ಪುಟ:ಬೆಳಗಿದ ದೀಪಗಳು.pdf/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೬

ಸಂಪೂರ್ಣ-ಕಥೆಗಳು

ದೊರೆಯಬೇಕೆಂದು ರಾಜನು ವ್ಯವಸ್ಥೆಯನ್ನು ಮಾಡಹತ್ತಿದನು. ಇಂಕಾ ರಾಜಮನೆತನದ ಪದ್ಧತಿಯಂತೆ, ಕೇಪಾಕನು ಕ್ವಿಟೋ ರಾಜಕನ್ನಿಕೆಯರಿ ಕೂಡ ಮಾಡಿಕೊಂಡ ವಿವಾಹವು ಆಶಾಸ್ತ್ರವಾಗಿತ್ತು. ಇ೦ಕಾಕುಲದ ಅಭಿಮಾನಿಗಳೆಲ್ಲ ಅಟಾಹುಲಪ್ಪಾನು ದಾಸೀಪುತ್ರನೆಂದು ತಿಳಿಯುತ್ತಿದ್ದರು. ಆದರೆ, ಕೇಪಾಕನು ಬಲಾಧ್ಯನೂ, ಅನಿಯಂತ್ರಿತ ೮ಾಜಪುರುಷನೂ ಆಗಿದ್ದರಿಂದ ಅವನು ಮಾಡಿದ್ದೆ ಕಾರಣವು, ಕಟ್ಟಿದ್ದೇ ತೋರಣವು ಎಂಬ ಶಕ್ತಿಯು ಅವನಲ್ಲಿತ್ತು. ಮರಣ ಸಮಯದಲ್ಲಿ ರಾಜನು ತನ್ನ ರಾಜ್ಯದಲ್ಲಿ ಎರಡು ವಿಭಾಗಗಳನ್ನು ಮಾಡಿ, ಹೌಸಕಾರನ ಕುಝ್ಕೋ ಪಟ್ಟಣದಲ್ಲಿದ್ದು ದಕ್ಷಿಣ ಸೀಮೆಯ ರಾಜ್ಯವನ್ನಾಳಬೇಕೆಂತಲೂ ತಾನು ಹೊಸದಾಗಿ ಗೆದ್ದ ಕ್ವಿಟಿ ಪ್ರಾಂತದ ಮೇಲೂ ಉರ ಸೀಮೆಯ ಪ್ರದೇಶದ ಮೇಲೂ ಅಟಾಹುಲಪ್ಪಾನ ರಾಜ್ಯವನ್ನು ಮಾಡಬೇಕೆಂತಲೂ ಇವನು ನಿರ್ಣಯಿಸಿದನು. ಈ ಪಾಕನ ಮರಣದ ನಂತರ ಐದು ವರ್ಷಗಳವರೆಗೆ ಈ ಉಭಯ ಬಂಧುಗಳು ತಮ್ಮ ತಮ್ಮ ರಾಜ್ಯವನ್ನು ಚನ್ನಾಗಿ ಆಳುತ್ತಿದ್ದನು. ಆದರೆ, ಮಹತ್ವಾಕಾಂಕ್ಷಿಯ ಕರ್ತೃತ್ವಶಾಲಿಯ ಆದ ಟಾಪಲಪ್ಪಾನು ತನ್ನ ಪ್ರಾಂತದ ಸೀಮಾಂತರದ ಮೇಲಿದ್ದ ಜನರ ಮೇಲೆ ದಂಡೆತ್ತಿ ಹೋಗಿ ಅವರ ಮೇಲೆ ತನ್ನ ಅಧಿಕಾರವನ್ನು ನಡಿಸಹತ್ತಿದನು, ಹೌಸಕಾರನ ಪ್ರಾಂತದ ಮೇಲೆ ಅವನೇನು ದಂಡೆತ್ತಿ ಹೋಗಿದ್ದಿಲ್ಲ. ಆದರೆ, ಅಟಾಹುಲಪ್ಪಾನು ದಾಸೀಪುತ್ರನ ತನಗಿಂತಲೂ ಚಿಕ್ಕವನೂ ಆಗಿರಲು, ತನಗಿಂತ ಹೆಚ್ಚು ಬಲಾಡ್ಯನಾಗಬೇಕೆ೦ಬ ಮಾತು ಹೌಸಕಾರನಿಗೆ ರುಚಿಸಲಿಲ್ಲ. ಈ ನಿಮಿತ್ತದಿಂದ ಆ ಉಭಯ ಬಂಧುಗಳಲ್ಲಿ ವಿತುಷ್ಟವುಂಟಾಗಿ ಕೊನೆಗೆ ಅದು ವಿಕೋಪವನ್ನು ಹೊಂದಿ ಬಂಧುಬಂಧುಗಳಲ್ಲಿ ಯುದ್ಧವು ಪ್ರಾರಂಭವಾಯಿತು. ಈ ಯುದ್ಧದಲ್ಲಿ ಹೌಸಕಾರನ ಪರಾಜಯವಾಗಿ, ಅವನು ತನ್ನ ತಮ್ಮನ ಬಂದಿವಾನನಾದನು, ಆಚಾಹುಲಪ್ಪಾನು ತನ್ನ ಅಣ್ಣನ ಇಂಕಾ ಸರದಾರರನ್ನೂ, ಅವರ ಕುಟುಂಬದೊಳಗಿನ ಜನರನ್ನೂ, ಹೌಸಕಾರನ ಅಂತಃಪುರದೊಳಗಿನ ಸ್ತ್ರೀಯರನ್ನೂ, ಬಾಲಕರನ್ನೂ ಕೂಡ ಕೊಂದುಹಾಕಿದನು, ಹಿಂದೆ ಮುಂದೆ ಹೌಸಕಾರನ ವತಿಯಿಂದ ರಾಜ್ಯಕ್ಕೆ ಯಾರಾದರೂ ತಾವು ಬಾಧ್ಯಸ್ಥರೆಂದು ಬಂದಾರೆಂಬ ಸಂಶಯದಿಂದ ಅಟಾಹುಲಫ್ಘಾನು ತನ್ನ ತಂದೆಯ ಹಾಗೂ ಅಣ್ಣನ ವಂಶಗಳನ್ನು ನಿರ್ಮಲವಾಗಿ