ಪುಟ:ಬೆಳಗಿದ ದೀಪಗಳು.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೮

ಸಂಪೂರ್ಣ-ಕಥೆಗಳು

ದನು. ಆದರೆ, ಈ ಮೊದಲನೆಯ ಪರ್ಯಟನದಲ್ಲಿ ಅವನ ಹತ್ತರ ನೂರು ನೂರೈವತ್ತು ಜನರೇ ಇದ್ದರು, ಇಂಕಾನ ಸಾಮ್ರಾಜ್ಯವು ಎರಡುಸಾವಿರದ ಐನೂರು ಮೈಲುಗಳ ವರೆಗೆ ಉದ್ದವಾದ ಹಾಗೂ ಮೂರು ನೂರೈವತ್ತು ಮೈಲುಗಳ ವರೆಗೆ ಆಗಲವಾದ ವಿಸ್ತಿರ್ಣ ಪ್ರದೇಶದ ಮೇಲೆ ಹಚ್ಚಿದ್ದು ಅದರ ಜನಸಂಖ್ಯೆಯು ಕೋಟ್ಯಾಂತರವಾಗಿತ್ತು. ಬಂದೂಕುಗಳನ್ನು ಅವರು ಅರಿಯವವರಾಗಿದ್ದರೂ ಇಂಕನ ಹರ ಬಲಾಢ ಸೈನ್ಯವಿದ್ದು ಅವನ ಪಟ್ಟಣಗಳು ಕೋಟೆಯ ಗೋಡೆಗಳಿ೦ದ ಪರಿವೇಷ್ಟಿತವಾಗಿದ್ದೇವೆ. ಈ ಸಂಗತಿಯು ಪಿಝಾರೋನ ಲಕ್ಷ್ಯಕ್ಕೆ ಬಂದದರಿಂದ, ಯುದ್ಧವನ್ನು ಮಾಡಿ ದೇಶವನ್ನು ಗೆದೆಯುವ ತನ್ನ ಉದ್ದೇಶವು ಹೊರ ಬೀಳ ಕೂಡದೆಂಬ ವಿಚಾರಮಾಡಿ, ಅವನು ತನ್ನ ಕೈ ಕೆಳಿಗಿನ ಜನರ ಸುವರ್ಣತೃಷ್ಠೆಯನ್ನು ತತ್ಕಾಲದ ಮಟ್ಟಿಗೆದಬ್ಬಿಟ್ಟು, ಮುಂದೆ ಹೆಚ್ಚಿನ ಸಿದ್ಧತೆಯನ್ನು ಮಾಡಿಕೊಂಡು ಬಲಾಡ್ಯವಾದ ಸೈನ್ಯವನ್ನು ತನ್ನ ಸಂಗಡ ತೆಗೆದುಕೊಂಡು ಬಂದು, ಆ ಬಳಿಕ ಈ ಸುವರ್ಣ ಭೂಮಿಯಲ್ಲಿರುವ ಜನರ ಮೇಲೆ ತನ್ನ ವರ್ಚಸ್ವವನ್ನು ಪ್ರಸ್ಥಾಪಿತ ಮಾಡುವ ನಿಶ್ಚಯವನ್ನು ಮಾಡಿ, ಪಿಝಾರೋನು ಈ ಸಾರೆ ಹಿಂದಿರುಗಿದನು, ಮುರಳಿ ಹೋಗುವಾಗ ಆವನು ತನ್ನ ಸಂಗಡ ಆ ದೇಶದೊಳಗಿನ ಹಲಕಲವು ಬಂಗಾರದ ಬೇರೆ ಬೇರೆ ಮಾದರಿಯ ಪಾತ್ರೆಗಳನ ಲಾಮಾ ಜಾತಿಯ ಕೆಲವು ಕುರಿಗಳನ್ನೂ ತೆಗೆದುಕೊಂಡು ಹೋದನು

ಸನ್ ೧೫೨೮ರಿ೦ದ ೧೫೩ ರ ವರೆಗೆ ಪಿಝಾರೋನು ಸ್ಪೇನದಲ್ಲಿದ್ದನು. ಹೊಸದಾಗಿ ಶೋಧಿಸಿದ ದೇಶದ ವರ್ಣನೆಯನ, ಅಲ್ಲಿಯ ಅಪಾರವಾದ ಸಂಪತ್ತಿಯ ವೃತ್ತಾಂತವನ್ನೂ ಪಿಝಾರೋನು ಆ ಕಾಲದ ಸೈನದ ಅರಸನಾಗಿದ್ದ ಐದನೇ ಚಾರ್ಲ ಸನಿಗೆ ಹೇಳಿದನು. ಹರ್ನಾಂಡೊ ಕೊರ್ಟೆಸನು ಮೆಕ್ಸಿಕೊ ದೇಶವನ್ನು ಆ೦ಕಿತ ಮಾಡಿಕೊಂಡು, ಅದನ್ನು ಸ್ಪೇನದ ರಾಜ್ಯಕ್ಕೆ ಸೇರಿಸಿದಂತೆ, ತನಗಾದರೂ ಸರಕಾರದಿಂದ ಸ್ವಲ್ಪ ಸಹಾಯವುದೆರೆದರೆ, ಮೆಕ್ಸಿಕೊದಕಿಂತ ಹೆಚ್ಚು ಸಂಪನ್ನವಾದ ಹಾಗೂ ಹೆಚ್ಚು ವಿಸ್ತಿರ್ಣವಾದ ಪೇರೂ ದೇಶವನ್ನೂ ಇಂಕಾ ಎಂಬ ಸೂರ್ಯವಂಶೀ ಜನರ ಸಾಮ್ರಾಜ್ಯವನ್ನೂ ಸ್ಪೇನದ ರಾಜಮನೆತನದ ಚರಣಕ್ಕೆ ಅರ್ಪಿಸುವೆನೆಂಬ ಪ್ರತಿಜ್ಞೆಯನ್ನು ಅವನು ಅರಸನ ಮುಂದೆ ಮಾಡಿದನು, ಪಿಝಾರೋನ