ಪುಟ:ಬೆಳಗಿದ ದೀಪಗಳು.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೨

ಸಂಪೂರ್ಣ-ಕಥೆಗಳು

ಸ್ಪಾನಿಆರ್ಡರು ಯೋಚಿಸಿದರು. ಆದರೆ, ಅವನನ್ನು ಕೊಲ್ಲುವದರಕಿಂತ ಜೀವಂತ ಹಿಡಿದು ಸೆರೆಯಲ್ಲಿಚುವದೇ ವಿಶೇಷವಾಗಿ ಲಾಭದಾಯಕವಾದದ್ದೆಂದು ಪಿಝಾರೋನು ಹೇಳಲು, ಆವನ ಅನುಯಾಯಿಗಳು ರಾಜನನ್ನು ಬಂಧಿಸಿ ಒಂದು ಕೊಠಡಿಯಲ್ಲಿ ಇಟ್ಟರು. ಶಿಬಿರದ ಸುತ್ತಲೂ ನೆರೆದ ಇಂಕಾ ಜನರ ಮೇಲೆ ಸಶಸ್ತ್ರ ಪ್ರಾಣಿಗಳಾದ ಸ್ವಾಸಿಆರ್ಡರು ಸಾಗಿಹೋಗಿ ಅವರಲ್ಲಿ ಕೆಲವರನ್ನು ಕಡಿದು ತುಂಡರಿಸಿದರು; ಉಳಿದವರನ್ನು ಅವರ ಮೇಲೆ ಕುದುರೆಗಳನ್ನು ಹಾಕಿ ಓಡಿಸಿದರು, ಈ ರೀತಿಯಾಗಿ ಏರುತಾರೋನ ಯೋಚನೆಯು ಕೈಗೂಡಿತು. ಇಂಕಜನರ ಸಾರ್ವಭೌಮನಾದ ಅಟಾಹುಲಪ್ಪಾನು ದನಗಳನ್ನು ಕಾಯುವ ಅಕ್ಷರಶತ್ರುವಾದ, ಆದರೆ ಸಾಹಸಿಯಾದ ಸ್ಥಾನಿಆರ್ಡ ಮನುಷ್ಯನ ಬಂದಿವಾನನಾದನು. ! ಅಟಾಹುಲಪ್ಪಾನನ್ನು ಸೆರೆಹಿಡಿಯುವ ಗೊಂದಲದಲ್ಲಿ ನಾಲೈದು ಸಾವಿರ ತದ್ದೇಶೀಯರು ಕೊಲ್ಲಲ್ಪಟ್ಟರು. ಉಳಿದ ಸೈನ್ಯವು ಹೆದರಿ ಪಲಾಯನ ಸೂತ್ರವನ್ನು ಹೇಳಿತು, ಹಲವರನ್ನು ಸ್ಪಾನಿಆರ್ಡರು ಸೆರೆಯಲ್ಲಿ ಹಿಡಿದು ಅವರನ್ನು ತಮ್ಮ ದಾಸರನ್ನಾಗಿ ಮಾಡಿದರು. ಇಂಕಾನ ಸೈನ್ಯವು ಓಡಿಹೋದ ಬಳಿಕ, ಪಿಝಾರೋನು ತನ್ನ ಸೈನ್ಯದೊಳಗಿನ ಮನಸ್ಸು ಸವಾರರನ್ನು ಅಟಾಹುಲಪ್ಪಾನು ಇಳಿದುಕೊಂಡಿದ್ದ ತೋಟದೊಳಗಿನ ಬಂಗಲೆಯನ್ನು ಸುಲಿದುಕೊಂಡು ಬರುವದಕ್ಕಾಗಿ ಕಳುಹಿಕೊಟ್ಟನು. ಈ ಸುಲಿಗೆಯಲ್ಲಿ ತಮ್ಮ ಕೈವಶವಾದ ಬೆಳ್ಳಿ ಬಂಗಾರದ ದೊಡ್ಡ ದೊಡ್ಡ ಪಾತ್ರೆಗಳನ್ನು ನೋಡಿ, ಸ್ಪ್ಯಾನಿಆರ್ಡರು ಬೆರಗಾದರು. ದೊಡ ದೊಡ್ಡ ಆಕಾರದ ಪಕ್ಷಗಳಾದರೂ ಈ ಸುಲಿಗೆಯಲ್ಲಿ ಸ್ನಾನಿಆರ್ಡರಿಗೆ ದೊರೆದವು. ಸಲಿಗೆಯಲ್ಲಿ ದೊರೆತ ಬಂಗಾರವನ್ನು ಪಿಝಾರೋನ ಅವನ ಅನುಯಾಯಿಗಳೂ ಮೇಲಿಂದ ಮೇಲೆ ತೂಕ ಮಾಡಿ ನೋಡುವದನ್ನು ಆಟಾಹುಪ್ಪಾನು ಕಂಡು, ಪರಸ್ಥರಾದ ಈ ಆರ್ಡರ ಮಲದೇಶವು ದರಿದ್ರವಾಗಿರಬಹುದೆಂತಲೂ ಈ ಜನರು ಬಂಗಾರವನ್ನು ನೋಡಿರಬಹುದಾಗಿಲ್ಲೆಂತಲೂ ಅವನು ತರ್ಕಿಸಿದನು. ಅಪರಿಮಿತವಾದ ಬಂಗಾರದ ಆಮಿಷವನ್ನು ಇವರಿಗೆ ತೋರಿಸಿದರೆ, ಇವರು ತನ್ನ ಮುಕ್ತತೆಯನ್ನು ಮಾಡಬಹುದೆಂಬ ಅನುಮಾನವನ್ನು ಮಾಡಿ, ಅವನು ಪಿಝಾರೋನ ಹತ್ತಿರ ಹೋಗಿ ಅ೦ದದ್ದು : "ಸಲಿಗೆಯಲ್ಲಿ ದೊರೆತ ಅಲ್ಪ ಬಂಗಾರದಿಂದಲೇ ನೀವು