ಪುಟ:ಬೆಳಗಿದ ದೀಪಗಳು.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೪೭

ಅವನಿಗೆ ಏನೂ ಕಾಣಲೇ ಇಲ್ಲ. ಇಂಕಾನ ತೋಟವಂತೂ ಕೇಳುವದೇನು? ಅಲ್ಲಿ ನಿಜವಾದ ಹಣ್ಣು ಹಂಪಲಗಳ ನೆರೆಯಲ್ಲಿ ಬೆಳ್ಳಿ ಬಂಗಾರದ ಕೃತ್ರಿಮ ಫಲಗಳು ತೂಗಾಡುತ್ತಿದ್ದವು. ಮಾಲಿನೋನು ಮರಳಿ ಬಂದು, ತಾನು ನೋಡಿದ ಸಂಗತಿಗಳನ್ನೆಲ್ಲ ಹಡಗದ ಮೇಲಿದ್ದ ಪಿಝಾರೋನಿಗೆ ವಿದಿತ ಮಾಡಿದನು. ತಾನು ಮಾಡಿದ ಅನುಮಾನದಕಿಂತ ಸ್ವಲ್ಪ ಹೆಚ್ಚು ಬೆಳ್ಳಿ ಬಂಗಾರವು ಮಾಲಿನೋನ ದೃಷ್ಟಿಗೆ ಬಿದ್ದಿರುವದರಿಂದ ಅವನ ಕಣ್ಣು ತಿರುಗಿ ನೋಡಿದ ಸಂಗತಿಗಳ ವರ್ಣನೆಯನ್ನು ಅವನು ಆತಿಶಯೋಕ್ತಿಯಿಂದ ಮಾಡುತ್ತಿರಬಹುದೆಂದು ಪಿಝಾರೋನಿಗೆ ಸಂಶಯ ಹುಟ್ಟಿ, ಅವನು ತನ್ನ ಸಂಗಡದಲ್ಲಿದ್ದ ಬೇರೊಬ್ಬ ಶಾಂತಲೆಯ ಗೃಹಸ್ಥನಿಗೆ ಪಟ್ಟಣದಲ್ಲಿ ಸಂಚರಿಸಿ ಬರುವದಕ್ಕೆ ಹೇಳಿದನು. ಈ ಗೃಹಸ್ಥನಾದರೂ, ಮೊದಲನೆಯವನಂತೆ, ನೋಡಿದ ಸಂಗತಿಗಳ ವರ್ಣನೆಯನ್ನು ವಿಲಕ್ಷಣವಾಗಿ ಮಾಡಹತ್ತಿದನು. ದೇವಾಲಯದ ಚತ್ತಂತೂ ಬಂಗಾರದ ದಪ್ಪಾದ ತಗಡುಗಳಿಂದ ಆಚ್ಛಾದಿತ ಮಾಡಲ್ಪಟ್ಟದೆಂದು ಅವನು ಹೇಳಹತ್ತಿದನು. ಆಗಂತ ತಾವು ನಿಜವಾದ ರಾವಣನ ಲ೦ಕಿಗೆ ಬಂದಿವೆವೆಂದು ಸಿರುಾರೋನಿಗೆ ಎನಿಸಹತ್ತಿತು. ಟು೦ಬೇಝದಲ್ಲಿಯ ಇಂಕನಿಗೂ ಇತರ ಜನರಿಗೂ 'ಬಂದೂಕ ' ಮೊದಲಾದ ಆಯುಧಗಳ ವಿಷಯವಾಗಿ ಏನೂ ಜ್ಞಾನವಿದ್ದಿಲ್ಲ. ಕುದುರೆಯನ್ನ೦ತೂ ಅವರು ಎಂದೂ ನೋಡಿದ್ದಿಲ್ಲ. ಏರುತಾರೋನ ಹಡಗದಲ್ಲಿ ಕೆಲವು ಕುದುರೆಗಳಿದ್ದವು. ಕುದುರೆಯ ಮೇಲೆ ಕುಳಿತುಕೊಂಡ ಮನುಷ್ಯನು ಭರದಿಂದ ಹೋಗುವದನ್ನು ನೋಡಿದಾಗಂತೂ ಕುದುರೆ ಹಾಗೂ ಕುದುರೆಯ ಸವಾರನು ಒತ್ತಟ್ಟಿಗೆ ಕೂಡಿದ ಇದೊಂದು ವಿಲಕ್ಷಣವಾದ ಪ್ರಾಣಿಯಂತಲೇ ಅವರ ತಿಳುವಳಿಕೆಯಾಯಿತು ! ಕುದುರೆ ಬೇರೆ, ಕುದುರೆಯ ಮೇಲಿನ ಸವಾರನು ಬೇರೆ ಎಂಬ ಕಲ್ಪನೆಯಾದರೂ ಅವರಿಗೆ ಆಗಲಿಲ್ಲ! ಬಂದೂಕಿನ ಮದ್ದೆಂದರೇನೆಂಬದು ಯಾರಿಗೆ ಗೊತ್ತಿಲ್ಲ, ಹಾಗೂ ಕುದುರೆಯ ಮೇಲೆ ಕೂಡುವ ಕಲೆಯು ಯಾರ ಸ್ವಪ್ನದಲ್ಲಿ ಕೂಡ ಇಲ್ಲ, ಇಂಥ ಪೇರುವಿನ ಜನರನ್ನು ಕ್ಷಣಾವಕಾಶದಲ್ಲಿ ಗೆಲ್ಲಬಹುದೆಂದು ಪಿಝಝಾರೋನ ಮನವರಿಕೆಯಾಗಿ, ಕಟ್ಟಿಗೆಯಂತೆ ಬಂಗಾರವು ಏಪುಲವಾಗಿದ್ದ ದೇಶವು ಸ್ವಲ್ಪ ಪ್ರಯಾಸದಿಂದ ತಮ್ಮ ಕೈವಶವಾಗುವದೆಂಬ ಕಲ್ಪನಾತರಂಗಗಳ ಆನಂದದಲ್ಲಿ ಅವನು ಕ್ಷಣಮಾತ್ರ ಈ ಸಾಡಹತ್ತಿ