ಪುಟ:ಬೆಳಗಿದ ದೀಪಗಳು.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೪೫

ದೊಳಗಿಂದ ನಮ್ಮ ದೇಶಕ್ಕೆ ಈ ಜನರು ಬಂದರೆಂದಮೇಲೆ, ಇವರು ನಿಸ್ಸಂಶಯವಾಗಿ ದೇವ, ಯಕ್ಷ, ಗಂಧರ್ವ, ಕಿನ್ನರರಂಥ ಉಚ್ಚಕೋಟಯವರಾಗಿರಬೇಕೆಂದು ಆವನು ತರ್ಕಿಸಿ, ಅನೇಕ ಪ್ರಕಾರದ ಹಣ್ಣು ಹಂಪಲುಗಳ ಬುಟ್ಟಿಗಳನ್ನು ಕಾಣಿಕೆಗಾಗಿ ಡೋಣಿಯಲ್ಲಿ ತುಂಬಿಕೊಂಡು, ಸ್ಪ್ಯಾನಿಕ ಹಡಗದಲ್ಲಿದ್ದ ಪಿರುತಾರೋನ ದರ್ಶನಕ್ಕೆ ಹೋದನು. ಲಾಮಾ ಎಂಬ ಹೆಸರಿನ ದೊಡ್ಡ ಜಾತಿಯ ಟಗರುಗಳು ಆ ದೇಶದಲ್ಲಿ ದೊರೆಯುತ್ತವೆ. ಈ ಜಾತಿಯದೊಂದು ಟಗರನ್ನಾದರೂ ಅವನು ಒರು ಕಾಲೋನಿಗೆ ಕಾಣಿಕೆಯಾಗಿ ಕೊಟ್ಟನು. ಸಿರುಾರೋನು ತದೇಶೀಯರಲ್ಲಿ ಒಬ್ಬಿಬ್ಬರನ್ನು ಹಿಡಿದು ತನ್ನ ಸಂಗಡ ತಂದಿದ್ದನು, ಪಿರಾರೋನು ಹಿಂದಕ್ಕೊಮ್ಮೆ ನಿರುಪಾಯವುಳ್ಳವನಾಗಿ ಆರು ಏಳು ತಿಂಗಳಗಳವರೆಗೆ ಒಂದು ನಡುಗಡ್ಡೆಯಲ್ಲಿ ವಾಸ್ತವ್ಯ ಮಾಡಿಕೊಂಡಿದ್ದ ಸಂಗತಿಯು ವಾಚಕರಿಗೆ ಗೊತ್ತೇ ಉಂಟು. ಆ ನಡುಗಡ್ಡೆಯ ಸುತ್ತಲಿನ ಪ್ರದೇಶದಲ್ಲಿ ವಾಸಮಾಡಿಕೊಂಡಿದ್ದ ಇಂಡಿಯನ ಕುಲಕ್ಕೆ ಈ ಉಭಯರೂ ಸೇರಿದವರಾಗಿದ್ದರು. ಇವರಲ್ಲಿ ಒಬ್ಬನಿಗೆ ಸೇರದೊಳಗಿನ ಇಂಕಾ ಕ್ಷತ್ರಿಯರ ಭಾಷೆಯು ತಿಳಿಯುತ್ತಿತ್ತು. ಈ ದ್ವಿಭಾಷಿಯ ದ್ವಾರದಿಂದ ಪಿರು ಸಾರೋ ಹಾಗೂ ಹೇಗೂ ಜನರ ಅಧಿಕಾರಿಯಾದ ಕುರಕಾ ಇವರ ಸಂಭಾಷಣಕ್ಕೆ ಪ್ರಾರಂಭವಾಯಿತು, ಕುರಾಕಾ ಸಿರುತ್ತಾರೋನಿಗೆ "ನೀವು ಯಾರು, ಎಲ್ಲಿಯವರು, ಯಾವ ಕಾರ್ಯಾರ್ಥ ಇಲ್ಲಿಗೆ ಬಂದಿರುವಿರಿ ” ಮುಂತಾದ ಪ್ರಶ್ನೆಗಳನ್ನು ಕೇಳಿದನು. ನಾವು ಇಲ್ಲಿಂದ ಬಹಳ ದೂರದಲ್ಲಿರುವ ಸ್ಪೇನ ದೇಶದ ನಿವಾಸಿಗಳಾಗಿದ್ದು, ನಿಮ್ಮ ದೇಶದ ಜನರ ಪರಿಚಯವನ್ನು ಮಾಡಿಕೊಳ್ಳುವದಕ್ಕಾಗಿಯೂ ನಿಮ್ಮ ಕೂಡ ಸ್ನೇಹಸಂಬಂಧವನ್ನು ಬೆಳೆಸುವದಕ್ಕಾಗಿಯ ಇಷ್ಟು ಕಷ್ಟಾಪೇಷ್ಟೆಗಳನ್ನು ಸಹಿಸಿ ಇಲ್ಲಿಗೆ ಬಂದಿರುವನೆ?೦ದು ಏರುತಾರೋನು ಅವನಿಗೆ ತಿಳಿಸಿದನು, ಹೊಸದಾಗಿ ಬಂದಿರುವ ಈ ದೂರದೇಶದ ಅತಿಥಿಗಳು ಬಹಳೇ ಸಂಭಾವಿತರಾಗಿರುವರೆಂದು ಪಾಪ, ಆ ಬಡ ಭೋಳಿ ಕುರಾಕಾನ ತಿಳುವಳಿಕೆಯಾಯಿತು. ಇದೇ ಕಾಲಕ್ಕೆ ಇಂಕಾ ಕ್ಷಾತ್ರ ಕುಲಕ್ಕೆ ಹೊಂದಿದ ಒಬ್ಬ ಸರದಾರನಾದರೂ ಸಹಜವಾಗಿ ಟುಂಬೇರುಪಟ್ಟಣಕ್ಕೆ ಬಂದಿದ್ದನು. ಇವನಾದರೂ ತಿರುವಾನ ಭೆಟ್ಟಿಗೆ ಹೋದನು. ಆಗ್ಗೆ ಪಿರಾರೋನು ಸ್ವಲ್ಪ ಸ್ಪಷ್ಟವಾಗಿಯೇ ಮಾತಾಡಿ