ಪುಟ:ಬೆಳಗಿದ ದೀಪಗಳು.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೇರೂ ಹಾಗೂ ಪಿಝಾರೋ

೧೪೩

ತನ್ನ ಸಂಗಡಿಗರಲ್ಲಿ ತೀರ ಅಸಂತುಷ್ಟರಾಗಿದ್ದ ಕೆಲವರನ್ನು ಅವನು ಪನಾಮಾಕ್ಕೆ ಹೋಗದೊಟ್ಟನು. ಗಟ್ಟಿಯಾದದ್ದೊಂದು ಹೊಸ ಹಡಗವನ್ನೂ ಕೆಲವು ನಾವಿಕರನ್ನೂ ತನ್ನ ಸಹಾಯಕ್ಕಾಗಿ ಕಳಿಸಿಕೊಡುವದಕ್ಕೆ ತನ್ನ ಸಹಾಣ್ಮಕನಾದ ಆಲ್ಮಾಗೊನಿಗೆ ಅವನು ವಿನಂತಿಯನ್ನು ಮಾಡಿಕೊಂಡನು. ಈ ನಡುಗಡ್ಡೆಯಲ್ಲಿ ಏರುತಾರೋನು ಆರು ತಿಂಗಳ ವರೆಗೆ ಇದ್ದನು. ಅವನ ಹತ್ತಿರದಲ್ಲಿದ್ದ ಜನರೆಲ್ಲರೂ ತೀರ ಜರ್ಜರಿತರಾಗಿದ್ದರು. ಆಲ್ಮಾಗ್ರೋನು ಸಹಾಯ್ಯಕನಾಗಿ ಬಂದಾಗ ಪಿಝಾರೋನ ಅನುಯಾಯಿಗಳಲ್ಲಿ ಎಷ್ಟೋ ಜನರು ಮರಳಿ ಹೋಗಲು ಉದ್ಯುಕ್ತರಾದರು. ಯಾಕಂದರೆ, ಪಿಝಾರೋನ ಬೆನ್ನು ಹತ್ತಿ ನಿಷ್ಕಾರಣವಾಗಿ ಕಷ್ಟ ಪಡುವ, ಕಾಡಜನರ ಕೂಡ ನಿರರ್ಥಕವಾಗಿ ಹೋರಾಡುವ, ಹಾಗೂ ಕೊನೆಯಲ್ಲಿ ಯಾವದಾದರೊಂದು ಭಯಾನಕವಾದ ನಿರ್ಜನ ನಡುಗಡ್ಡೆಯಲ್ಲಾಗಲಿ, ಸಮುದ್ರ ದಂಡೆಯ ಮೇಲಿನ ಘೋರವಾದ ಅರಣ್ಯದಲ್ಲಾಗಲಿ, ಚಳಿಜ್ವರಕ್ಕೆ ಬಲಿಯಾಗಿ ಜೀವಕ್ಕೆ ಎರವಾಗುವ ಮಾರ್ಗವು ಯಾರಿಗೂ ಮಾನ್ಯವಾಗಿದ್ದಿಲ್ಲ. ಆದರೆ, ಪಿಝಾರೋನು ದೃಢನಿಶ್ಚಯಿಯೂ, ಹಟವಾದಿಯ ಆದ್ದರಿಂದ ಮರಳಿ ಹೋಗುವದಕ್ಕೆ ಅವನು ಒಪ್ಪಿಕೊಳ್ಳಲಿಲ್ಲ. ಅವನು ತಳವೂರಿಕೊಂಡು ನಿಂತಿದ್ದ ಪ್ರದೇಶದೊಳಗಿನ ಕಾಡು ಇಂಡಿಯನ್ ಜನರಿಂದ, ದಕ್ಷಿಣದಿಕ್ಕಿಗೆ ದೂರ ಅಂತರದಲ್ಲಿ ಬಲಾಢವಾದದ್ದೊಂದು ಸಮೃದ್ಧಿ ಮಯವಾದ ರಾಜ್ಯ ವಿರುವದೆಂದು ಕೇಳಿಕೊಂಡಿದ್ದನು. ಸುಮಾರು ಸಾವಿರ ಮೈಲಗಳ ಅಂತರದ ಮೇಲಿರುವ ಈ ರಾಜ್ಯದ ಶೋಧವಾಗಿ ಅಲ್ಲಿಯ ಸಂಪತ್ತಿಯು ತನ್ನ ಹಸ್ತಗತವಾಗುವ ವರೆಗೆ ತನ್ನ ಪರ್ಯಟನದ ಸಾರ್ಥಕವಾದಂತಾಗುವದಿಲ್ಲೆಂದು ಸಿರುತ್ತಾರೋನು ತಿಳಿದಿದ್ದನು. ಅವನು ತನ್ನ ಕೈಯ್ಯಲ್ಲಿದ್ದ ಖಡ್ಗದಿಂದ ಭೂಮಿಯ ಮೇಲೆ ಒಂದು ಗೆರೆಯನ್ನು ಕೊರೆದು, ಈ ಗೆರೆಯ ಉತ್ತರ ದಿಕ್ಕಿನಲ್ಲಿ ಸುಖವೂ, ಸನಾಧನವೂ, ಸ್ವಾಸ್ಥ್ಯವೂ ಆದರೆ ಸರ್ವಸಾಧಾರಣವಾದ ಬಡತನವಿರುವವೆಂತಲ ದಕ್ಷಿಣ ದಿಕ್ಕಿನಲ್ಲಿ ದುಃಖವೂ, ಕಷ್ಟವೂ, ಭೀತಿಯೂ ಇದ್ದಾಗ್ಯೂ ಕೆಲವು ಕಾಲವನ್ನು ಸಂಕಟಗಳಲ್ಲಿ ಕಳೆದರೆ, ಪೇರೂ ದೇಶದೊಳಗಿನ ಆಪರಂಪಾರವಾದ ಸಂಪತ್ತಿಯು ತಮ್ಮ ಕೈವಶವಾಗುವದಲ್ಲದೆ, ಕದಾಚಿತ್ ತಮಗೆ ಶಕ್ಯವಾಗಬಹುದೆಂತಲೂ ವರ್ಣಿಸಿ, ಅಲ್ಲಿ ರಾಜ್ಯವನ್ನು ಕೂಡ ಸ್ಥಾಪಿಸುವದು