ಪುಟ:ಬೆಳಗಿದ ದೀಪಗಳು.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೬

ಸಂಪೂರ್ಣ-ಕಥೆಗಳು

ಇವನಿಗೆ ತಿಳಿಸಿದ್ದೇನಂದರೆ, “ ನಿಮ್ಮ ದೇಶದ ಮೇಲೆ ನಮ್ಮ ದೇಶದ ವರ್ಚಸ್ವವನ್ನು ಸ್ಥಾಪಿಸುವದಕ್ಕಾಗಿಯೂ, ನಿಮ್ಮ ಧರ್ಮದ ಮೇಲೆ ನಮ್ಮ ಧರ್ಮದ ವರ್ಚಸ್ವವನ್ನು ಸ್ಥಾಪಿಸುವದಕ್ಕಾಗಿ ನಾವು ಇಷ್ಟು ದೂರ ಬಂದಿರುತ್ತೇವೆ." ಪಿಝಾರೋನ ಈ ಭಾಷಣವನ್ನು ಕೇಳಿ ಈ ಇಂಕನಿಗೆ ಆಶ್ಚರ್ಯವೆನಿಸಿತು ಯಾಕೆಂದರೆ, ನೆರುವಾರನ ಸಂಗಡ ನೂರು ನೂರಾಐವತ್ತು ಜನರೇ ಇದ್ದರು ಅಂದ ಮೇಲೆ ಇಂಕಾನ ಮೇಲೆ ವರ್ಚಸ್ವವನ್ನು ಕೂಡಿಸುವಪಿಝಾರೋನ ಮನೀಷೆಯು ಕೇವಲ ಮೂರ್ಖತನದ್ದೆಂದು ಆ ಇಂಕಾನಿಗೆ ತೋರಿತು. ಮೇಲಾಗಿ ಇಂಕಾ ಜನರು ಸೂರ್ಯೋಪಾಸಕರಾಗಿದ್ದು ಸೂರ್ಯನಿಗಿಂತ ಹೆಚ್ಚಿನ ದೇವರಿದುವದು ಶಕ್ಯವಿಲ್ಲ; ಆ೦ದಮೇಲೆ ಇ೦ಕಾನ ಪ್ರಜದ ಮೇಲೆ ಈ ಹೊಸ ಧರ್ಮದ ವರ್ಚಸ್ವವು ಕೂಡುವದು ಆಶಕ್ಯವಾದದ್ದೆಂದು ಅವನು ಯೋಚಿಸಿದನು. ಆದರೆ, ಇವನು ಕಿರುತಾರೋನಿಗೆ ಯಾವ ಮಾತನ್ನೂ ಸ್ಪಷ್ಟವಾಗಿ ಮಾತಾಡಿ ತೋರಿಸಲಿಲ್ಲ. ಹಡಗದ ಮೇಲೆ ಬಂದಿದ್ದ ಈ ಜಿಂಕಾನಿಗೆ ಸಿರುತ್ತಾರೆಯೇನು ಆತಿಥ್ಯವನ್ನು ಮಾಡಿದನು. ಪಿಝಾರೋನಿಂದ ಕೊಡಲ್ಪಟ್ಟ ಯುರೋಪಿಯನ್ ಮಾದರಿಯ ಮದ್ಯವು ತನಗೆ ವಿಶೇಷವಾಗಿ ರುಚಿಸಿತೆಂದು ಇ೦ಕಾನು ಹೇಳಿದನು. ಇಂಕನು ಬಂದರದ ಮೇಲಿಂದ ಮರಳಿ ಹೋಗುವಾಗ ಕಿರುತಾರೋನು ಅವನಿಗೊಂದು ಉಕ್ಕಿನ ಕೊಡಲಿಯನ್ನು ಕಾಣಿಕೆಯಾಗಿ ಕೊಟ್ಟನು. ಇಂಕಾ ಜನರ ದೇಶದಲ್ಲಿ ಬಂಗಾರವು ಅಪರಂಪಾರವಾಗಿತ್ತು. ಆದರೆ ಅವರಿಗೆ ಕಬ್ಬಿಣವೆಂದರೇನೆಂಬದು ಕೂಡ ಗೊತ್ತಿದ್ದಿದ್ದಿಲ್ಲ. ಟುಂಬೇರು ಪಟ್ಟಣದ ಪರಿಸ್ಥಿತಿಯನ್ನು ಅವಲೋಕಿಸುವದಕ್ಕೆ ಪಿಝಾರೋನು ತನ್ನ ಸಂಗಡಿಗರಾದ ಮಾಲಿನೊ ಎಂಬವನಿಗೆ ಹೇಳಿ ಅವನನ್ನು ಆ ಪಟ್ಟಣಕ್ಕೆ ಕಳುಹಿಕೊಟ್ಟನು ಮಾಲಿನೋನು ಇಡಿಯ ಊರುತುಂಬ ತಿರುಗಾಡಿ, ಊರೊಳಗಿನ ದೇವಾಲಯಗಳನ್ನೂ ಕುರಾಕಾ ಆಧಿಕಾರಿಯು ಇರುತ್ತಿದ್ದ ಬಂಗಲೆಯನ್ನೂ ನೋಡಿದನು; ಹಾಗೂ ಇಂಕಾನು ಇಳಿದು ಕೊಂಡಿದ್ದ ತೊಟಪ ಕೂಡ ಅವನು ಪ್ರವೇಶಿಸಿದನು. ಕುರಾಕಾನಂಥ ಸಣ್ಣ ಅಧಿಕಾರಿಯ ಮನೆಯೊಳಗಿನ ತಿನ್ನುಣ್ಣುವ ಹಾಗೂ ನೀರು ಕುಡಿಯುವ ಪಾತ್ರೆಗಳೆಲ್ಲ ಬೆಳ್ಳಿ-ಬಂಗಾರಗಳಿಂದ ಮಾಡಲ್ಪಟ್ಟಿದ್ದವು, ದೇವಾಲಯಗಳಲ್ಲಿ ನೋಡಿದ ಬಂಗಾರದ ಹೊರತು