ಪುಟ:ಬೆಳಗಿದ ದೀಪಗಳು.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೮

ಸಂಪೂರ್ಣ-ಕಥೆಗಳು

ಹುಲಪ್ಪಾನ ೨೫-೩೦ ಸಾವಿರ ಸೈನ್ಯದ ಮುಂದೆ ನಿಲ್ಲುವದು ಅಸಾಧ್ಯವೆಂಬ ಮಾತು ಪಿಝಾರೋನು ಅರಿತವನಾದ್ದರಿಂದ, ಅವನು ತನ್ನಲ್ಲಿದ್ದ ಒಬ್ಬ ದ್ವಿಭಾಷಿಯನ್ನು ರಾಜನ ಹತ್ತಿರ ಕಳಿಸಿ, "ಸ್ಪಾನಿಶ ಜನರಾದ ನಾವು ನಮ್ಮ ಸ್ಪಾನಿಶಬಾದಶಹರ ಆಜ್ಞಾನುಸಾರವಾಗಿ ನಿಮ್ಮ ಮಿತ್ರತ್ವವನ್ನು ಸಂಪಾದಿಸುವದಕ್ಕಾಗಿ ಬಂದಿದ್ದೇವೆ. ನಮಗೆ ಯುದ್ಧ ಕಲೆಯು ಚನ್ನಾಗಿ ಅವಗತವಾಗಿರುವದರಿಂದ, ರಾಜರು ನಮ್ಮ ಉಪಯೋಗವನ್ನು ಮಾಡಿಕೊಳ್ಳುವದಾಗಿದ್ದರೆ ಮಾಡಿಕೊಳ್ಳಬೇಕು. ರಾಜರಿಗೆ ಯಾರಾದರೂ ಶತ್ರುಗಳಿದ್ದರೆ ಅವರ ಕೂಡ ಯುದ್ಧ ಮಾಡಲು ನಾವು ಸಿದ್ಧರಿದ್ದೇವೆ.” ಈ ಅಭಿಪ್ರಾಯದ ಸಂದೇಶವನ್ನು ದ್ವಿಭಾಷಿಯ ಮುಖಾಂತರವಾಗಿ ಅಟಾಹುಲಪ್ಪಾನಿಗೆ ಕಳಿಸಿದನು. ಈ ಸಂದೇಶಕ್ಕೆ ಅಟಾಹುಲಪ್ಪಾ ಬಾದಶಹನಾದರೂ ತನ್ನ ವಕೀಲನ ಮುಖಾ೦ತರವಾಗಿ ಪಿಝಾರೋನಿಗೆ ಈ ಮುಂದಿನ ಉತ್ತರವನ್ನು ಕಳುಹಿಸಿಕೊಟ್ಟನು. "ಪರಸ್ಥರಾದ ನಿಮ್ಮ ಸ್ಪಾನಿಆರ್ಡ ಜನರ ಪರಾಕ್ರಮವನ್ನೂ, ಕೀರ್ತಿಯನ್ನೂ ಕೇಳಿ ನಾವು ಬಹಳ ಸಂತುಷ್ಟರಾಗಿರುತ್ತೇವೆ. ನೀವು ಕಾಮರ್ಕಕ್ಕೆ ಬಂದು ನಮಗೆ ಎಂದು ದರ್ಶನವನ್ನು ಕೊಡುವಿರೆಂಬದನ್ನು ತಿಳಿಸಬೇಕು. ನಿಮ್ಮ ದರ್ಶನದ ಉತ್ತು ಕತೆಯು ನಮಗೆ ಬಹಳವಾಗಿದೆ. ತನ್ನ ಮಾರ್ಗದಲ್ಲಿ ಯಾವ ಪ್ರತಿಬಂಧ ನನ್ನ ತರದೆ, ರಾಜನು ಸೈನ್ಯಸಮೇತನಾದ ತನ್ನನ್ನು ಕಾಕ್ಸಮಕಾ೯ಕ್ಕೆ ಕರೆಯುತ್ತಾನೆಂಬ ಸುದ್ದಿಯನ್ನು ಕೇಳಿ ಪಿಝಾರೋನು ತುಸು ಗೊಂದಲದಲ್ಲಿ ಬಿದ್ದನು. ತಮ್ಮ ಚಿಕ್ಕ ಸೈನ್ಯವು ಗುಡ್ಡವನ್ನೇರಿ ದಣಿದು ಕಾಕೃಮರ್ಕಾ ಮುಟ್ಟಿದ ಕೂಡಲೆ, ತಮ್ಮ ಮೇಲೆ ೨೫-೩೦ ಸಾವಿರ ಸೈನ್ಯವನ್ನು ತೆಗೆದುಕೊಂಡು ಹಲ್ಲಾ ಮಾಡುವ ವಿಚಾರವು ರಾಜನದಾಗಿರಬಹುದೆಂದು ಪಿಝಾರೋನಿಗೆ ಸಂಶಯ ಉತ್ಪನ್ನವಾಯಿತು. ಆದರೆ, ಪಿಝಾರೋನು ಒಳ್ಳೆ ಎದೆಗಾರನಾದ ವೀರನಾದ್ದರಿಂದ ಕಾಮಕಾfದವರೆಗೆ ಹೋಗುವ ವಿಚಾರವನ್ನು ಗಟ್ಟಿ ಮಾಡಿದನು. ಪರ್ವತದೊಳಗಿನ ಘಟ್ಟದ ಮಾರ್ಗವನ್ನು ಇಂಕಾ ರಾಜರು ಚನ್ನಾಗಿ ಕಟ್ಟಿದ್ದರೂ ಕೆಲಕೆಲವು ಸ್ಥಳಗಳಲ್ಲಿ ಒಬ್ಬ ಮನುಷ್ಯನು ಮಾತ್ರ ಹೋಗುವಷ್ಟು ದಾರಿಯಿತ್ತು. ಒಂದು ಬದಿಗೆ ಗೋಡೆ ಕಟ್ಟಿದಂತೆ ಆಕಾಶಪ್ರಾಯವಾದ ಉಚ್ಚ ಪರ್ವತವು, ಮತ್ತೊಂದು ಬದಿಗೆ ಸಾವಿರಾರು