್ಕೋ ರಾಜಧಾನಿಯಲ್ಲಿ ಇಂಥ ಸಾವಿರಾರು ಕೋಣೆಗಳು ತುಂಬಿ ಉಳಿಯುವಷ್ಟು ಬಂಗಾರವಿದೆ. ನೀವು ನನ್ನನ್ನು ನನ್ನ ತಮ್ಮನ ಪ್ರತಿಬಂಧದಿಂದ ಮುಕ್ತ ಮಾಡಿ ಪೇರೂದ ಕಟ್ಟದ ಮೇಲೆ ಕೂಡಿಸಿದರೆ, ಅಟಾಹುಲಪ್ಪಾನು ಕೊಡಮಾಡಿದ ಬಂಗಾರದ ಹತ್ತು ಮಡಿಯಷ್ಟು ಬಂಗಾರವನ್ನು ನಾನು ಕೊಡುತ್ತೇನೆ ” ೦ದು ಹೌಸಕಾರನು ತನ್ನ ಚಾರರ ಮುಖಾತರವಾಗಿ ಸಿರು ಕಾರೋನಿಗೆ ತಿಳಿಸಿದನು. ಆಟಾಹುಲಪ್ಪಾನು ಪಿಝಾರೋನ ಶಿಬಿರದಲ್ಲಿ ಬಂದಿವಾನನಾಗಿದ್ದರೂ ದೊಡ್ಡ ದೊಡ್ಡ ಇಂಕಾ ಸರದಾರರಿಗೆ ಅವನ ಬೆಟ್ಟಗಾಗಿ ಬರುವದಕ್ಕೆ ಪ್ರತಿಬಂಧವಿದ್ದಿದ್ದಿಲ್ಲ. ಮೇಲಾಗಿ ಕೋಣೆತುಂಬ ಬಂಗಾರವನ್ನು ಕೊಡತಕ್ಕದ್ದು, ಅದಕ್ಕಾಗಿ ಯೋಗ್ಯ ಸ್ಥಳದಲ್ಲಿ ಚಾರರನ್ನು ಕಳಿಸಕತ್ಯವೆಂಬ ನೆವದಿಂದ ಅಟಾಹುಲಪ್ಪಾನು ತನ್ನ ಸೇವಕರನ್ನು ಮೇಲಿಂದ ಮೇಲೆ ತನ್ನ ಕಡೆಗೆ ಕರೆಸಿಕೊಳ್ಳುತ್ತಿದ್ದನು. ಇವರ ಮುಖಾಂತರವಾಗಿ ತನ್ನ ಮಲಅಣ್ಣನಾವ ಹೌಸಕಾರನು ಏರುತಾರೋನ ಕೂಡ ನಡಿಸಿದ ಗುಪ್ತ ಕಾರಸ್ಥಾನವು ಅಟಾಹುಲಪ್ಪಾನಿಗೆ ತಿಳಿದುಬಂದಿತ್ತು. ಪಿಝಾರೋ ನುಸುವರ್ಣದ ಆಶೆಗಾಗಿ ಹೌಸಕಾರನ ಪಕ್ಷವನ್ನು ಕಟ್ಟಿದರೆ, ತನಗೆ ಆಮರಣ ಬಂದಿವಾಸದಲ್ಲಿಯ ಇರಬೇಕಾಗುವದೆಂಬ ಭೀತಿಯು ಅಟಾಹುಲಸ್ಥಾನಿಗೆ ಹುಟ್ಟ ಹತ್ತಿತು. ಪಿಝಾರೋನಿಗೆ ಕೊಡಮಾಡಿದ ಸುವರ್ಣವನ್ನು ತರುವದಕ್ಕಾಗಿ ಕಳಿಸಿದ ಸೇವಕರ ಮುಖಾಂತರವಾಗಿ, ಅವನು ಕೆಲವು ಸಾಂಕೇತಿಕವಾದ ಸ೦ದೇಶಗಳನ್ನು ಕಳಿಸಿ, ತನ್ನ ಸಾಪತ್ನ ಅಣ್ಣನ ಕೊಲೆಮಾಡಿಸಿದನು. ಹೌಸಕಾರನನ್ನು ತಣ್ಣಗಿನ ನೀರಿನ ಸರೋವರದಲ್ಲಿ ಬಲಾತ್ಕಾರದಿಂದ ಮುಣುಗಿಸಿ, ಅಟಾಹುಲಪ್ಪಾನ ಪಕ್ಷದವರು ಅವನನ್ನು ಕೊಂದರು. “ ನೀರಿನಲ್ಲಿ ಮುಣುಗಿಸಿ ನನ್ನ ಶ್ವಾಸಗಳನ್ನು ನಿರೋಧಿಸಿ, ನನ್ನ ಪ್ರಾಣಗಳನ್ನು ತೆಗೆದುಕೊಳ್ಳುತ್ತಿರುವ ಕೂರಸಾದ, ನಿರ್ದಯನಾದ, ಬ೦ಧುಘಾತಕಿಯಾದ, ನರಪಶು