ಪುಟ:ಬೆಳಗಿದ ದೀಪಗಳು.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೫೩

ಉಚ್ಚ ಉಚ್ಚ ಮನೆತನದೊಳಗಿನ ಕುಮಾರಿಕೆಯರು ಚಿಕ್ಕಂದಿನಿಂದ ಈ ದೇವಾಲಯದಲ್ಲಿ ವೃದ್ಧ ಸ್ತ್ರೀಯರ ಕೈಕೆಳಗೆ ಕೆಲಸಗಳನ್ನು ಮಾಡುತ್ತಿದ್ಧರು. ಆದರೆ, ಅವರೆಲ್ಲರೂ ಆಮರಣ ಅವಿವಾಹಿತರಾಗಿಯೇ ಉಳಿಯತಕ್ಕದ್ದೆಂಬ ನಿಯಮವಿದ್ದಿಲ್ಲ. ಯಾಕೆಂದರೆ, ಈ ಸೂರ್ಯೋಪಾಸಿಗೆಯರಲ್ಲಿ ಎಷ್ಟೋ? ಕುಮಾರಿಕೆಯರು ಇಂಕಾ ರಾಜನ ಕೂಡ ವಿವಾಹಿತರಾಗಿದ್ದರು. ಸರದಾರ ಮನೆತನಗಳೊಳಗಿನ ಇಂಕಾ ಪುರುಷರಾದರೂ ತಮ್ಮ ಅಂತಃಪುರದ ಸಲುವಾಗಿ ಸೂರ್ಯಮಂದಿರದೊಳಗಿನ ಸುಂದರರಾದ ಕುಮಾರಿಕೆಯರನ್ನ ಆರಿಸಿ ಒಯ್ಯುತ್ತಿದ್ದರು, ಇಂಕಾ ರಾಜನಿಗೂ ಅವನ ಸರದಾರರಿಗೂ ಏಕಕಾಲಕ್ಕೆ ಅನೇಕ ಹೆಂಡಂದಿರನ್ನು- ಪ್ರಸಂಗವಶಾತ್‌ ನೂರಾರು ಅಥವಾ ಸಾವಿರಾರು ಹೆಂಡಂದಿರನ್ನು-ಲಗ್ನ ಮಾಡಿಕೊಳ್ಳುವದಕ್ಕೆ ಪ್ರತಿಬಂಧವಿದ್ದಿದ್ದಿಲ್ಲ. ಆದರೆ, ಸರ್ವ ಸಾಧಾರಣ ಜನರಲ್ಲಿ ಒಂದೇ ಲಗ್ನ ಮಾಡಿಕೊಳ್ಳುವ ಪರಿಪಾಠವಿತ್ತು. ಪುರುಷರು ಇಪ್ಪತ್ತು ನಾಲ್ಕು ವರ್ಷದವರಾಗುವವರೆಗೂ, ಸ್ತ್ರೀಯರು ಇಪ್ಪತ್ತು ವರ್ಷದವರಾಗುವ ವರೆಗೂ ವಿವಾಹವನ್ನು ಮಾಡಿಕೊಳ್ಳ ಕೂಡದೆಂದು ನಿರ್ಬಂಧವಿತ್ತು. ವಿವಾಹಕ್ಕೆ ವಧು ವರರ ತಂದೆತಾಯಿಗಳ ಆನುಮತಿಯು ಅವಶ್ಯವಾಗಿ ಬೇಕಾಗುತ್ತಿತ್ತು. ಭಿನ್ನ ಭಿನ್ನ ಜಾತಿಯ ವಧು ವರರಲ್ಲಿ ಲಗ್ನಗಳಾಗುತ್ತಿಲ್ಲ. ಲಗ್ನ ದ ಮುಹೂರ್ತವು ಇಡಿಯ ವರ್ಷದಲ್ಲಿ ಒಂದೇ ದಿವಸವಿರುತ್ತಿತ್ತು. ಮನುಷ್ಯನು ಸತ್ತನೆಂದರೆ ಅವನನ್ನು ಅವನ ಆಲಂಕಾರಗಳ ಸಹಿತವಾಗಿ ಹುಗಿಯುತ್ತಿದ್ದರು. ದೊಡ್ಡ ದೊಡ್ಡ ರಾಜರ ಹಾಗೂ ಸರದಾರರ ನೂರಾರು ಹೆಂಡಂದಿಗು ಗಂಡನ ಮರಣದನಂತರ ಸಹಗಮನ ಮಾಡಿ ಒಮ್ಮೊಮ್ಮೆ ಸತಿಯಾದರೂ ಹೋಗುತ್ತಿದ್ದರು.

ಇಂಕಾ ರಾಜರು ಪ್ರಜರ ಸುಖಕ್ಕಾಗಿಯೂ, ಸೌಕರ್ಯಕ್ಕಾಗಿಯೂ ಅನೇಕ ಯೋಜನೆಗಳನ್ನು ಮಾಡಿದ್ದರು. ದೇಶದೊಳಗಿನ ಧಾನ್ಯವೆಲ್ಲ ಹಳ್ಳಿ ಹಳ್ಳಿಗಳಲ್ಲಿದ್ದ ಸರಕಾರೀ ಧಾನ್ಯಾಗಾರಗಳಲ್ಲಿ ಸಂಚಯಿಸಲ್ಪಡುತ್ತಿತ್ತು. ಲಾಮಾ ಕುರಿಗಳ ಉಣ್ಣಿಯನ್ನಾದರೂ ಇದೇ ರೀತಿಯಿಂದ ಸಂಚಯಿಸಿಡುವ ಪ್ರಘಾತವಿತ್ತು, ಧಾನ್ಯ ಹಾಗೂ ಇತರ ಪದಾರ್ಥಗಳನ್ನೆಲ್ಲ ಸರಕಾರೀ ಅಧಿಕಾರಿಗಳೇ ಜನರಿಗೆ ಹಂಚಿಕೊಡುತ್ತಿದ್ದರು. ಇದರಿಂದ, ಸರದಾರರ ಮನೆತನಗಳನ್ನಷ್ಟು ಬಿಟ್ಟು ಉಳಿದ ಪ್ರಜಾಜನರಲ್ಲಿ, ಇವನು ಶ್ರೀಮಂತನು,