ಪುಟ:ಬೆಳಗಿದ ದೀಪಗಳು.pdf/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೫೭

ಛೇದಿಸಿ ತನ್ನ ಮಾರ್ಗವನ್ನು ನಿಷ್ಕಂಟಕವಾಗಿ ಮಾಡಿಕೊಂಡನೆಂದು ಸ್ಪಾನಿಶ ಇತಿಹಾಸಕಾರರು ಹೇಳುತ್ತಾರೆ. ಈ ರೀತಿಯಾಗಿ ತನ್ನ ಅಣ್ಣನನ್ನು ಪಾದಾ ಕ್ರಾಂತ ಮಾಡಿ, ಅವನ ರಾಜ್ಯವನ್ನು ಅಪಹರಿಸಿ, ಅಟಾಹುಲಪ್ಪಾನು ಸೇರೂದೇಶದ ಮೇಲೆ ತನ್ನ ಏಕಭ ಸಾಮ್ರಾಜ್ಯವನ್ನು ಸ್ಥಾಪಿಸುವಷ್ಟರಲ್ಲಿ ಪಿಝಾರೋನು ಸ್ಪಾನಿ ಸೈನ್ಯವನ್ನು ತೆಗೆದುಕೊಂಡು ಪೇರೂ ದೇಶದ ಮೇಲೆ ಸಾಗಿ ಹೋದನು. ಪೇರೂ ದೇಶದಲ್ಲಿ ಆಶುಭಸೂಚಕವಾದ ಅನೇಕ ಅಪಶಕುನಗಳಾಗಹತ್ತಿದವೆಂದು ಜನರು ಭಯಗ್ರಸ್ತರಾಗಿದ್ದರು. ವಿದ್ಯುತ್ ಶಕ್ತಿಗೆ ಸಮಾನವಾದ ಬಂದೂಕುಗಳೆಂಬ ವಿಲಕ್ಷಣವಾದ ಶಸ್ತ್ರಾಸ್ತ್ರಗಳನ್ನು ಧರಿಸಿದ ಅಶ್ವಾರೂಢರ ಸಮೇತನಾಗಿ ಪಿಝಾರೋನು ಟು೦ಬೇಝದಿಂದ ಹೊರಟು ಕುರ ಪಟ್ಟಣಾಭಿಮುಖವಾಗಿ ಬರುತ್ತಲಿದ್ದಾನೆಂಬ ಸುದ್ದಿಯು ಅಟಾಹುಲಪ್ಪಾನಿಗೆ ಮುಟ್ಟಿತು. ಆದರೆ, ಪಿಝಾರೋನಿಗೆ ಪ್ರತಿಬಂಧ ಮಾಡುವ ಯಾವ ಉಪಾಯವನ್ನೂ ಅವನು ಯೋಜಿಸಲಿಲ್ಲ. ಕಾಕ್ಸಮರ್ಕಾ ಹಾಗೂ ಪಿಝಾರೊ ಇವುಗಳ ಮಧ್ಯದಲ್ಲಿ ಅಂಡೀಜ ಪರ್ವತದ ಕೆಲವು ಸಾಲುಗಳಿದ್ದವು. ಈ ಪರ್ವತದ ಸಾಲುಗಳನ್ನು ಏರಿಳಿದು ಸಿರುತ್ತಾರೋನು ಕಾಕ್ಸಮುರ್ಕಾ ಸ್ಥಲವನ್ನು ಮುಟ್ಟತಕ್ಕವನಿದ್ದನು. ಪಿಝಾರೋನು ಗುಡ್ಡದೊಳಗಿನ ಬಿಕ್ಕಟ್ಟಿನ ಘಟ್ಟವನ್ನೇರಿ ಬರುವಾಗ ಅಟಾಹುಲಪ್ಪಾನ ಸೈನ್ಯದವರು ಅವನನ್ನು ನಿರೋಧಿಸಿದ್ದರೆ, ಇನ್ನೂರು ಸ್ಪಾನಿಆರ್ಡ ಶಿಪಾಯರನ್ನು ಗುಡ್ಡದಲ್ಲಿಯೇ ಮುಚ್ಚಿಬಿಡುವದು ಇಂಕಾ ಸೈನ್ಯಕ್ಕೆ ಶಕ್ಯವಾಗಿತ್ತು ಹೀಗೇನಲ್ಲ. ಸ್ಪಾನಿಶ ಆಶಾ ರೂಢರ ಕೈಯಲ್ಲಿದ್ದ ಬಂದೂಕಗಳ ಭೀತಿಯಿಂದಲೂ ಮತ್ತ್ಯಾವ ಕಾರಣದಿಂದಲೋ ಅಟಾಹುಲಪ್ಪಾನು ಪರ್ವತದ ಬಿಕ್ಕಟ್ಟಿನ ಕಂದರದಲ್ಲಿ ಪಿಝಾರೋನನ್ನ ಹಿಡಿದುಹಾಕುವ ಸುಲಭವಾದ ಯುಕ್ತಿಯನ್ನು ಕೂಡ ಯೋಜಿಸಲಿಲ್ಲ. ಪಿಝಾರೋನು ತಾನು ಹಿಡಿದುತಂದಿದ್ದ ಎಷ್ಟೋ ಇಂಡಿಯನ್ ರಲ್ಲಿ ಒಬ್ಬೊಬ್ಬರಿಗೆ ಸ್ಪಾನಿಶ ಭಾಷೆಯನ್ನು ಕಲಿಸಿ, ಆವರನ್ನು ದ್ವಿಭಾಷಿಗಳನ್ನಾಗಿ ಮಾಡಿದ್ದನು. ಆಟಾಹುಲಪ್ಪಾನು ದೊಡ್ಡ ಸೈನ್ಯವನ್ನು ತೆಗೆದುಕೊಂಡು ಕಾಕ್ಸಮರ್ಕಾದಲ್ಲಿ ಶತ್ರುಗಳ ಕೂಡ ಯುದ್ಧ ಮಾಡುವದಕ್ಕಾಗಿ ಸಿದ್ಧನಾಗಿದ್ದಾನೆಂಬ ಸುದ್ದಿ ಯು ಪಿಝಾರೋನಿಗೆ ತಿಳಿಯಿತು. ಎಷ್ಟೇ ಉತ್ಕೃಷ್ಟವಾದ ಶಸ್ತ್ರಾಸ್ತ್ರಗಳಿದ್ದರೂ ಇನ್ನೂರು ಶಿಪಾಯರು ಒಟಾ