ಪುಟ:ಬೆಳಗಿದ ದೀಪಗಳು.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೬೦

ವಿನಂತಿಯನ್ನು ಕೇಳಿಕೊಂಡು, ರಾಜನ ಮುದ್ರೆಯು ಕ್ರೋಧದಿಂದಲೂ, ಸಂತಾಪದಿಂದಲೂ ಆರಕ್ತವಾಯಿತು. ನಮ್ಮ ದೇಶದ ಧರ್ಮವು ನಮಗೆ ವಂದನೀಯವಾಗಿದೆ, ನಮ್ಮ ಪರಮೇಶ್ವರನಾದ ಸೂರ್ಯನಿಗೂ, ಶ್ರೇಷ್ಠನಾದ ಮತ್ತೊಬ್ಬ ದೇವರು ಇರುವನೆಂದು ನಾವು ಮನ್ನಿಸುವದಿಲ್ಲ. ನಾನು ಪೇರೂ ದೇಶದ ಬಲಾಡ್ಯನಾದ ಸಾರ್ವಭೌಮನಿದ್ದು, ಸ್ಪೇನದ ರಾಜನ ವರ್ಚಸ್ಸನ್ನು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ” ರಾಜನು ಈ ಅರ್ಥದ ಉತ್ತರವನ್ನು ದ್ವಿಭಾಷಿಯ ಮುಖಾಂತರವಾಗಿ ಪಾದ್ರಿಗೆ ಕೊಟ್ಟನು. ನಿಮ್ಮ ಪೋಪನ ಧರ್ಮವು ಶ್ರೇಷ್ಠವಾಗಿದೆಂಬುದಕ್ಕೆ ಯಾವ ಪ್ರಮಾಣವೆಂದು ರಾಜನು ವಾಲವರ್ದನಿಗೆ ಪ್ರಶ್ನವನ್ನು ಮಾಡಿದನು. ಆಗ್ಗೆ ಫಾಯರನ ಬಾಯಬಲದ ಗ್ರಂಥವನ್ನು ಮುಂದೆಮಾಡಿದನು. ಬಾಯಬಲದ ಈ ಪುಸ್ತಕವನ್ನು ಕೈಯಲ್ಲಿ ತೆಗೆದುಕೊಂಡು ಅಟಾಹುಲಪ್ಪಾನು ಅದನ್ನು ಬಿರಕಾಸಿ ಒಗೆದನು. “ಪರಸ್ಟರಾದ ನೀವು ನನ್ನ ದೇಶದಲ್ಲಿ ಬಂದು, ಇಲ್ಲದ ಕಾರಭಾರವನ್ನು ನಡೆಸಿರುವಿರಿ, ಇದರ ವಿಚಾರಣೆಯನ್ನು ಮಾಡುವದರ ಸಲುವಾಗಿ ನಾನು ಬಂದಿದ್ದೇನೆ.” ಇದನ್ನು ಕೇಳಿ ಫ್ರಾಯರ ನಾಲವರ್ದನು ರೇಗಿಸಿದ್ದು, ಪಿಝಾರೋನನ್ನುದ್ದೇಶಿಸಿ ಅಂದದ್ದು, "ಈ ಉದ್ದಾಮ ರಾಜನು ನಮ್ಮ ಧರ್ಮ ಪುಸ್ತಕವನ್ನು ಭೂಮಿಯ ಮೇಲೆ ಬರಕಾಸಿ ಒಗೆದು, ನಮ್ಮ ಧರ್ಮದ ಆಪಮಾನವನ್ನು ಮಾಡಿದ್ದಾನೆ. ಇವನ ಸಮಾಚಾರವನ್ನು ನೀವು ಈಗಲೇ ತೆಗೆದುಕೊಳ್ಳಬೇಕೆಂದು, ನಿಮ್ಮ ಧರ್ಮ ಗುರುವಾದ ನಾನು ನಿಮಗೆ ಆಜ್ಞಾಪಿಸುತ್ತೇನೆ.” ಫ್ರಾಯರನ ಈ ಉದ್ಗಾರಗಳನ್ನು ಕೇಳಿದ ಕೂಡಲೆ, ಪಿಝಾರೋರೆನು ತನ್ನ ಕೈಯಲ್ಲಿದ್ದ ನಿಶಾನಿಯಿಂದ ಸಂಜ್ಞೆಯನ್ನು ಮಾಡಿದನು. ಸಂಕೇತವಾದ ಕೂಡಲೆ, ಶಿಬಿರದ ಸುತ್ತಲೂ ಗುಪ್ತವಾಗಿದ್ದ ಸೈನ್ಯವು ಕೂಡಲೆ ಓಡಿಬಂದು ರಾಜನ ಪಾಲಕಿಗೆ ಮುತ್ತಿಗೆ ಹಾಕಿತು, ಪತ್ರದಲ್ಲಿದ್ದ ಪೇರೂವ್ಹಿಯನ ಜನರ ಮೇಲೆ ಕುಡುರೆಗಳನ್ನು ಹಾಕಿ ಬರ್ಚಿಗಳಿಂದ ಚುಚ್ಚಿ ಅವರನ್ನು ದೂರ ಓಡಿಸಿತು. ತಮ್ಮ ರಾಜನನ್ನು ತಮ್ಮ ಸಮಕ್ಷದಲ್ಲಿ ಸೆರೆಹಿಡಿಯುವದನ್ನು ನೋಡಲಾರದೆ ಇಂಕಾ ಸೈನ್ಯದವರು ಧಾವಿಸಿ ಬರಲು ಸ್ಪಾನಿಶರು ಅವರ ಮೇಲೆ ಗುಂಡುಗಳ ಮಳೆಯನ್ನು ಸುರುವಿ ಸಾವಿರಾರು ಜನರನ್ನು ನೆಲಕ್ಕೆ ಉರುಳಿಸಿದರು. ಅಟಾಹುಲಪ್ಪಾನನ್ನಾದರೂ ಯಮಸದನಕ್ಕೆ ಕಳಿಸಬೇಕೆಂದು ಕೆಲವು