ಪುಟ:ಬೆಳಗಿದ ದೀಪಗಳು.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೨

ಸಂಪೂರ್ಣ-ಕಥೆಗಳು

ವರೆಗೆ ಕೂಳು ನೀರಿಲ್ಲದೆ ಈ ಲಾವಾ ಪ್ರಾಣಿಯು ಗುಡ್ಡಗಾಡ ಪ್ರದೇಶದಲ್ಲಿ ಪ್ರವಾಸವನ್ನು ಮಾಡುತ್ತದೆ. ಅದಕ್ಕಾಗಿ ಸ್ಪಾನಿಆರ್ಡರು ಇದಕ್ಕೆ 'ಚಿಕ್ಕ ಒಂಟೆ ' ಎಂಬ ಹೆಸರು ಕೊಟ್ಟಿದ್ದಾರೆ. ಈ ಲಾಮಾ ಪಶುಗಳ ದೊಡ್ಡ ದೊಡ್ಡ ಹಿಂಡುಗಳು ಸೇರೂ ದೇಶದಲ್ಲಿ ದೊರೆಯುತ್ತವೆ. ಲಾಮಾ ಪ್ರಾಣಿಯ ಮೈಮೇಲಿರುವ ಉಣ್ಣೆಯಿಂದ ಬೆಚ್ಚಗಿನೆ ಹಾಗೂ ನೋಟಕ್ಕೆ ಸುಂದರವಾದ ಬಟ್ಟೆಗಳಾಗುತ್ತವೆ. ಇಂಕಾ ಕ್ಷತ್ರಿಯರು ಇವೇ ವಸ್ತ್ರಗಳನ್ನು ಉಪಯೋಗಿ ಸುತ್ತಿದ್ದರು. ಇಂಕಾ ಕ್ಷತ್ರಿಯರು ತಾವು ಸೂರ್ಯ ವಂಶಿಗಳೆಂದು ಮನ್ನಿಸು ತ್ತಿದ್ದರು, ಹಾಗೂ ಸೂರ್ಯನು ಅವರ ಆರಾಧ್ಯ ದೈವಕನಾಗಿದ್ದನು. ಇಂಕನ ವಿಸ್ತೀರ್ಣವಾದ ಸಾಮ್ರಾಜ್ಯದಲ್ಲಿ ಸೂರ್ಯೋಪಾಸನೆಯ ಸಲು ಅನೇಕ ದೇವಾಲಯಗಳು ಕಟ್ಟಿಸಲ್ಪಟ್ಟಿದ್ದವು. ಸೂರ್ಯನಂತೆ ಚಂದ್ರ, ಶುಕ್ರ ಮುಂತಾದ ಗ್ರಹಗಳನ್ನಾದರೂ ದೇವತೆಗಳೆಂದು ಅವರು ಪೂಜಿಸುತ್ತಿದ್ದರು ವಿ೦ಚು ಹಾಗೂ ಇಂದ್ರಧನುಷ್ಯಗಳಾದರೂ ದೈವೀ ಶಕ್ತಿಯ ಸೂಚಕಗಳೆಂದು ಅವು ಅವರಿಗೆ ಪೂಜ್ಯವಾಗಿದ್ದವು. ಫಲ, ಪುಪ್ಪ, ಧಾನ್ಯ, ಸುಗಂಧಿ ಪದಾರ್ಥಗಳು ಪೂಜಾದ್ರವ್ಯಗಳೆಂದು ತಿಳಿಯಲ್ಪಡುತ್ತಿ ದ್ದವು. ಕೆಲವು ಪ್ರಸಂಗಗಳಲ್ಲಿ ದೇವಾಲಯದಲ್ಲಿ ಪಶುಬಲಿಯನ್ನಾದರೂ ಅವರು ಕೊಡುತ್ತಿದ್ದರು; ಕ್ವಚಿತ ಪ್ರಸಂಗಗಳಲ್ಲಿ ಸುಂದರಳದ ಕುಮಾರಿ ಯನ್ನಾಗಲಿ, ಅರ್ಭಕವನ್ನಾಗಲಿ ಬಲಿಯೆಂದು ದೇವರಿಗೆ ಅರ್ಪಿಸುತ್ತಿದ್ದರು. ಆದರೆ, ಇದು ಎಂದಾದರೊಮ್ಮೆ ಅಪ್ಪಿ ತಪ್ಪಿ ಸಂಭವಿಸುತ್ತಿತ್ತು. ಸೂರ್ಯೊ ಪಾಸನೆಯ ಮಹತ್ವವು ಇಂಕಾನ ರಾಜ್ಯದಲ್ಲಿ ಅತಿಶಯವಾಗಿತ್ತು, ಕುರೋ ರಾಜಧಾನಿಯೊಳಗಿನ ಸೂರ್ಯನ ದೇವಾಲಯವೆಂವರೆ, ಅದೊಂದು ಸುವರ್ಣ ರತ್ನಖಚಿತವಾದ ಮಂದಿರವಾಗಿತ್ತು. ಇಂಕಾನ ರಾಜ್ಯದಲ್ಲಿ ದೇವಾ ಲಯಗಳನ್ನೂ, ಮಂದಿರಗಳನ್ನೂ ಸುಶೋಭಿತ ಮಾಡುವದರಲ್ಲಿ ಬಂಗಾರದ ಉಪಯೋಗವಾಗುತ್ತಿತ್ತು. ಇಂಕಾ ಎಂಬ ಕ್ಷತ್ರಿಯ ಜಾತಿಯ ಮನೆತನದ ವರಲ್ಲೆಲ್ಲ ಬಂಗಾರದ ಪಾತ್ರೆಗಳ ಹೊರತು ಆನ್ಯವಾದ ಪಾತ್ರೆಗಳು ಇರು ದ್ವಿಲ್ಲ. ಸೂರ್ಯನ ಪೂಜೆಗಾಗಿ ' ಸೂರ್ಯ ಕನ್ಯಕಾ ' ಎಂಬ ಕುಮಾರಿಕೆ ಯರಿರುತ್ತಿದ್ದರು. ರಾಜಧಾನಿಯಲ್ಲಿದ್ದ ಮುಖ್ಯವಾದ ಸೂರ್ಯಮಂದಿರದಲ್ಲಿ ೧೫೦೦ - ಕುಮಾರಿಯರು ಸೂರ್ಯೋಪಾಸಿಕೆಯರೆಂದು ಇಡಲ್ಪಟ್ಟಿದ್ದರು.