ಪುಟ:ಬೆಳಗಿದ ದೀಪಗಳು.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೫೫

ಪಲಟಣದ ಮುಂದೊಂದು ಬಾವಟಿ ಇಲ್ಲವೆ ನಿಶಾನಿ ಇರುತ್ತಿತ್ತು. ಅದರ ಮೇಲಿನ ಇಂದ್ರಧನುಷ್ಯದ ಆಕೃತಿಯು ಬಂಗಾರದ ತಂತಿಗಳಿಂದ ಮಾಡಲ್ಪಡುತ್ತಿತ್ತು.

ಈ ಪ್ರಕಾರ ಕೆಲವಂಶಗಳಿಂದ ಸುಧಾರಿಸಿದ ಆದರೆ ಅನೇಕಾಂಶಗಳಿಂದ ಹಿಂದುಳಿದ ಜನರ ಮೇಲೆ, ಪಿಝಾರೋನು ತಾನು ದಂಡೆತ್ತಿ ಹೋದಾಗ, ಅಟಾಹುಲಪ್ಪಾ ಎಂಬ ಹೆಸರಿನ ರಾಜನು ರಾಜ್ಯವನ್ನಾಳುತ್ತಿದ್ದನು. ಪಿಝಾರೋನು ಪೇರೂ ದೇಶಕ್ಕೆ ಹೋಗುವದರ ಪೂರ್ವದಲ್ಲಿ ಸ್ವಲ್ಪ ವರ್ಷಗಳಿಂದ ಅಟಾಹುಲಪ್ಪಾ ಹಾಗೂ ಅವನ ಮಲ ಅಣ್ಣನಾದ ಹೌಸಕಾರ ಈ ಉಭಯತರ ನಡುವೆ ಭಯಂಕರವಾದ ಯಾದವಿಯು-ಗೃಹಕಲಹವು- ಹಬ್ಬಿಕೊಂಡಿತ್ತು. ಅಟಾಹುಲಪ್ಪಾ ಹಾಗೂ ಹೌಸಕಾರ ಈ ಉಭಯತರೂ ಹುಯನಾಗೇಪಾಕನ ಮಕ್ಕಳು. ಹುಯನಾ ಕೇಪಾಕನು ಒಳ್ಳೇ ಪರಾಕ್ರಮಿಯಾದ ರಾಜನು. ಆವನು ಕ್ವಿಟೋ ಹಾಗೂ ಚಿಲೀ ಪ್ರಾಂತಗಳ ಮೇಲೆ ಇಂಕಾರಾಜರ ಅಧಿಕಾರವನ್ನು ಸ್ಥಾಪಿಸಿದ್ದನು; ಪೇರೂ ದೇಶದ ರಾಜಧಾನಿಯಾಗಿದ್ದ ಕುಝ್ಕೋ ಪಟ್ಟಣದಿಂದ ಕ್ವಿಟೋ ಪಟ್ಟಣದ ವರೆಗೆ ದೊಡ್ಡ ಮಾರ್ಗವನ್ನು ಕಟ್ಟಿದ್ದನು. ಇಂಕಾ ಜನರ 'ಕ್ವಿಚುಆ' ಭಾಷೆಯ ಪ್ರಸಾರವು ತನ್ನ ರಾಜ್ಯದ ತುಂಬ ಆಗಬೇಕಂಬದಾಗಿ ಅವನು ನಾನಾವಿಧ ಪ್ರಯತ್ನ ವನ್ನು ಮಾಡಿದನು. ಈ ರಾಜನು ರಾಜ್ಯವನ್ನಾಳುತ್ತಿದ್ದಾಗ ಇಂಕಾ ಜನರ ಸಾಮರ್ಥ್ಯ-ವೈಭವಗಳು ಪರಮಾವಧಿಯನ್ನು ಮುಟ್ಟಿದ್ದ ವೆಂದು ಆ ಪ್ರಾಂತದೊಳಗಿನ ಜನರ ಮತವಿದೆ. ಕ್ವಿಟೋ ಪ್ರಾಂತದ ಮೇಲೆ ಸ್ವತಂತ್ರವಾಗಿ ರಾಜ್ಯವನ್ನಾಳುತ್ತಿದ್ದ ರಾಜನ ಪರಾಭವವನ್ನು ಮಾಡಿ, ಅವನ ರಾಜ್ಯವನ್ನು ತನ್ನ ರಾಜ್ಯಕ್ಕೆ ಸೇರಿಸಿ, ಹುಯನಾ ಕೇಪಾಕನು ಪರಾಭೂತನಾಗಿದ್ದ ರಾಜನ ಸುಂದರಳಾದ ಕನ್ನೆಯನ್ನು ಮದುವೆಯಾಗಿದ್ದನು. ಈ ಮೊದಲು ಹುಯನಾಕೇಪಾಕನಿಗೆ ಇಂಕಾ ಕುಲದೊಳಗಿನ ಅನೇಕ ರಾಣಿಗಳಿದ್ದರು. ಇವರಲ್ಲೊಬ್ಬಳಿಗೆ ಹೌಸಕಾರನೆಂಬ ಮಗನಿದ್ದನು, ಇವನೇ ಯುವರಾಜನೆಂದು ಗೊತ್ತು ಮಾಡಲ್ಪಟ್ಟಿತ್ತು. ಕ್ವಿಟೋದ ರಾಜನ ಕನ್ನಿಕೆಯು ಕೂಡ ವಿವಾಹವಾದ ಬಳಿಕ, ಕೇಪಾಕನು ಅವಳ ಮೇಲೆ ಅತ್ಯಂತ ಪ್ರೇಮ ಮಾಡಹತ್ತಿದನು. ಮುಂದೆ ಅವಳಿಗೆ ಅಟಾಹುಲಪ್ಪಾ ಎಂಬ ಮಗನು ಹುಟ್ಟಿದನು. ಈ ಮಗನಿಗಾದರೂ ರಾಜ್ಯದ ಕೆಲವು ಭಾಗವು