ಪುಟ:ಬೆಳಗಿದ ದೀಪಗಳು.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೦

ಸಂಪೂರ್ಣ-ಕಥೆಗಳು

ಕೇಳಿಕೊಂಡು ಹರ್ನ್ಯಾಂಡೋನು ತನ್ನ ಅಣ್ಣನ ಹತ್ತರ ಹೋದನು. ಅಟಾಹುಲಪ್ಪಾನು ತನ್ನ ಭೆಟ್ಟಿಗೆ ಬರುವನೆಂಬ ಸುದ್ದಿಯನ್ನು ಕೇಳಿ ಪಿಝಾರೋನಿಗೆ ಆನಂದವಾಯಿತು. ಅಟಾಹುಲಪ್ಪಾನು ಭೆಟ್ಟಿಗೆ ಬಂದ ಕೂಡಲೆ, ಅವನನ್ನು ಆಕಸ್ಮಿಕವಾಗಿ ಸೆರೆಯಲ್ಲಿ ಹಿಡಿಯತಕ್ಕದೆಂಬ ವಿಶ್ವಾಸಘಾತದ ಯೋಚನೆಯನ್ನು ಅವನು ಯೋಜಿಸಿದನು. ಮೆಕ್ಸಿಕೋದೊಳಗಿನ ಆರುಟೆಕ್ಕೆ ಜನರ ರಾಜನನ್ನು ತನ್ನ ದೇಶಬಾಂಧವನಾದ ಕೋರ್ಟೇರುನು ಹೀಗೆಯೇ ಸೆರೆಯಲ್ಲಿ ಹಿಡಿದು ಮೆಕ್ಸಿಕೊದ ರಾಜ್ಯವನ್ನು ಸಂಪಾದಿಸಿದ ಸಂಗತಿಯು ಪಿಝಾರೋನ ಧ್ಯಾನದಲ್ಲಿತ್ತು. ತನ್ನ ಯೋಚನೆಯನ್ನು ತನ್ನ ತಮ್ಮನಿಗೂ, ಮುಖ್ಯ ಮುಖ್ಯರಾದ ಸೇನಾನಿಗಳಿಗೂ ಅವನು ತಿಳಿಸಿದನು, ಅಟಾಹುಲಪ್ಪಾನು ತೀರ ಸ್ವಲ್ಪ ಸರದಾರರೊಂದಿಗೆ ತಮ್ಮ ಶಿಬಿರಕ್ಕೆ ಬರುವಂತೆ ಮಾಡಿ, ತಮ್ಮ ಸವಾರರನ್ನೂ ಸೈನ್ಯವನ್ನೂ ಶಿಬಿರದ ಸುತ್ತಲಿನ ಮಂದಿರದಲ್ಲಿ ಮುಚ್ಚಿಡತಕ್ಕದ್ದು; ಶಿಷ್ಟಾಚಾರದಂತೆ ಆಗತ ಸ್ವಾಗತ ಮಾಡುವದರಲ್ಲಿ ತಾನು ತೊಡಗಿದಾಗ, ವಿಶಿಷ್ಟ ಪ್ರಕಾರದ ಸೂಚನೆಯಾದ ಕೂಡಲೆ, ಕುದುರೆ ಸವಾರರು ಮುತ್ತಿಗೆಯನ್ನು ಹಾಕಿ ರಾಜನನ್ನು ಸೆರೆಯಲ್ಲಿ ಹಿಡಿಯುತಕ್ಕದ್ದೆಂಬ ಹಂಚಿಕೆಯನ್ನು ಪಿಝಾರೋನು ಹಾಕಿದನು. ವಿಶ್ವಾಸಘಾತವಾದೀತೆಂಬ ಸಂಶಯವು ಅಟಾಹುಲಪ್ಪಾನಿಗೆ ಬಂದಿತ್ತೆಂದು ತೋರುವದಿಲ್ಲ. ಯಾಕೆಂದರೆ, ಮೊದಲು ಗೊತ್ತಾದಂತೆ, ಮಾರನೆಯ ದಿವಸ ಅವನು ಒಂದು ಪಾಲಿಕೆಯಲ್ಲಿ ಕುಳಿತುಕೊಂಡು ಪಿಝಾರೋನ ಶಿಬಿರಕ್ಕೆ ಬಂದನು. ಅವನ ಸಂಗಡ ಅನೇಕ ಸರದಾರದರೂ ಇದ್ದರು. ಆವನ ಸೈನ್ಯವು ತುಸು ಅ೦ತರದ ಮೇಲೆ ಬೀದಿಬೀದಿಗಳಲ್ಲಿ ನಿಂತಿತ್ತು. ಅಟಾಹುಲಪ್ಪಾನ ಪಾಲಿಕೆಯು ಶಿಬಿರದಲ್ಲಿ ಬಂದಕೂಡಲೆ? ಪಿರುಾರೋನ ಸೈನ್ಯದ ಕೂಡ ಬಂದಿದ್ದ ಪ್ರಾಯರ ನಾಲವರ್ದ ಎಂಬ ಪಾದ್ರಿಯು ಮುಂದಾಗಿ, "ನಾವು, ಪೃಥ್ವಿಯ ಮೇಲೆ ಪರಮೇಶ್ವರನ ಪ್ರತಿನಿಧಿಯಾದ ಪೋರನ ಹಾಗೂ ಸ್ಪೇನದ ಬಾದಶಹನಾದ ಐದನೇ ಚಾರ್ಲಸನ ದೂತರಾಗಿದ್ದೇವೆ. ಪೋಪನ ಧರ್ಮವಾಗಿದ್ದ ಬ್ರಿಶ್ಚಾನಿಟಿಯನ್ನೂ, ಸ್ಪೇನದ ಸಾರ್ವಭೌಮ ಚಾರ್ಲಸನ ವರ್ಚಸ್ವವನ್ನೂ ನೀವು ಒಪ್ಪಿಕೊಳ್ಳತಕ್ಕದ್ದೆ"೦ದು ದ್ವಿಭಾಷಿಯ ಮುಖಾಂತರವಾಗಿ ನಿವೇದಿಸಿದ ಉದ್ದಾಮತನದ