ಪುಟ:ಬೆಳಗಿದ ದೀಪಗಳು.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೆರೂ ಹಾಗೂ ಪಿಝಾರೋ

೧೫೯

ಫೂಟು ಆಳವಾದ ಕೊನ್ನಾರವು ! ಕುದುರೆ ಸವಾರರಿಗಂತೂ ಈ ಘಟ್ಟವನ್ನೇರುವದು ತೀರ ಕಷ್ಟಪ್ರದವಾಯಿತು. ಆದರೂ ಇಂಥ ಬಿಕ್ಕಟ್ಟಿನ ಗುಡ್ಡಗಾಡ ಪ್ರದೇಶದೊಳಗಿಂದ ಪಾರಾಗಿ ಯಥಾಕಾಲದಲ್ಲಿ ಪಿಝಾರೋನು, ಕಾಕ್ಸಮರ್ಕಾಕ್ಕೆ ಬಂದು ಮುಟ್ಟಿದನು. ಪಟ್ಟಣದ ಆಚೆಯ ಮಗ್ಗಲಿಗೆ ಒಂದು ಹಳ್ಳದ ದಂಡೆಗುಂಟ ಎಷ್ಟೋ ಮೈಲಗಳ ವರೆಗೆ ಇಂಕಾ ಜನರ ಸೈನ್ಯವು ಹಬ್ಬಿ ಕೊಂಡಿತ್ತು. ಉತ್ತಮೋತ್ತಮವಾದ ಡೇರೆಗಳ ಸಾಲುಗಳೇ ಸ್ಪಾನಿ ಆರ್ಡರ ದೃಷ್ಟಿಗೆ ಬಿದ್ದವು. ಈ ಸೈನ್ಯದ ವ್ಯವಸ್ಥೆಯನ್ನು ನೋಡಿ, ಇಂಥ ದೊಡ್ಡದಾದ ಸೈನ್ಯವು ನಮ್ಮ ಮೇಲೆ ಕಡಿದುಬಿದ್ದರೆ, ನಾವು ನುಚ್ಚು ನುರಿಯಾಗುವೆವೆಂಬ ಭೀತಿಯಾದರೂ ಸ್ಪಾನಿಆರ್ಡರಿಗೆ ಹುಟ್ಟಿತು. ಆದರೆ, ಪಿಝಾರೋನ ಕುದುರೆ ಸವಾರರು ಕಾಕೃಮರ್ಕಾ ಪಟ್ಟಣವನ್ನು ಮುಟ್ಟಿದರೂ ಆವರಿಗೆ ಯಾರಿಂದಲೂ ಯಾವ ತೊಂದರೆಯು ಉಂಟಾಗಲಿಲ್ಲ, ಪಿಝಾರೋನ ತಮ್ಮನಾದ ಹರ್ನ್ಯಾಂಡೋನು ಇಬ್ಬರು ಸವಾರರನ್ನು ತೆಗೆದುಕೊಂಡು, ಅಟಾಹುಲಪ್ಪಾನು ಇಳಿದುಕೊಂಡಿದ್ದ ತೋಟದಲ್ಲಿ ಹೋಗಿ ರಾಜನ ಎದುರು ನಿಂತನು. "ಆಮರ್ಯಾದಿತವಾದ ಸಮುದ್ರದ ಆಚೆಕಡೆಗಿರುವ ಸ್ಪೇನ ದೇಶದ ನಿವಾಸಸ್ಥರು ನಾವಾಗಿದ್ದು, ರಾಜನ ಸೈನ್ಯದಲ್ಲಿ ಸೇವೆಯನ್ನು ಮಾಡುವದು ನಮ್ಮ ಉದ್ದೇಶವಾಗಿದೆ; ಹಾಗೂ ನಮ್ಮ ಸದ್ಧರ್ಮದ, ಅಂದರೆ ಖ್ರಿಶ್ಚನ್ ಧರ್ಮದ ಪ್ರಸಾರವನ್ನು ಇಂಕಾ ರಾಜ್ಯದಲ್ಲಿ ಮಾಡುವದು ನಮ್ಮ ವಿಚಾರವಾಗಿದೆ. ಅದಕ್ಕಾಗಿ ಅಟಾಹುಲಪ್ಪಾನು ನಮ್ಮ ಸ್ಪಾನಿಕರ್ಡರ ನಾಯಕನಾದ ಪಿಝಾರೋನ ಬೆಟ್ಟಗೆ ಅವನು ತನ್ನ ಸೈನ್ಯ ಸಮೇತನಾಗಿ ತಳ ಊರಿದ ಸ್ಥಳಕ್ಕೆ ಬರಬೇಕು. ” ಹರ್ನ್ಯಾಂಡೋನ ಈ ಭಾಷಣಕ್ಕೆ ಇ೦ಕಾ ರಾಜನು ಯಾವ ಉತ್ತರವನ್ನೂ ಕೊಡಲಿಲ್ಲ. ಅವನ ಹತ್ತಿರದಲ್ಲಿದ್ದ ಸರದಾರನೊಬ್ಬನು "ಒಳ್ಳೆದು ” ಎಂದು ಉತ್ತರವನ್ನು ಕೊಟ್ಟನು. ಉತ್ತರದಿಂದ ಸಮಾಧಾನವನ್ನು ಹೊಂದದೆ, ಇದಕ್ಕೂ ಹೆಚ್ಚು ಸ್ಪಷ್ಟವಾದ ಉತ್ತರವು ಬೇಕೆಂಬ ವಿನಂತಿಯನ್ನು ಹರ್ದ್ಯಾಂಡೋನು ಮಾಡಿಕೊಂಡನು. "ಈ ಹೊತ್ತು ನನ್ನ ಉಪವಾಸದ ದಿವಸವಾಗಿದೆ; ನಾಳಿನ ದಿವಸ ನಿಮ್ಮ ಕಪ್ತಾನನ ಬೆಟ್ಟಗೆ ಬರುವವು; ಅಲ್ಲಿಯವರೆಗೆ ನೀವು ಕಾಕ್ಸಮರ್ಕಾ ಪಟ್ಟಣದೊಳಗಿನ ಸಾರ್ವಜನಿಕ ಮಂದಿರದಲ್ಲಿ ವಿಶ್ರಮಿಸಿಕೊಳ್ಳಬೇಕು.” ಇದನ್ನು