ಪುಟ:ಬೆಳಗಿದ ದೀಪಗಳು.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೪೪

ಸಂಪೂರ್ಣ-ಕಥೆಗಳು

ತಾನಂತೂ ತನ್ನ ಜೀವದಲ್ಲಿ ಜೀವವಿರುವವರೆಗೆ ಪೇರೂ ದೇಶವನ್ನು ಗೊತ್ತು ಹಚ್ಚದ ಹೊರತು ಒಂದು ಹೆಜ್ಜೆಯನ್ನಾದರೂ ಹಿಂದೆ ಇಡಲಿಕ್ಕಿಲೆಂದು ಹೇಳಿ, ಆ ಗೆರೆಯ ದಕ್ಷಿಣ ದಿಕ್ಕಿಗೆ ಹಾರಿ, ಹುಟ್ಟಿ, ಗಂಡಸರಾದವರು ತನ್ನ ಮಾರ್ಗವನ್ನು ಅವಲಂಬಿಸುವರು, ಕೈಯಲ್ಲಿ ಬಳೆಗಳನ್ನಿಕ್ಕಿದವರು ಉತ್ತರ ದಿಕ್ಕಿಗೆ ಹೋಗಿ ಕೋಳಿಗಳಂತೆ ಗೂಡು ಸೇರುವರೆಂದು ಪಿರಾರೋನು ಗಟ್ಟಿಸಿ ಒದರಿದ ಕೂಡಲೆ, ಅವನ ಅನುಯಾಯಿಗಳೊಳಗಿನ ದಷ್ಟಪುಷ್ಟರೂ ತರುಣರೂ ಆಗಿದ್ದ ನಾವಿಕರು ಅವನನ್ನು ಹಿಂಬಾಲಿಸಿದರು. ನಿನ್ನ ಉಸಾ ಬರಿಯು ಬೇಡೆಂದು ನೆಲಹಿಡಿದು ಕೂತ ೫೦-೬೦ ನಾವಿಕರಲ್ಲಿ ಕೆಲವರಿಗೆ ಅಲ್ಲಿಯೇ ಒಂದು ನಡುಗಡ್ಡೆಯಲ್ಲಿ ಇರಹೇಳಿ ಉಳಿದವರನ್ನು ನಾನಾಮಾಕ್ಕೆ ಅಟ್ಟಿ ಕೊಟ್ಟನು. ಗೊರ್ಗೊನಾ ನಡುಗಡ್ಡೆಯಲ್ಲಿ, ತನ್ನ ಮುಂದಿನ ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಂಡು ಸಿರುಾರೋನು ತನ್ನ ಹಡಗವನ್ನು ದಕ್ಷಿಣ ದಿಶಾಭಿಮುಖವಾಗಿ ಸಾಗಿಸಿದನು. ಈ ಸಾರೆ ಬಿರುಗಾಳಿಯ ತೊಂದರೆಯಿಲ್ಲದರಿಂದ ಇಪ್ಪತ್ತನೇ ದಿವಸ ಈ ಹಡಗವು ಪೇರೂ ದೇಶದೊಳಗಿನ ಗ್ವಾಯಕೀಲ ಎಂಬ ಆಖಾತವನ್ನು ಸೇರಿತು. ಮುಂದೆ ಸ್ವಲ್ಪಾವಧಿಯಲ್ಲಿಯೇ ಏರುತಾರೋನ ಹಡಗವು ಟುಂಬೇರು ಎಂಬ ಬಂದರದಲ್ಲಿ ಬ ದು ನಿಂತಿತು. ಟುಂಬೇರುವು ಜನರಿ೦ದ ಒಳಿತಾಗಿ ತುಂಬಿದ ಪಟ್ಟಣವಾಗಿತ್ತು. ಅದರ ಸಾ೦ಪತ್ರಿಕಸ್ಥಿತಿಯಾದರೂ ಸಮಾಧಾನಕಾರಕವುಳ್ಳದ್ದಾಗಿತ್ತು. ಈ ಪಟ್ಟಣವನ್ನು ನೋಡಿದ ಕೂಡಲೆ ಪಿಝಾರೋನಿಗೆ ಅತ್ಯಂತ ಆನಂದವಾಗಿ, ಪೇರೂ ದೇಶದ ಸುವಲ್ಲ ಭೂಮಿಯಲ್ಲಿ ತನ್ನನ್ನು ತಂದದ್ದಕ್ಕಾಗಿ ಈಶ್ವರನ ಕೃಪೆಯನ್ನು ಕೊಂಡಾಡಿದನು. ಸ್ವಾನಿಆರ್ಡ ಜನರ ಹಡಗಗಳಂಥ ಹಡಗಗಳನ್ನು ಪೇರೂವಿನ ಜನರು ಮೊದಲು ಎಂದೂ ನೋಡಿದ್ದಿಲ್ಲ. ಸಿರುತ್ತಾರೋನ ಹಡಗವು ಬಂದರದಲ್ಲಿ ಬಂದ ಕಡಲೆ, ಬಾಲಾ' ಎಂಬ ಚಿಕ್ಕ ಚಿಕ್ಕ ಡೋಣಿಗಳಲ್ಲಿ ಕುಳಿತುಕೊಂಡು ಆ ಜನರು ಆ ದೊಡ್ಡ ಹಡಗದ ಸುತ್ತು ಗುಂಪಾದರು. ಟುಂಬೇರುದ ಸುತ್ತಲಿನ ಪ್ರಾಂತದ ಮೇಲೆ ಕುರಾಕಾ' ಎಂಬವನೊಬ್ಬ ಇಂಕಾರಾಜನ ಅಧಿಕಾರಿಯಿದ್ದನು, ಸ್ಪಾನಿಆರ್ಡರ ಹಡಗವನ್ನು ನೋಡಿ ಇದೊಂದು ನೀರಿನ ಮೇಲೆ ತೇಲುವ ಕಿಲ್ಲೆ ಯಂತಲೇ ಅವನಿಗೆ ಜ್ಞಾನವಾಗಿ, ಇ೦ಥ ದೊಡ್ಡದಾದ ತೇಲುವ ಕಿಲ್ಲೆಯನ್ನು ತೆಗೆದುಕೊಂಡು, ಈ ಆಮರ್ಯಾದಿತವಾದ ಮಹಾಸಾಗರ