ಪುಟ:ಬೆಳಗಿದ ದೀಪಗಳು.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೬೩

ಆಶ್ಚರ್ಯಚಕಿತರಾದದ್ದನ್ನು ನೋಡಿ, ನನಗೆ ಚಮತ್ಕಾರವೆನಿಸುತ್ತದೆ. ನಾವು ಕುಳಿತಿರುವ ಕೋಣೆಯ ತುಂಬ ಬಂಗಾರವನ್ನು ಕ್ಷಣಾರ್ಧದಲ್ಲಿ ನಾನು ನಿಮಗೆ ತಂದುಕೊಡುತ್ತೇನೆ ” ಈ ಸಂಗತಿಯು ಮೊಟ್ಟಮೊದಲು ಪಿಝಾರೋನಿಗೆ ನಿಜವಾದದ್ದೆಂದು ತೋರಲಿಲ್ಲ. ಅಟಾಹುಲಪ್ಪಾನು ಇಲ್ಲದ್ದೊಂದು ಹರಟೆಯನ್ನು ಕೊಚ್ಚುತ್ತಾನೆಂದು ಅವನು ಭಾವಿಸಿದನು. “ನೀವು ನನ್ನನ್ನು ಬಂಧ ಮುಕ್ತನನ್ನಾಗಿ ಮಾಡಿದರೆ, ಈ ಕೋಣೆಯ ತುಂಬ ಬಂಗಾರವನ್ನು ನಾನು ನಿಮಗೆ ತಂದುಕೊಡುವೆನೆ "೦ದು ಅಟಾಹುಲಪ್ಪಾನು ಆಗ್ರಹಪೂರ್ವಕವಾಗಿ ಮೇಲಿಂದಮೇಲೆ ಪಿಝಾರೋನಿಗೆ ಹೇಳಹತ್ತಿದನು. ಕೊನೆಗೆ ಅಟಾಹುಲ ಪ್ಲಾನು ೨೨ ಪೂಟು ಉದ್ದವಾದ ೧೭ ಫೂಟು ಅಗಲವಾದ ಹಾಗೂ ೯ ಫೂಟು ಎತ್ತರವಾದ ಕೋಣೆಯನ್ನು ಬಂಗಾರದಿಂದ ತುಂಬಿ, ಬಂಗಾರವನ್ನು ಪಿಝಾರೋನಿಗೆ ಅರ್ಪಣ ಮಾಡಿದರೆ ಪಿಝಾರೋನು ಅವನನ್ನು ಬಂಧಮುಕ್ತ ಮಾಡಬೇಕೆಂದು ಗೊತ್ತಾಯಿತು. ಈ ಬಂಗಾರದ ಹೊರತು ಇಷ್ಟೇ ಬೆಳ್ಳಿಯನ್ನಾದರೂ ತಂದುಕೊಡುವೆನೆಂದು ಅಟಾಹುಲಪ್ಪಾನು ತಾನಾಗಿಯೇ ಸ್ವಸಂತೋಷದಿಂದ ಪಿಝಾರೋನಿಗೆ ಹೇಳಿದನು. ಅಟಾಹುಲಪ್ಪಾನು ಎರಡು ತಿಂಗಳದ ಅವಧಿಯಲ್ಲಿ ತನ್ನ ವಚನವನ್ನು ಪೂರ್ಣ ಮಾಡತಕ್ಕದ್ದೆಂದು ಮಾತಾದರೂ ಗೊತ್ತಾಗಿತ್ತು.

ಪರಕೀಯರಾದ ಸ್ಪಾನಿಆರ್ಡರು ಅಟಾಹುಲಪ್ಪಾ ನನ್ನು ಸೆರೆಹಿಡಿದಿದ್ದಾರೆಂಬ ವರ್ತಮಾನವು ಪರಾಭೂತನಾಗಿ ಪ್ರತಿ ಬಂಧದಲ್ಲಿದ್ದ ಹೌಸಕಾರನಿಗೆ ವಿದಿತವಾಯಿತು. ಆಗ್ಗೆ ಅವನು ಪಿಝಾರೋನಿಗೆ ಹೇಳಿ ಕಳಿಸಿದ್ದೇನಂದರೆ, “ನನ್ನ ಹಾಗೂ ನನ್ನ ತಮ್ಮನ ನಡುವೆ ರಾಜ್ಯದ ಸಂಬಂಧವಾಗಿ ವಿರೋಧವಿದೆ. ತಮ್ಮಂಥ ಬಲಾಡ್ಯರಾದ ಸರಸ್ಥರು ಅದರ ನಿರ್ಣಯವನ್ನು ಮಾಡಬೇಕು.” ಅಟಾಹುಲಪ್ಪಾನ ಮಲಅಣ್ಣನ ಈ ವಿನಂತಿಯು ಪಿಝಾರೋನಿಗೆ ಒಳ್ಳೆ ಹಿತಕರವಾಗಿ ಪರಿಣಮಿಸಿತು. ಯಾಕಂದರೆ, ಪೇರೂದ ಸಾಮ್ರಾಜ್ಯದ ಸ್ವಾಮಿತ್ವದ ಸಂಬಂಧವಾಗಿ ಉದ್ಭವಿಸಿದ ವಾದದ ನಿರ್ಣಯವನ್ನು ಮಾಡುವ ಕೆಲಸವೇ ತನ್ನ ಕಡೆಗೆ ಬಂದರೆ, ತನಗೆ ಅನುಕೂಲವಾದ ಹಸ್ತಕನೇ ಪಟ್ಟದ ಮೇಲೆ ಕುಳಿತು, ಪೇರೂದ ರಾಜ್ಯವು ಅನಾಯಾಸವಾಗಿಯೇ ಸ್ಪೇನದೇಶದ ಮಾಂಡಲಿಕ ಸಂಸ್ಥಾನನವಾಗುವದೆಂದು ಅವನು ಯೋಚಿಸಿದನು.