ಪುಟ:ಬೆಳಗಿದ ದೀಪಗಳು.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೪

ಸಂಪೂರ್ಣ-ಕಥೆಗಳು

ಇವನು ಬಡವನು ಎಂಬ ಭೇದವೇ ಪೇರೂ ದೇಶದಲ್ಲಿದ್ದಿದ್ದಿಲ್ಲ. ಜನರಿಗೆ ಸುದ್ದಿ ಮುಂತಾದವುಗಳನ್ನು ಮುಚ್ಚಿ ಸುವದಕ್ಕಾಗಿ ಟಪಾಲಿನ ವ್ಯವಸ್ಥೆಯಾದರೂ ಇತ್ತು. ಯಾವ ಮಾರ್ಗಗಳಿಗೆ ಹಂಬೋಲ್ಕನಂಥ ವಿಖ್ಯಾತನಾದ ಜರ್ಮನ ಪ್ರವಾಸಿಯು, 'Most stupendous and useful (ಅತ್ಯಂತ ಅದ್ಭುತ ಹಾಗೂ ಅತ್ಯಂತ ಲೋಕೋಪಯೋಗಿ)' ಎಂಬ ಸಂಜ್ಞೆಯನ್ನು ಕೊಟ್ಟಿರುವನೋ, ಅಂಥ ಸುಂದರವಾದ ಮಾರ್ಗಗಳಿಂದ ಪ್ರತಿನಿತ್ಯ ಒಂದು ನೂರೈವತ್ತು ಮೈಲುಗಳ ವೇಗದಿಂದ ಟಪಾಲಿನ ವ್ಯವಹಾರವು ನಡೆಯುತ್ತಿತ್ತು. ಊರೂರಿಗೆ ಶಿಕ್ಷಣದ ವ್ಯವಸ್ಥೆಯಾದರೂ ಮಾಡಲ್ಪಟ್ಟಿತ್ತು. ನ್ಯಾಯದ ಪದ್ಧತಿಯಾದರೂ ಉತ್ತಮವಾಗಿತ್ತು. ಹಳ್ಳಿಗಳೊಳಗಿನ ಸಣ್ಣ ಸಣ್ಣ ಅಪರಾಧಗಳ ವಿಚಾರಣೆ ಯನ್ನು ಮಾಡುವದಕ್ಕಾಗಿ ಮ್ಯಾಜಿಸ್ಟ್ರೇಟರಿರುತ್ತಿದ್ದರು. ಹೆಚ್ಚಿನ ಅಪರಾಧಗಳ ವಿಚಾರಣೆಯು ನ್ಯಾಯಾಧೀಶರ ಮುಂದೆ ನಡೆಯುತ್ತಿತ್ತು. ಆಸೀಲಿನ ಪದ್ಧತಿಯು ಪ್ರಚಾರದಲ್ಲಿದ್ದಿದ್ದಿಲ್ಲ. ನ್ಯಾಯಾಧೀಶರನ್ನು ನೇಮಿಸುವ ಇಲ್ಲವೆ ಅವರನ್ನು ಪದಭ್ರಷ್ಟ ಮಾಡುವ ಅಧಿಕಾರವು ಬಾದಶಹನದು. ಹತ್ತು ಸಾವಿರ ಜನಸಂಖ್ಯೆಯುಳ್ಳ ಪ್ರಾಂತದ ಮೇಲೆ ಇಂಕಾ ಚಾತಿಯ ಸುಭೇದಾರನಿರುತ್ತಿದ್ದನು. ಅವನ ಕೈ ಕೆಳಗೆ ಕುರಾಕಾ ಎಂಬ ಚಿಕ್ಕ ಅಧಿಕಾರಿಯಿರುತ್ತಿದ್ದನು. 'ಫಿರ್ಯಾದಿ' ಬಂದ ಐದು ದಿವಸಗಳಲ್ಲಿ ನ್ಯಾಯಾಧೀಶನು ಅದರ ನಿರ್ಣಯವನ್ನು ಮಾಡಲೇಬೇಕೆಂಬ ನಿಯಮವಿತ್ತು.

ಇಂಕಾ ರಾಜನ ಸೈನ್ಯವು ಎರಡು ಲಕ್ಷವಾಗಿತ್ತು. ಬಂದೂಕಿನ ಮುದ್ದಿನ ಉಪಯೋಗವು ಇಂಕಾ ಜನರಿಗೆ ಗೊತ್ತಿದ್ದಿಲ್ಲ; ಬಿಲ್ಲು ಬರ್ಚಿ, ಬಾಣ, ಖಡ್ಗ, ಪರಶು, ಗದಾ, ಕವಣಿ ಮುಂತಾದವುಗಳೇ ಅವರ ಶಸ್ತ್ರಾಸ್ತ್ರಗಳಾಗಿದ್ದವು. ಕಬ್ಬಿಣವೆಂದರೇನೆಂಬುದನ್ನು ಅವರು ಸ್ವಪ್ನದಲ್ಲಿ ಕೂಡ ಆರಿಯರು. ಅವರ ಶಸ್ತ್ರಾಸ್ತ್ರಗಳೆಲ್ಲ ತಾಂಬ್ರದಿಂದಲೇ ಮಾಡಲ್ಪಟ್ಟಿದ್ದವು. ಸೈನ್ಯದೊಳಗಿನ ಜನರ ತಲೆಗಳಿಗೆ ಬೇರೆ ಬೇರೆ ಬಣ್ಣದ ಪಟ್ಟಿಗಳುಳ್ಳ ಮುಂಡಾಸಗಳೂ, ಮೈಯಲ್ಲಿ ದಪ್ಪಾದ ಅರಿವೆಯ ಗಿಡ್ಡ ಅಂಗಿಗಳೂ ಇರುತ್ತಿದ್ದವು. ಸರದಾರರ ಪೋಷಾಕ'ಕ್ಕೆ ಬಂಗಾರದ ಹಾಗೂ ವಜ್ರಮಾಣಿಕ್ಯಗಳ ಅಲಂಕಾರಗಳು ಹಚ್ಚಲ್ಪಡುತ್ತಿದ್ದವು. ಅವರ ಶಿರಸ್ತ್ರಾಣದ ಮೇಲೆ ಪಕ್ಷಿಗಳ ಸುಂದರವಾದ ಪುಚ್ಚಗಳಿಂದ ಮಾಡಲ್ಪಟ್ಟ ತುರಾಯಿಗಳಿರುತ್ತಿದ್ದವು. ಪ್ರತಿಯೊಂದು