ವಿಷಯಕ್ಕೆ ಹೋಗು

ಪುಟ:ಬೆಳಗಿದ ದೀಪಗಳು.pdf/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೫೦
ಸಂಪೂರ್ಣ ಕಥೆಗಳು

ಗಿನ ಒಂದು ಪಂಚಮಾಂಶಭಾಗವು ಸ್ಪೇನದ ಅರಸನದೆಂದು ಬೇರೆ ತೆಗೆಯಲ್ಪಟ್ಟು, ಉಳಿದ ದ್ರವ್ಯವು ಪಿಝಾರೋನ ಕೈ ಕೆಳಗಿನವರಲ್ಲಿ ಹಂಚಲ್ಪಟ್ಟಿತು. ಈ ಪ್ರಕಾರ ಪ್ರಥಮಾರಂಭದಲ್ಲಿಯೇ ತನ್ನ ಸೈನಿಕರನ್ನು ಬೆಳ್ಳಿ ಬಂಗಾರದಿಂದ ಸಂತೋಷಪಡಿಸಿ ಪೇರೂ ದೇಶದ ಮೇಲೆ ಸಾಮ್ರಾಜ್ಯಸತ್ತೆಯನ್ನು ನಡೆಸುತ್ತಿದ್ದ ಇಂಕಾ ಎಂಬ ಹೆಸರಿನ ಕ್ಷತ್ರಿಯರ ಮುಖ್ಯ ರಾಜಧಾನಿಯಾಗಿದ್ದ ಕುಝ್ಕೋ ಪಟ್ಟಣದ ಮೇಲೆ ಹಲ್ಲಾ ಮಾಡುವ ವಿಚಾರವನ್ನು ಪಿಝಾರೋನು ಮಾಡಿದನು. ಈ ರಾಜಧಾನಿಯ ಪಟ್ಟಣವು ಅಂಡೀಜ ಪರ್ವತದ ಇಳಿವಾರದಲ್ಲಿ ಸಮುದ್ರ ದಂಡೆಯಿಂದ ದಕ್ಷಿಣಕ್ಕೆ ಒಳ್ಳೇ ಅಂತರದ ಮೇಲಿತ್ತು. ಟುಂಬೇಝದಿಂದ ೧೦೦ ಮೈಲುಗಳ ಅಂತರದ ಮೇಲಿರುವ ಒಂದು ಆರೋಗ್ಯಕರವಾದ ಪ್ರದೇಶದಲ್ಲಿ ತನ್ನ ಠಾಣ್ಯವನ್ನೂರಿ ಅವನು ಅದಕ್ಕೆ ಸಾನಮಿಗ್ಯೂಏಲ (ಸೇಂಟ ಮಾಯಕೇಲ) ಎಂಬ ಖ್ರಿಸ್ತಿ ಸಾಧು ಪುರುಷನ ಹೆಸರು ಕೊಟ್ಟನು. ಈ ಸ್ಥಳದಿಂದ ಸ ೧೩೫೨ ನೇ ಇಸ್ವಿಯ ನವ್ವ೦ಬರ ತಿ೦ಗಳದ ೨೪ನೇ ತಾರೀಖಿನ ದಿವಸ ಪಿಝಾರೋನು ತನ್ನ ಸಂಗಡ ೨೦೦ ಶಿಪಾಯವನ್ನು ತೆಗೆದುಕೊಂಡು ಇಂಕಾನ ಬಲಾಢವಾದ ಸಾಮ್ರಾಜ್ಯದ ಮೇಲೆ ದಂಡೆತ್ತಿ ಹೊರಟನು.

ಪಿಝಾರೋನ ಈ ಮುಂದಿನ ವೃತ್ತಾಂತವನ್ನು ಕೊಡುವದರ ಮುಂಚಿತವಾಗಿ ಅವನು ಯಾವ ದೇಶದ ಮೇಲೆ ಸಾಗಿಹೋಗಬೇಕೆಂದು ಮಾಡಿದ್ದನೋ ಆ ದೇಶದ, ಅಲ್ಲಿಯ ಲೋಕಸ್ಥಿತಿಯ ಹಾಗೂ ಅಲ್ಲಿಯ ಸಾಮರ್ಥ್ಯದ ಇಲ್ಲವೆ ಬಲಾಬಲದ ದಿಗ್ದರ್ಶನವನ್ನು ಅಲ್ಪದರಲ್ಲಿ ಮಾಡುವದು ಅವಶ್ಯವಾಗಿದೆ. ಇಂಕಾನ ರಾಜ್ಯದೊಳಗಿನ ಜನರು ಅಜ್ಞಾನಿಗಳಾಗಿರದೆ, ಒಳಿತಾಗಿ ಸುಧಾರಿಸಿದವರಾಗಿದ್ದರು. ಅವರಿಗೆ ಲೇಖನ ಕಲೆಯು ಅವಗತವಿದ್ದಿಲ್ಲ. ಆದರೂ ಲಿಪಿಯ ಬದಲು ಬಣ್ಣದ ದಾರಗಳಿಗೆ ಗಂಟುಗಳನ್ನು ಹಾಕಿ,ಹಾಗೂ ಭಿನ್ನ ಭಿನ್ನ ಬಣ್ಣಗಳಿಂದ ಭಿನ್ನ ಭಿನ್ನ ಅರ್ಥಗಳ ಕಲ್ಪನೆಗಳನ್ನಾಗಲಿ, ಪದಾರ್ಥಗಳನ್ನಾಗಲಿ ತೋರಿಸತಕ್ಕದ್ದೆಂಬ ಪ್ರಕಾರದ ಪದ್ಧತಿಯನ್ನು ನಿಶ್ಚಯಿಸಿ, ಅವರು ಗಣಿತವನ್ನು ಮಾಡುತ್ತಿದ್ದರು. ಈ ಭಿನ್ನ ಭಿನ್ನ ಬಣ್ಣದದಾರಗಳ ಹೆಣಿಕೆಯಿಂದ ಅವರ ಪತ್ರವ್ಯವಹಾರವೂ ಪರಸ್ಪರರ ವಿಚಾರ ವಿನಿಮಯದ ವ್ಯವಹಾರವೂ ನಡೆಯುತ್ತಿದ್ದವು. ಈ ಪದ್ಧತಿಗೆ 'ಕ್ವಿಪ್ಸ'