ಪುಟ:ಬೆಳಗಿದ ದೀಪಗಳು.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೆರೂ ಹಾಗೂ ಪಿಝಾರೋ

೧೪೯

ಈ ಮಾತು ಕೇಳಿ ಯಾವದೇ ದೇಶದ ಅರಸನ ಬಾಯಿಗೆ ನೀರುಬಿಡುವದು ಸ್ವಾಭಾವಿಕವಾದದ್ದು. ಚಾರ್ಲಸ ರಾಜನು ಪಿಝಾನೋನನ್ನು ಪೇರೂ ದೇಶದ ಗವರ್ನರ ಹಾಗೂ ಕ್ಯಾಪ್ಟನ್ ಜನರಲ್‌ನನ್ನಾಗಿ ನೇಮಿಸಿದನು ಪಿಝಾರೋನ ಸಂಗಡಿಗನಾದ ಅಲ್ಮಾಗ್ರೋನು ಟುಂಬೇಝದ ಕಮಾಂಡರನಾಗಿ ನೇಮಿಸಲ್ಪಟ್ಟನು. ಪಿಝಾರೋನು ಎರಡುನೂರಾ ಐವತ್ತು ಶಿಪಾಯರ ಪಲಟಣವನ್ನು ಸಿದ್ಧ ಮಾಡತಕ್ಕದ್ದು ; ಪಲಟಣಿಗೆ ಬೇಕಾಗುವ ತೋಪುಗಳ ಹಾಗೂ ಮದ್ದುಗುಂಡುಗಳ ಸಹಾಯವನ್ನು ಸ್ಪೇನ ಸರಕಾರದವರು ಮಾಡತಕ್ಕದ್ದು; ಹಾಗೂ ಪಾಸಾಮಾಕ್ಕೆ ಹೋಗಿ ಮುಟ್ಟಿದ ಬಳಿಕ ಆದ ತಿಂಗಳಗಳಲ್ಲಿಯೇ ಪಿಝಾರೋನು ಪೇರೂ ದೇಶದ ಮೇಲೆ ಅವಶ್ಯವಾಗಿ ದಂಡೆತ್ತಿ ಹೋಗಬೇಕು; ಮು೦ತಾದ ಕರಾರಗಳಾದವು. ಎರಡುನೂರೈವತ್ತು ಶಿಪಾಯವಿರದೊಂದು ಪಲಟಣಿಯ ಸಹಾಯ್ಯದಿಂದ ಪೆರೂದಂಥ ವಿಸ್ತೀರ್ಣವಾದದ್ದೊಂದು ಪ್ರದೇಶವನ್ನು ಅಂಕಿತ ಮಾಡಿಕೊಳ್ಳಲು ಪುರುಷನೊಬ್ಬನು ಸಿದ್ಧನಾಗಬೇಕೆಂಬ ಮಾತು ಕೇಳುವದಕ್ಕೆ ಕೂಡ ವಿಸ್ಮಯಕಾರಕವಾದದ್ದು. ಆದರೆ, ಈಶ್ವರೇಚ್ಛೆಯ ಅಘಟಿತ ಲೀಲೆಗಳಿಗನುಸರಿಸಿ ಹಲಕೆಲವು ಸಂಗತಿಗಳು ಸಂಭವಿಸಿ ಬರತಕ್ಕವಾಗಿರುವದರಿಂದ, ಅಪ್ರಯೋಜಕಗಳೆಂದು ಕಂಡುಬರುವ ಸಾಧನಗಳಿಂದ ಅದ್ಭುತ ಸಂಗತಿಗಳು ಸಂಭವಿಸುತ್ತವೆಂದೆನ್ನಲಾರದೆ ಇರಲಾಗದು.

ಸ್ಪೇನ ದೇಶದ ರಾಜನಿಂದ ಪಿರಾರೋನು ಅಪ್ಪಣೆಯನ್ನು ಪಡೆದುಕೊಂಡು ಪಾನಾಮಾಕ್ಕೆ ಮರಳಿ ಬಂದನು; ಸನ್ ೧೫೩೧ನೇ ಇಸ್ವಿಯ ಜಾನೇವಾರಿಯಲ್ಲಿ ಪೇರೂ ದೇಶವನ್ನು ಅಂಕಿತ ಮಾಡಿಕೊಳ್ಳುವ ಉದ್ದೇಶದಿಂದ ದಂಡೆತ್ತಿ ಹೊರಟನು. ಟುಂಬೇಝ ಪಟ್ಟಣವನ್ನು ಮುಟ್ಟುವದರ ಪೂರ್ವದಲ್ಲಿಯೇ ಅವನು ತನ್ನ ಜನರನ್ನು ಕೋಕ ಎಂಬ ಪ್ರಾಂತದಲ್ಲಿ ಇಳಿಸಿದನು. ಪಿಝಾರೋನ ಸಂಗಡ ಈ ಸಾರೆ ೬೦-೭೦ ಕುದುರೆಗಳ ಸವಾಠರಿದ್ದರು. ಈ ಸವಾರರ ಭೀತಿಗಾಗಿ ಸಣ್ಣ ಪುಟ್ಟ ಹಳ್ಳಿಗಳೊಳಗಿನ ಜನರು ಓಡಹತ್ತಿದರು. ಹಳ್ಳಿಗಳು ತೆರವಾದಕೂಡಲೆ ಅವುಗಳನ್ನು ಅವನು ಸುಲಿದನು. ಈ ಸುಲಿಗೆಯಲ್ಲಿ ಹೇರಳವಾಗಿ ಬೆಳ್ಳಿ ಬಂಗಾರವೂ, ಪೂಗಿಫಲದಷ್ಟು ದೊಡ್ಡ ದೊಡ್ಡ ರತ್ನಗಳೂ ಅವನಿಗೆ ದೊರೆತವು. ಈ ಸುಲಿಗೆಯೊಳ