ಪುಟ:ಬೆಳಗಿದ ದೀಪಗಳು.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೫೧

ಎಂಬ ಸಂಜ್ಞೆಯಿತ್ತು. ಸರಕಾರ ದರಬಾರದ ದಪ್ತರವಲ್ಲ ಈ 'ಕ್ವಿಪ್ಸ' ಪದ್ಧತಿಯಿಂದಲೇ ಇಡಲ್ಪಡುತ್ತಿತ್ತು. ಬೇರೆ ಬೇರೆ ಬಣ್ಣಗಳ ದಾರಗಳಿಂದ ತಮ್ಮ ವಿಚಾರಗಳನ್ನು ಗ್ರಥಿತ ಮಾಡುವ ಪದ್ಧತಿಯು ಲೇಖನ ಕಲೆಯರಿಗಿಂತ ಅಸಂಸ್ಕೃತವಾದದ್ದೆಂಬ ಮಾತು ನಿಜವು. ಆದರೆ, ಇಂಕಾನ ರಾಜ್ಯದ ವ್ಯವಹಾರವೆಲ್ಲ ಇದೇ ಪದ್ಧತಿಯಿಂದ ಚನ್ನಾಗಿ ನಡೆಯುತ್ತಿತ್ತೆಂದು ಸ್ಪಾನಿಆರ್ಡರು ಸರಟಿಫಿಕೇಟ ಕೊಟ್ಟಿದ್ದಾರೆ. ಅಂದಮೇಲೆ : 'ಕ್ವಿಪ್ಸ" ಪದ್ಧತಿಯು ಸರ್ವತೋಪರಿ ಶ್ಯಾಜ್ಯವಾಗಿತ್ತೆಂದು ಅನ್ನುವ ಧಾರ್ಷ್ಟ್ಯ ವನ್ನು ಯುರೋಪಿಯನ್ ಇತಿಹಾಸಕಾರರೂ ಕೂಡ ಮಾಡುವದಿಲ್ಲ ಲೇಖನ ವಾಚನಗಳ ಕಲೆಗಳಲ್ಲಿ ಪೇರೂ ಜನರು ಹಿಂದುಳಿದಿದ್ದರೂ ಉಳಿದ ಸಂಗತಿಗಳಲ್ಲಿ ಅವರ ಪ್ರಗತಿಯು ಚನ್ನಾಗಿತ್ತು. ಒಕ್ಕಲತನದಲ್ಲಿ ಅವರು ಒಳಿತಾಗಿ ಪಾರಂಗತವನ್ನು ಹೊಂದಿದ್ದರು. ರೋಮನ್ ಜನರು ಪ್ರಾಚೀನ ಕಾಲದಲ್ಲಿ ಕಟ್ಟಿದಂಥ ದೊಡ್ಡ ದೊಡ್ಡ ಮಾರ್ಗಗಳು' ಪೇರ ದೇಶದಲ್ಲಿದ್ದವು ಸೇರೂ ದೇಶವು ಅಂಡೀಜ ಪರ್ವತದ ಅತ್ಯುಚ್ಚ ಶಿಖರಗಳಿಂದ ಇಳಿಯುತ್ತಿಳಿಯುತ್ತ ಪಾಸಿಫಿಕ್ ಮಹಾಸಾಗರದ ದಂಡೆಯ ವರೆಗೆ ಹಬ್ಬಿಕೊಂಡಿದೆ. ಇದರಿಂದ ಹೇರೂ ದೇಶದಲ್ಲಿ ಮಾರ್ಗ ನಡೆಯುವದು ವಸ್ತುತಃ ಬಹಳ ಕಠಿಣವಾಗಿರಬೇಕು. ಆದರೂ ಪರ್ವತದ ಹೊದರುಗಳೊಳಗಿಂದ ಶಿಖರದ ವರೆಗೆ ದೊಡ್ಡ ದೊಡ್ಡ ಮಾರ್ಗಗಳನ್ನು ಇಂಕಾ ಜನರು ಕಟ್ಟಿದ್ದಾರೆ. ಒಕ್ಕಲತನದ ಅಭಿವೃದ್ಧಿಗಾಗಿ ದೊಡ್ಡ ದೊಡ್ಡ ಕಾಲುವೆಗಳನ್ನು ಕಟ್ಟುವ ಕಲೆ ಯಾದರೂ ಅವರಿಗೆ ವಿಶೇಷವಾಗಿ ಗೊತ್ತಿತ್ತು, ಇಂಕಾ ಜನರು ಸೇರಿ ದೇಶದಲ್ಲಿ ಕಟ್ಟಿದ ಕಾಲುವೆಗಳು ಭೂಮಿಯ ಮೇಲೆ ಹರಿಯದೆ, ಭೂಮಿಯ ಸೃಷ್ಣ ಭಾಗದ ಕೆಳಗಿಂದ ಹರಿಯುತ್ತವೆ. ಈ ಕಾಲುವೆಯೊಳಗಿನ ನೀರು ಒಕ್ಕಲಿಗರಿಗೆ ತೊಂದರೆಯಿಲ್ಲದಂತೆ ದೊರೆಯುತ್ತಿತ್ತು. ಪೇರೂ ದೇಶದಲ್ಲಿ ಆನೆ, ಕುದುರೆ, ಒಂಟೆ ಮುಂತಾದ ಪಶುಗಳು ದೊರೆಯುತ್ತಿದ್ದಿಲ್ಲ; ಆದರೂ ಲಾಮಾ ಎಂಬ ಹೆಸರಿನದೊಂದು ಪಶುವಿತ್ತು. ಅದಕ್ಕೆ ಕುರಿಯನ್ನ ಬೇಕೋ ಒಂಟೆಯನ್ನಬೇಕೋ ಎಂಬುದರ ಬಗ್ಗೆ ಸ್ಪಾನಿಶ ಜನರ ಮನಸ್ಸಿನಲ್ಲಿ ಸಂದೇಹ ಉತ್ಪನ್ನವಾಯಿತು. ಈ ಲಾಮಾ ಪಶುವಿನ ಮೈ ಮೇಲೆ ಮೃದುವಾದ ಹಾಗೂ ಬೆಚ್ಚಗಾದ ಉಣ್ಣೆಯು ದೊರೆಯುತ್ತದೆ. ಒಂಟೆಯಂತೆ ಎಂಟೆಂಟು ದಿವಸಗಳ